ಬೆಂಗಳೂರು: ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯಲ್ಲಿ (ಕೆಎಸ್‌ಎಫ್‌ಇಎಸ್)ಉಳಿಕೆ ಮೂಲ ವೃಂದ ಹಾಗೂ ಕಲ್ಯಾಣ ಕರ್ನಾಟಕ ವೃಂದದಲ್ಲಿ ಖಾಲಿ ಇರುವ ಅಗ್ನಿಶಾಮಕ ಮತ್ತು ಅಗ್ನಿಶಾಮಕ ಠಾಣಾಧಿಕಾರಿ ಹುದ್ದೆಗಳ ನೇರ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅರ್ಹ ಪುರುಷ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
ಅಗ್ನಿಶಾಮಕ 470 ಹುದ್ದೆ (ಆರ್‌ಪಿಸಿ 460, ಕೆಕೆ 10), ಅಗ್ನಿಶಾಮಕ ಠಾಣಾಧಿಕಾರಿ 20 (ಆರ್‌ಪಿಸಿ 16, ಕೆಕೆ 04)ಸೇರಿದಂತೆ ಒಟ್ಟು 486 ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ನಡೆಯಲಿದೆ.
ಪ್ರಮುಖ ದಿನಾಂಕಗಳು:
- ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭದ ದಿನಾಂಕ- ನವೆಂಬರ್ 23
- ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಡಿಸೆಂಬರ್ 22
- ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ- ಡಿಸೆಂಬರ್ 23
- ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ನಡೆಯುವ ದಿನಾಂಕ- 08-01-2027
ಶೈಕ್ಷಣಿಕ ಅರ್ಹತೆ:
ಅಗ್ನಿಶಾಮಕ ಹುದ್ದೆಗೆ; ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ (SSLC) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. (ಉದಾಹರಣೆಗೆ: CBSE/ICSE 10ನೇ ತರಗತಿ, ಕೆ.ಓ.ಎಸ್, ಅಥವಾ ಎನ್.ಐ.ಓ.ಎಸ್ ಉನ್ನತ ಪ್ರೌಢ ಶಿಕ್ಷಣ ಕೋರ್ಸ್).
ಅಗ್ನಿಶಾಮಕ ಠಾಣಾಧಿಕಾರಿ ಹುದ್ದೆಗೆ; ನೇರ ನೇಮಕಾತಿ ಅಭ್ಯರ್ಥಿಗಳಿಗೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ರಸಾಯನಶಾಸ್ತ್ರ (Chemistry) ವಿಷಯದೊಂದಿಗೆ ವಿಜ್ಞಾನ ಪದವಿ (B.Sc) ಉತ್ತೀರ್ಣರಾಗಿರಬೇಕು.
ಸೇವಾ ನಿರತ ಅಭ್ಯರ್ಥಿಗಳಿಗೆ: ಯಾವುದೇ ವಿಷಯದಲ್ಲಿ ಪದವಿ (Degree) ಉತ್ತೀರ್ಣರಾಗಿರಬೇಕು.
ವಯೋಮಿತಿ:
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳು ಈ ಕೆಳಗಿನ ವಯೋಮಿತಿಯನ್ನು ಹೊಂದಿರಬೇಕು (ಸರ್ಕಾರದ ಆದೇಶದಂತೆ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆಯನ್ನು ಅಳವಡಿಸಲಾಗಿದೆ):
ಅಗ್ನಿಶಾಮಕ ಹುದ್ದೆಗೆ (ಕನಿಷ್ಠ 18 ವರ್ಷ ತುಂಬಿರಬೇಕು); ಸಾಮಾನ್ಯ ಅರ್ಹತೆ(ಜಿಎಂ) ಅಭ್ಯರ್ಥಿಗಳಿಗೆ ಗರಿಷ್ಠ 31 ವರ್ಷಗಳು, ಪ.ಜಾತಿ, ಪ. ಪಂಗಡ ಹಾಗೂ ಹಿಂದುಳಿದ ವರ್ಗಗಳ(ಪ್ರವರ್ಗ-1, 2ಎ, 2ಬಿ, 3ಎ, 3ಬಿ) ಅಭ್ಯರ್ಥಿಗಳಿಗೆ ಗರಿಷ್ಠ 33 ವರ್ಷಗಳು.
ಅಗ್ನಿಶಾಮಕ ಠಾಣಾಧಿಕಾರಿ ಹುದ್ದೆಗೆ (ಕನಿಷ್ಠ 21 ವರ್ಷ ತುಂಬಿರಬೇಕು); ನೇರ ನೇಮಕಾತಿ ಅಭ್ಯರ್ಥಿಗಳಿಗೆ: ಸಾಮಾನ್ಯ ಅರ್ಹತೆಗೆ ಗರಿಷ್ಠ 31 ವರ್ಷಗಳು ಹಾಗೂ ಮೀಸಲಾತಿ ವರ್ಗಗಳಿಗೆ ಗರಿಷ್ಠ 33 ವರ್ಷಗಳು.
