NTPC: ವೈದ್ಯಕೀಯ ವೃತ್ತಿಪರರ ನೇಮಕಾತಿಗೆ ಅರ್ಜಿ ಆಹ್ವಾನ

Published on:

ಭಾರತದ ಅತಿದೊಡ್ಡ ಸಂಯೋಜಿತ ವಿದ್ಯುತ್ ಕಂಪನಿಯಾಗಿರುವ ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್(NTPC) ತನ್ನ ವಿವಿಧ ಯೋಜನೆಗಳು(Projects)/ನಿಲ್ದಾಣ(Stations)ಗಳಲ್ಲಿನ ಆಸ್ಪತ್ರೆಗಳಿಗೆ ವೈದ್ಯಕೀಯ ವೃತ್ತಿಪರರ ಭರ್ತಿಗಾಗಿ ಅಧಿಸೂಚನೆ ಹೊರಡಿಸಿದೆ.

ಜಿಡಿಎಂಒ 20, ಫಿಜಿಶಿಯನ್(ಜನರಲ್ ಮೆಡಿಸನ್) 25, ಪೀಡಿಯಾಟ್ರಿಕ್ಸ್ 01, ನೇತ್ರವಿಜ್ಞಾನ 01, ಒ&ಜಿ 08 ಸ್ಥಾನ ಸೇರಿ ಒಟ್ಟು 55 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಅರ್ಜಿ ಸಲ್ಲಿಸಲು ಏ.23ರವರೆಗೆ ಅವಕಾಶ ನೀಡಲಾಗಿದೆ. ಸದರಿ ಹುದ್ದೆಗಳ ಅರ್ಹತಾ ಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು NTPC ಅಧಿಕೃತ ಜಾಲತಾಣ https://careers.ntpc.co.in/recruitment/index.phpಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ನೇಮಕಾತಿಯ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಏಪ್ರಿಲ್ 09, 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಏಪ್ರಿಲ್ 23, 2026

ಶೈಕ್ಷಣಿಕ ಅರ್ಹತೆ:

✓ ಜಿಡಿಎಂಒ ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಎಂಬಿಬಿಎಸ್ ಪದವಿ ಪೂರ್ಣಗೊಳಿಸಿರಬೇಕು.

✓ ಫಿಜಿಶಿಯನ್ ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಜನರಲ್ ಮೆಡಿಸಿನ್‌ನಲ್ಲಿ ಎಂಡಿ/ಡಿಎನ್‌ಬಿ ಪದವಿ ಪೂರ್ಣಗೊಳಿಸಿರಬೇಕು.

✓ ಪೀಡಿಯಾಟ್ರಿಕ್ಸ್ ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದಪೀಡಿಯಾಟ್ರಿಕ್ಸ್‌ನಲ್ಲಿ ಎಂಡಿ/ಡಿಎನ್‌ಬಿ ಅಥವಾ ಎಂಬಿಬಿಎಸ್ ಜೊತೆಗೆ ಮಕ್ಕಳ ಆರೋಗ್ಯ ವಿಭಾಗದಲ್ಲಿ ಪಿಜಿ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.

✓ ನೇತ್ರವಿಜ್ಞಾನ(Ophthalmology) ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ನೇತ್ರವಿಜ್ಞಾನದಲ್ಲಿ ಎಂಡಿ/ಎಂಎಸ್/ಡಿಎನ್‌ಬಿ ಅಥವಾ ಎಂಬಿಬಿಎಸ್ ಜೊತೆಗೆ ನೇತ್ರವಿಜ್ಞಾನದಲ್ಲಿ ಪಿಜಿ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.

✓ ಒ&ಜಿ ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ O&G ಯಲ್ಲಿ ಎಂಡಿ/ಎಂಎಸ್/ಡಿಎನ್‌ಬಿ ಅಥವಾ ಎಂಬಿಬಿಎಸ್ ಜೊತೆಗೆ 0&G ಯಲ್ಲಿ ಪಿಜಿ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.

*ಜೊತೆಗೆ ಹುದ್ದೆಗಳಿಗೆ ಅನುಗುಣವಾಗಿ ಅನುಭವ ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆ ಓದಿ.

