ಭಾರತೀಯ ಜೀವ ವಿಮಾ ನಿಗಮ(LIC)ದ ಅಂಗಸಂಸ್ಥೆಯಾಗಿರುವ ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್‌ನಲ್ಲಿ ಜೂನಿಯರ್ ಅಸಿಸ್ಟೆಂಟ್(ಜೆಎ) ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ಸೇರಿದಂತೆ ವಿವಿಧ ರಾಜ್ಯದಲ್ಲಿನ ತನ್ನ ಶಾಖೆಗಳಿಗೆ 180 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಅರ್ಜಿ ಸಲ್ಲಿಸಲು ಏಪ್ರಿಲ್ 30ರವರೆಗೆ ಕಾಲಾವಕಾಶವನ್ನು ನೀಡಲಾಗಿದೆ. ಸದರಿ ಹುದ್ದೆಗಳಿಗೆ ಯಾವುದೇ ಪದವಿ ಅರ್ಹತೆ ನಿಗದಿಪಡಿಸಲಾಗಿದೆ. ಅರ್ಜಿ ಸಲ್ಲಿಸ ಬಯಸುವ ಆಸಕ್ತ ಅಭ್ಯರ್ಥಿಗಳು LIC ಅಧಿಕೃತ ಜಾಲತಾಣ https://www.lichousing.com/careers ಕ್ಕೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಏಪ್ರಿಲ್ 16, 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಏಪ್ರಿಲ್ 30, 2026
- ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಏಪ್ರಿಲ್ 30, 2026
ರಾಜ್ಯವಾರು ಖಾಲಿ ಇರುವ ಹುದ್ದೆಗಳ ವಿವರ:
ಆಂಧ್ರಪ್ರದೇಶ – 08
ಅಸ್ಸಾಂ – 03
ಬಿಹಾರ್ – 07
ಛತ್ತಿಸ್ಗಢ – 03
ದೆಹಲಿ – 03
ಗುಜರಾತ್ – 02
ಜಮ್ಮು-ಕಾಶ್ಮೀರ – 01
ಕರ್ನಾಟಕ – 29
ಕೇರಳ – 03
ಮಧ್ಯ ಪ್ರದೇಶ್ – 18
ಮಹಾರಾಷ್ಟ್ರ – 25
ಒಡಿಶಾ – 07
ಪಂಜಾಬ್ – 01
ರಾಜಸ್ಥಾನ್ – 01
ಸಿಕ್ಕಿಂ – 01
ತಮಿಳುನಾಡು – 21
ತೆಲಂಗಾಣ – 24
ಉತ್ತರ ಪ್ರದೇಶ – 13
ಉತ್ತರಖಂಡ – 01
ವೆಸ್ಟ್ ಬೆಂಗಾಲ್ – 09
ಒಟ್ಟು – 180
ಶೈಕ್ಷಣಿಕ ಅರ್ಹತೆ:
ಎಲ್ಐಸಿ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಕನಿಷ್ಠ ಒಟ್ಟು 55% ಅಂಕಗಳೊಂದಿಗೆ ಯಾವುದೇ ಸ್ಟ್ರೀಮ್/ವಿಷಯದಲ್ಲಿ ಪದವಿಯನ್ನು ಪೂರ್ಣಗೊಳಿಸಿರಬೇಕು ಹಾಗೂ ಕಂಪ್ಯೂಟರ್ ಆಪರೇಟಿಂಗ್ ಹಾಗೂ ಬಳಕೆಯಲ್ಲಿ ಜ್ಞಾನವನ್ನು ಹೊಂದಿರಬೇಕು.
ವಯೋಮಿತಿ:
01-04-2026 ರಂತೆ;
ಕನಿಷ್ಠ ಮಿತಿ 21 ವರ್ಷಗಳು
ಗರಿಷ್ಠ ಮಿತಿ 30 ವರ್ಷಗಳು
ಆಯ್ಕೆ ವಿಧಾನ:
- ಆನ್ಲೈನ್ ಪರೀಕ್ಷೆ
- ಸಂದರ್ಶನ
- ಅಂತಿಮ ಆಯ್ಕೆ
- ವೈದ್ಯಕೀಯ ಪರೀಕ್ಷೆ
ಸಂಬಳ:
ಅಭ್ಯರ್ಥಿಗಳಿಗೆ ಮಾಸಿಕ ₹38,709-41,509 ವರೆಗೆ ವೇತನವನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಎಲ್ಲಾ ವರ್ಗದ ಅಭ್ಯರ್ಥಿಗಳಿಗೂ ₹800+ ಜಿ.ಎಸ್.ಟಿ
ಅರ್ಜಿ ಸಲ್ಲಿಸುವ ವಿಧಾನ
• ಅಭ್ಯರ್ಥಿಗಳು LIC ಅಧಿಕೃತ ಜಾಲತಾಣ https://www.lichousing.com/careers ಕ್ಕೆ ಭೇಟಿ ನೀಡಿ.
• ಬಳಿಕ ಉದ್ಯೋಗಾವಕಾಶಗಳು ಶೀರ್ಷಿಕೆಯ ಕೆಳಗೆ ನೀಡಲಾಗಿರುವ *ಕಿರಿಯ ಸಹಾಯಕರ ನೇಮಕಾತಿ 2026* ಲಿಂಕ್ ಮೇಲೆ ಕ್ಲಿಕ್ ಮಾಡಿ.
• ನಂತರ “ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ” ಆಯ್ಕೆಯನ್ನು ಆರಿಸಿ.
• ನೋಂದಣಿ ಸಂಖ್ಯೆ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ/ಹೊಸಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ.
• ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ, ಸಹಿ, ಭಾವಚಿತ್ರ, ಶೈಕ್ಷಣಿಕ ಮಾಹಿತಿ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
• ಮುಂದುವರೆದಂತೆ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಪಾವತಿಸಿ.
• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ತಿದ್ದುಪಡಿಗಳಿದ್ದಲ್ಲಿ ಅದನ್ನು ಸರಿಪಡಿಸಿ ಸಲ್ಲಿಸಿ.
• ಅಂತಿಮವಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ.
Important Direct Links:
| Official Notification PDF | Download |
| Online Application Form Link | Apply Now |
| Official Website | www.lichousing.com |
| More Updates | KarnatakaHelp.in |
i need to job
I need a job
I need a job
Hi