ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ವು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ(ಕೆಎಸ್ಎಲ್ಎಸ್ಎ)ದಲ್ಲಿ ಖಾಲಿ ಇರುವ ಕಲ್ಯಾಣ ಕರ್ನಾಟಕ ಹಾಗೂ ಮೂಲ ಉಳಿಕೆ ವೃಂದದ ಶಾಖಾಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿ, ಅರ್ಜಿ ಆಹ್ವಾನಿಸಿದೆ.
ಕಲ್ಯಾಣ ಕರ್ನಾಟಕ ವೃಂದದಲ್ಲಿ 2 ಸ್ಥಾನಗಳು, ಮೂಲ ಉಳಿಕೆ ವೃಂದ 17 ಸ್ಥಾನಗಳು ಸೇರಿ ಒಟ್ಟು 19 ಅಭ್ಯರ್ಥಿಗಳು ಭರ್ತಿ ಮಾಡಿಕೊಳ್ಳಲಿದೆ. ಎಲ್ಎಲ್ಬಿ ಪದವಿ ಹೊಂದಿರುವ ಅಭ್ಯರ್ಥಿಗಳು ಕೆಇಎ ಅಧಿಕೃತ ಜಾಲತಾಣ https://cetonline.karnataka.gov.in/kea/indexnewಕ್ಕೆ ಭೇಟಿ ನೀಡಿ, ಮೇ 15 ರೊಳಗೆ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಾನೂನು ಪದವಿ(ಎಲ್ಎಲ್ಬಿ) ಹೊಂದಿರಬೇಕು.
ವಯಸ್ಸಿನ ಮಿತಿ:
16-04-2026ರಂತೆ;
ಕನಿಷ್ಠ 18 ವರ್ಷಗಳು
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 40 ವರ್ಷಗಳು ಇತರೆ ಹಿಂದುಳಿದ ವರ್ಗಗಳ ಪ್ರವರ್ಗ II(ಎ)/II(ಬಿ)/III(ಎ)/III(ಬಿ) 43 ವರ್ಷಗಳು ಪ.ಜಾತಿ/ಪ.ಪಂ/ಇತರೆ ಹಿಂದುಳಿದ ವರ್ಗಗಳ ಪ್ರವರ್ಗ-I ಅಭ್ಯರ್ಥಿಗಳಿಗೆ 45 ವರ್ಷಗಳು
ಸಾಮಾನ್ಯ/ಇತರೆ ಹಿಂದುಳಿದ ವರ್ಗದ ಪ್ರವರ್ಗ II(ಎ)/II(ಬಿ)/III(ಎ)/III(ಬಿ) ಅಭ್ಯರ್ಥಿಗಳಿಗೆ ₹1000 ಪ.ಜಾತಿ/ಪ.ಪಂಗಡ/ಇತರೆ ಹಿಂದುಳಿದ ವರ್ಗಗಳ ಪ್ರವರ್ಗ-I/ಅಂಗವಿಕಲ ಅಭ್ಯರ್ಥಿಗಳಿಗೆ ₹500
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೀಗೆ….
1- ಕೆಇಎ ಅಧಿಕೃತ ವೆಬ್ಸೈಟ್ಗೆ ಭೇಟಿ.
2- ನಂತರ ಮೆನುನಲ್ಲಿ “ನೇಮಕಾತಿ” ವಿಭಾಗದಡಿ ನೀಡಲಾದ “KSLSA (SO) ನೇಮಕಾತಿ -2026 (KK)” ಅಥವಾ “KSLSA (SO) ನೇಮಕಾತಿ -2026 (RPC)” ಲಿಂಕ್ ಮೇಲೆ ಒತ್ತಿ.
3 – ಮುಂದೆ “ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ – ಸೆಕ್ಷನ್ ಆಫೀಸರ್ ನೇಮಕಾತಿ – 2026 ಆನ್ಲೈನ್ ಅರ್ಜಿ (16-04-2026)” ಶಿರ್ಷೀಕೆ ಲಿಂಕ್ ಮೇಲೆ ಒತ್ತಿ. ಅರ್ಜಿ ನಮೂನೆ ಪುಟ ತೆರೆಯುತ್ತದೆ. ಅಲ್ಲಿ ಹೊಸ ಬಳಕೆದಾರರಾಗಿ ನೋಂದಣಿ ಮಾಡಿಕೊಂಡು ಅರ್ಜಿ ನಮೂನೆಯಲ್ಲಿ ಕೇಳಲಾದ ಸಂಪೂರ್ಣ ಮಾಹಿತಿಯನ್ನು ತುಂಬಿ ಹಾಗೂ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ. ಕೊನೆಗೆ ಅರ್ಜಿ ಶುಲ್ಕ ಪಾವತಿಸುವ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.
ಕೆಇಎ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ(ಕೆಎಸ್ಎಲ್ಎಸ್ಎ) ಶಾಖಾಧಿಕಾರಿ ನೇಮಕಾತಿ 2026ರ ಅರ್ಜಿ ನಮೂನೆ
i want to you job soo
i want to you job so