ವಯೋಮಿತಿ:

ಗರಿಷ್ಠ ವಯಸ್ಸಿನ ಮಿತಿ 37 ವರ್ಷಗಳು

ಆಯ್ಕೆ ವಿಧಾನ:

ಅರ್ಹ ಅಭ್ಯರ್ಥಿಗಳ ಶಾರ್ಟ್ ಲಿಸ್ಟ್
ಸಂದರ್ಶನ

ವೇತನ:

GDMO ಹುದ್ದೆಗೆ ₹50,000-₹1,60,000
ಫಿಜಿಶಿಯನ್, ಪೀಡಿಯಾಟ್ರಿಕ್ಸ್, ನೇತ್ರವಿಜ್ಞಾನ, O&G ಹುದ್ದೆಗಳಿಗೆ ₹70,000-₹2,00,000

ಅರ್ಜಿ ಶುಲ್ಕ:

ಸಾಮಾನ್ಯ ಇಡಬ್ಲ್ಯೂಎಸ್‌/ಒಬಿಸಿ ವರ್ಗದ ಅಭ್ಯರ್ಥಿಗಳಿಗೆ ₹500
ಎಸ್ಸಿ/ಎಸ್ಟಿ/ಪಿಡಬ್ಲ್ಯೂಬಿಡಿ/ಮಾಜಿ ಸೈನಿಕ ವರ್ಗದ ಅಭ್ಯರ್ಥಿಗಳಿಗೆ ₹00

ಅರ್ಜಿ ಸಲ್ಲಿಸುವ ವಿಧಾನ

• ಅಭ್ಯರ್ಥಿಗಳು NTPC ಅಧಿಕೃತ ಜಾಲತಾಣ https://careers.ntpc.co.in/recruitment/login.phpಕ್ಕೆ ಭೇಟಿ ನೀಡಿ.

• ನಂತರ ಸೂಚನಾ ಫಲಕ ವಿಭಾಗದ ಕೆಳಗೆ ನೀಡಲಾಗಿರುವ – “GDMO ಮತ್ತು ವೈದ್ಯಕೀಯ ತಜ್ಞರ ನೇಮಕಾತಿ (ಸಲಹೆ ಸಂಖ್ಯೆ 04/26). ಆನ್‌ಲೈನ್ ಅರ್ಜಿ ವಿಂಡೋ 09.04.2026 ರಿಂದ 23.04.2026 ರವರೆಗೆ ತೆರೆದಿರುತ್ತದೆ” *ಅನ್ವಯಿಸು* ಲಿಂಕ್ ಮೇಲೆ ಕ್ಲಿಕ್ ಮಾಡಿ.

• ಮುಂದುವರೆದಂತೆ ಬಳಕೆದಾರರ ಐಡಿ ಹಾಗೂ ಇ-ಮೇಲ್ ಐಡಿ ನಮೂದಿಸಿ ಲಾಗಿನ್ ಆಗಿ ಅಥವಾ ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ.

• ಅರ್ಜಿಯಲ್ಲಿ ಕೇಳಲಾಗಿರುವ ಸ್ವ ವಿವರ, ಭಾವಚಿತ್ರ, ಸಹಿ, ಶೈಕ್ಷಣಿಕ ವಿವರ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.

• ಇದಾದ ಬಳಿಕ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಪಾವತಿಸಿ.

• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ತಿದ್ದುಪಡಿಗಳಿದ್ದಲ್ಲಿ ಅದನ್ನು ಸರಿಪಡಿಸಿ ಸಲ್ಲಿಸಿ.

• ಅಂತಿಮವಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ.

Important Direct Links:

Official Notification PDFDownload
Online Application Form LinkApply Now
Official Websitehttps://ntpc.co.in/
More UpdatesKarnatakaHelp.in
About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ ಶೈಕ್ಷಣಿಕ ಸುದ್ದಿಗಳನ್ನು ತಲುಪಿಸುವ ಮಾಧ್ಯಮ.

2 thoughts on “NTPC: ವೈದ್ಯಕೀಯ ವೃತ್ತಿಪರರ ನೇಮಕಾತಿಗೆ ಅರ್ಜಿ ಆಹ್ವಾನ”

Leave a Comment