ಕೃಷಿ ಇಲಾಖೆ: ಎಒ, ಎಎಒ ಹುದ್ದೆಗಳ ಭರ್ತಿ; ಅಧಿಸೂಚನೆ ಹಿಂಪಡೆದ ಕೆಇಎ

Published on:

Updated On:

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ವು ಕೃಷಿ ಇಲಾಖೆಯ ಕಲ್ಯಾಣ ಕರ್ನಾಟಕ ಹಾಗೂ ಉಳಿಕೆ ಮೂಲಕ ವೃಂದದ ಗ್ರೂಪ್‌ ‘ಬಿ’ ಕೃಷಿ ಅಧಿಕಾರಿ(ಎಒ), ಸಹಾಯಕ ಕೃಷಿ ಅಧಿಕಾರಿ(ಎಎಒ) ಹುದ್ದೆಗಳ ನೇಮಕಾತಿಗಾಗಿ ಹೊರಡಿಸಿದ್ದ ಅಧಿಸೂಚನೆಯನ್ನು ಹಿಂಪಡೆಯಲಾಗಿದೆ ಎಂದು ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಅವರು ತಿಳಿಸಿದ್ದಾರೆ.

ಕಲ್ಯಾಣ ಕರ್ನಾಟಕ ವೃಂದದ 242+16(ಹಿಂಬಾಕಿ) ಸ್ಥಾನಗಳು, ಉಳಿಕೆ ಮೂಲ ವೃಂದದ 630+02(ಹಿಂಬಾಕಿ) ಸ್ಥಾನ ಸೇರಿದಂತೆ ಒಟ್ಟು 890 ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಲು ಏ.19ರಿಂದ ಅರ್ಜಿ ಆಹ್ವಾನಿಸಲಾಗಿತ್ತು.

ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿಗೆ ಶೇ.15ರಷ್ಟು ಮೀಸಲಾತಿ ಹಂಚಿಕೆ ಮಾಡಿರುವುದರಿಂದ ಹೊಸ ಮೀಸಲಾತಿ ಅನುಸಾರ ಪ್ರವರ್ಗ-ಎ,ಪ್ರವರ್ಗ-ಬಿ ಹಾಗೂ ಪ್ರವರ್ಗ-ಸಿ ಒಳಮೀಸಲಾತಿಯನ್ನು ಕ್ರಮವಾಗಿ 5.25, 5.25, 4.50 ರಂತೆ ಅನುಷ್ಠಾನಗೊಳಿಸಿ ಹೊಸ ಅಧಿಸೂಚನೆ ಹೊರಡಿಸಲು ಪರಿಷ್ಕೃತ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಕೃಷಿ ಆಯುಕ್ತರು ಆದೇಶ ಹೊರಡಿಸಿರುವುದರಿಂದ ಪ್ರಸ್ತುತ ಜಾಲ್ತಿ ಅಧಿಸೂಚನೆಯನ್ನು ಸ್ಥಗಿತಗೊಳಿಸಲಾಗಿದೆ.
ಹೆಚ್.ಪ್ರಸನ್ನ, ಕಾರ್ಯನಿರ್ವಾಹಕ ನಿರ್ದೇಶಕ, ಕೆಇಎ

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭ ದಿನಾಂಕ – ಏಪ್ರಿಲ್‌ 19
  • ಅರ್ಜಿ ಸಲ್ಲಿಸಲು ಕೊನೆಯ ದಿನ – ಮೇ 10
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಮೇ 12

ಶೈಕ್ಷಣಿಕ ಅರ್ಹತೆ:

ಶೇ.85 ರಷ್ಟು ಕೃಷಿ ಅಧಿಕಾರಿ/ಸಹಾಯಕ ಕೃಷಿ ಅಧಿಕಾರಿ ಹುದ್ದೆಗೆ; ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿಎಸ್‌ಸ್ಸಿ (ಕೃಷಿ) ಅಥವಾ ಬಿಎಸ್‌ಸ್ಸಿ (ಆನರ್ಸ್) ಕೃಷಿ ಪದವಿ ಪಡೆದಿರಬೇಕು.