ಸೇವಾ ನಿರತ ಅಭ್ಯರ್ಥಿಗಳಿಗೆ: ಸಾಮಾನ್ಯ ಅರ್ಹತೆಗೆ ಗರಿಷ್ಠ 43 ವರ್ಷಗಳು ಹಾಗೂ ಮೀಸಲಾತಿ ವರ್ಗಗಳಿಗೆ ಗರಿಷ್ಠ 45 ವರ್ಷಗಳು.
ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಅವರು ಸಲ್ಲಿಸಿದ ಸೇವಾ ಅವಧಿಯೊಂದಿಗೆ ಹೆಚ್ಚುವರಿ 3 ವರ್ಷಗಳ ರಿಯಾಯಿತಿ ಇರುತ್ತದೆ.
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳ ಆಯ್ಕೆಯನ್ನು ಈ ಕೆಳಗಿನ ಹಂತಗಳ ಮೂಲಕ ಮಾಡಲಾಗುತ್ತದೆ:
- ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ (ಎಸ್‌ಎಸ್‌ಎಲ್‌ಸಿಯಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಓದದ ಅಭ್ಯರ್ಥಿಗಳಿಗೆ)
- ದೇಹದಾರ್ಢ್ಯತೆ ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆ (ಪಿಎಸ್‌ಟಿ & ಪಿಇಟಿ)
- ಲಿಖಿತ ಪರೀಕ್ಷೆ (ಅಗ್ನಿಶಾಮಕ ಠಾಣಾಧಿಕಾರಿ ಹುದ್ದೆಗೆ ಮಾತ್ರ)
- ವೈದ್ಯಕೀಯ ಪರೀಕ್ಷೆ
- ದಾಖಲಾತಿ ಪರಿಶೀಲನೆ
ಸಂಬಳ:
- ಅಗ್ನಿಶಾಮಕ ಹುದ್ದೆಗೆ ₹37,500 – ₹76,100
- ಅಗ್ನಿಶಾಮಕ ಠಾಣಾಧಿಕಾರಿ ₹54,175 – ₹99,400
ಅರ್ಜಿ ಶುಲ್ಕ:
- ಸಾಮಾನ್ಯ ಅರ್ಹತೆ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ₹300/-
- ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಪ್ರವರ್ಗ-1 ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇರುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ https://cetonline.karnataka.gov.in/kea/indexnew ಮೂಲಕ ನಿಗದಿತ ಅವಧಿಯೊಳಗೆ ಆನ್‌ಲೈನ್ ಅರ್ಜಿ ಸಲ್ಲಿಸಬಹುದಾಗಿದೆ.
ಮುಖ್ಯ ಲಿಂಕ್‌ಗಳು:
| ಅಗ್ನಿಶಾಮಕ ಠಾಣಾಧಿಕಾರಿ (ಆರ್‌ಪಿಸಿ) ಅಧಿಕೃತ ಅಧಿಸೂಚನೆ ಪಿಡಿಎಫ್ | ಡೌನ್ಲೋಡ್ ಮಾಡಿ |
| ಅಗ್ನಿಶಾಮಕ(ಆರ್‌ಪಿಸಿ) ಅಧಿಕೃತ ಅಧಿಸೂಚನೆ ಪಿಡಿಎಫ್ | ಡೌನ್ಲೋಡ್ ಮಾಡಿ |
| ಅಗ್ನಿಶಾಮಕ ಠಾಣಾಧಿಕಾರಿ (ಆರ್‌ಪಿಸಿ) ಅಧಿಕೃತ ಅಧಿಸೂಚನೆ ಪಿಡಿಎಫ್ | ಡೌನ್ಲೋಡ್ ಮಾಡಿ |
| ಅಗ್ನಿಶಾಮಕ (ಆರ್‌ಪಿಸಿ) ಅಧಿಕೃತ ಅಧಿಸೂಚನೆ ಪಿಡಿಎಫ್ | ಡೌನ್ಲೋಡ್ ಮಾಡಿ |
| ಆನ್‌ಲೈನ್ ಅರ್ಜಿ ನಮೂನೆ ಲಿಂಕ್(ನ.23 ರಿಂದ) | |
| ಅಧಿಕೃತ ಜಾಲತಾಣ | kea.kar.nic.in |
| ಮತ್ತಷ್ಟು ಸುದ್ದಿಗಳಿಗಾಗಿ | ಕರ್ನಾಟಕ ಹೆಲ್ಪ್.ಇನ್ |