ಶೇ.15 ರಷ್ಟು ಕೃಷಿ ಅಧಿಕಾರಿ/ಸಹಾಯಕ ಕೃಷಿ ಅಧಿಕಾರಿ ಹುದ್ದೆಗೆ; ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಟೆಕ್(ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ) ಅಥವಾ ಬಿ.ಟೆಕ್(ಆಹಾರ ತಂತ್ರಜ್ಞಾನ) ಅಥವಾ ಬಿಎಸ್‌ಸ್ಸಿ (ಕೃಷಿ ಮಾರುಕಟ್ಟೆ ಮತ್ತು ಸಹಕಾರ) ಅಥವಾ ಬಿಎಸ್‌ಸ್ಸಿ (ಆನರ್ಸ್) ಕೃಷಿ ಮಾರಾಟ ಮತ್ತು ಸಹಕಾರ ಅಥವಾ ಬಿಎಸ್‌ಸ್ಸಿ (ಆನರ್ಸ್) ಅಗ್ರಿ ಬಿಸಿನೆಸ್ ಮ್ಯಾನೇಜ್‌ಮೆಂಟ್ ಅಥವಾ ಬಿಎಸ್‌ಸ್ಸಿ (ಕೃಷಿ ಜೈವಿಕ ತಂತ್ರಜ್ಞಾನ) ಅಥವಾ ಬಿ.ಟೆಕ್ (ಜೈವಿಕ ತಂತ್ರಜ್ಞಾನ) ಅಥವಾ ಬಿಎಸ್‌ಸ್ಸಿ (ಅಗ್ರಿಕಲ್ಬರಲ್ ಇಂಜಿನಿಯರಿಂಗ್) ಅಥವಾ ಬಿ.ಟೆಕ್ (ಅಗ್ರಿಕಲ್ಬರಲ್ ಇಂಜಿನಿಯರಿಂಗ್‌) ಪದವಿ ಹೊಂದಿರಬೇಕು.

ವಯೋಮಿತಿ:

10-05-2026ರಂತೆ;

ಕನಿಷ್ಠ 18 ವರ್ಷಗಳು

ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 40 ವರ್ಷಗಳು
ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 43 ವರ್ಷಗಳು
ಹರಿಶಿನ ಜಾತಿ / ಪರಿಶಿಷ್ಟ ಪಂಗಡ / ಪವರ್ಗ-1 ಅಭ್ಯರ್ಥಿಗಳಿಗೆ 45 ವರ್ಷಗಳು

ಸೂಚನೆ: ಸರ್ಕಾರಿ ನಿಯಮಾನುಸಾರ ವರ್ಗವಾರು ವಯೋಮಿತಿ ಸಡಿಲಿಕೆ ಇರುತ್ತದೆ.

ಆಯ್ಕೆ ಪ್ರಕ್ರಿಯೆ:

  • ಸ್ಪರ್ಧಾತ್ಮಕ ಪರೀಕ್ಷೆ
  • ದಾಖಲಾತಿ ಪರಿಶೀಲನೆ

ಸಂಬಳ:

ಕೃಷಿ ಅಧಿಕಾರಿ ಹುದ್ದೆಗೆ ವೇತನ ಶ್ರೇಣಿ:- 69250-1650-74200-1900-85600-2300-99400-2700-115600-3100-134200/-
ಸಹಾಯಕ ಕೃಷಿ ಅಧಿಕಾರಿ ಹುದ್ದೆಗೆ ವೇತನ ಶ್ರೇಣಿ:-65950-1650-74200-1900-85600-2300-99400-2700-115600-3100-124900/-

ಅರ್ಜಿ ಶುಲ್ಕ:

ಸಾಮಾನ್ಯ ಅರ್ಹತೆ ಮತ್ತು ಪ್ರವರ್ಗ-2ಎ/2ಬಿ/3ಎ/3ಬಿ ವರ್ಗದವರಿಗೆ ₹750/-
ಪ.ಜಾತಿ/ಪ.ಪಂಗಡ/ಪ್ರವರ್ಗ-1/ಮಾಜಿ ಸೈನಿಕ/ತೃತೀಯ ಲಿಂಗದ ಅಭ್ಯರ್ಥಿಗಳಿಗೆ ₹500/-
ವಿಕಲಚೇತನ ಅಭ್ಯರ್ಥಿಗಳಿಗೆ ₹250/-

ಅರ್ಜಿ ಸಲ್ಲಿಕೆಯ ಸುಲಭ ವಿಧಾನ:

ಪ್ರಿಯ ಓದುಗ ಸ್ಪರ್ಧಾವಿತ್ರರೇ, ಮೊದಲು ಕೆಇಎ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ. ನಂತರ “ನೇಮಕಾತಿ” ವಿಭಾಗದಡಿ “AGRICULTURE DEPARTMENT (AO & AAO) ನೇಮಕಾತಿ -2026 (RPC)” ಅಥವಾ “AGRICULTURE DEPARTMENT (AO & AAO) ನೇಮಕಾತಿ -2026 (KK)” ಉಪವಿಭಾಗದಡಿ ಒದಗಿಸಲಾದ “ಕೃಷಿ ಇಲಾಖೆ (AO & AAO) ನೇಮಕಾತಿ -2026 (KK/RPC) ಆನ್‌ಲೈನ್ ಅರ್ಜಿ ಲಿಂಕ್ (19-04-2026)” ಲಿಂಕ್‌ ಮೇಲೆ ಒತ್ತಿ, ಈ ಕೇಳಗಿನ ಹಂತಗಳನ್ನು ಪೂರ್ಣಗೊಳಿಸುವ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.

Kea Agriculture Department Ao Aao Online Form 2026
KEA KSDA AO AAO Online Form 2026

ಪೋರ್ಟಲ್‌ಗೆ ಲಾಗಿನ್ ಮಾಡಿ(Login to Portal)
ಮೂಲ ವಿವರಗಳು(Basic Details)
ಎಸ್ಸೆಸ್ಸೆಲ್ಸಿ ವಿವರಗಳು(SSLC Details)
ಪಿಯುಸಿ ವಿವರಗಳು(PUC Details)
ಮೀಸಲಾತಿ ವಿವರ(Reservation Details)
ಹಕ್ಕುಗಳು ಮತ್ತು ವಿನಾಯಿತಿ (Claims & Exemption)
ಹೆಚ್ಚುವರಿ ಅರ್ಹತೆಗಳು(Additional Qualifications)
ಕೆಲಸದ ಅನುಭವ(Work Experience)
ಕೇಳಲಾದ ದಾಖಲೆಗಳನ್ನು ಅಪ್ಲೋಡ್‌ ಮಾಡಿ(Document Upload)
ಪೂರ್ವ ವೀಕ್ಷಣೆ(Preview Application)
ಸ್ವಯಂ ಘೋಷಣೆ ಮತ್ತು ಸಲ್ಲಿಕೆ ಮಾಡಿ(Declaration & Submit)
ಅರ್ಜಿ ಸಲ್ಲಿಸಲು ಇಚ್ಛಿಸುವ ಹುದ್ದೆಗಳನ್ನು ಆಯ್ಕೆ ಮಾಡಿ ಹಾಗೂ ಅರ್ಜಿ ಶುಲ್ಕ ಪಾವತಿಸಿ(Select Post & Pay Fee)

Important Direct Links:

KEA AO/AAO KK Notification PDFDownload
KEA AO/AAO RPC Notification PDFDownload
KEA AO/AAO 2026 Online Application Form LinkApply Now
KK Vacancy Details PDFDownload
RPC Vacancy Details PDFDownload
Official Websitekea.kar.nic.in
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ತೊಡಗಿಕೊಂಡಿದ್ದೇನೆ.

1 thought on “ಕೃಷಿ ಇಲಾಖೆ: ಎಒ, ಎಎಒ ಹುದ್ದೆಗಳ ಭರ್ತಿ; ಅಧಿಸೂಚನೆ ಹಿಂಪಡೆದ ಕೆಇಎ”

Leave a Comment