ನವದೆಹಲಿ: ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್ಪಿಎಫ್)ಯು ಕಾನ್ಸ್ಟೇಬಲ್(ಟೆಕ್ನಿಕಲ್, ಟ್ರೇಡ್ಸ್ಮನ್ ಹಾಗೂ ಪಿಯೋನೀರ್) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದ್ದು, ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಏ.20ರಿಂದ ಆರಂಭವಾಗಿದೆ.
ಒಟ್ಟು 9195 ಸ್ಥಾನಗಳಲ್ಲಿ ಟೆಕ್ನಿಕಲ್, ಟ್ರೇಡ್ಸ್ಮನ್ ಪುರುಷರಿಗೆ 9096 ಸ್ಥಾನಗಳು, ಮಹಿಳೆಯರಿಗೆ 79 ಸ್ಥಾನ ಹಾಗೂ ಪಿಯೋನೀರ್ ವಿಂಗ್ 20 ಸ್ಥಾನ ಪುರುಷ ಅಭ್ಯರ್ಥಿಗಳಿಗೆ ಮೀಸಲಿವೆ. ಎಸ್ಸೆಸ್ಸೆಲ್ಸಿ/ದ್ವಿತೀಯ ಪಿಯುಸಿ ಜೊತೆಗೆ ಐಟಿಐ ಅರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಲು ಮೇ 19ರವರೆಗೆ ಅವಕಾಶವಿದೆ. ಅರ್ಜಿ ಸಲ್ಲಿಸಲು ಇಚ್ಚಿಸುವ ಅರ್ಹ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಸಿಪಿಆರ್ಎಫ್ ಅಧಿಕೃತ ಜಾಲತಾಣ https://rect.crpf.gov.in/ಕ್ಕೆ ಭೇಟಿ ನೀಡಿ.
ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ/ತತ್ಸಮಾನ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಹಾಗೂ ಸಂಬಂಧಿತ ಟ್ರೇಡ್ನಲ್ಲಿ ಐಟಿಐ ಉತ್ತೀರ್ಣರಾದ ಪ್ರಮಾಣಪತ್ರವನ್ನು ಹೊಂದಿರಬೇಕು.
ಚಾಲಕ ಹುದ್ದೆಗೆ- ಅಭ್ಯರ್ಥಿಗಳು ಭಾರೀ ಸಾರಿಗೆ ವಾಹನ ಚಾಲನಾ ಪರವಾನಗಿ ಹೊಂದಿರಬೇಕು ಮತ್ತು ನೇಮಕಾತಿ ಸಮಯದಲ್ಲಿ ಚಾಲನಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
*ಕೆಲವು ಹುದ್ದೆಗೆ ಅನುಭವದ ಅವಶ್ಯಕತೆಯಿದ್ದು, ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆ ಓದಿ.
ವಯೋಮಿತಿ:
01-08-2026 ರಂತೆ;
✓ ಕಾನ್ಸ್ಟೇಬಲ್ (ಚಾಲಕ) ಹುದ್ದೆಗೆ; ಕನಿಷ್ಠ 21 ವರ್ಷಗಳು, ಗರಿಷ್ಠ 27 ವರ್ಷಗಳು ✓ ಉಳಿದ ಎಲ್ಲಾ ಹುದ್ದೆಗಳಿಗೂ; ಕನಿಷ್ಠ 18 ವರ್ಷಗಳು, ಗರಿಷ್ಠ 23 ವರ್ಷಗಳು.
ವಯೋಮಿತಿ ಸಡಿಲಿಕೆ; ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ – 05 ವರ್ಷಗಳು, ಒಬಿಸಿ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ 03 ವರ್ಷಗಳು, 1984ರ ಗಲಭೆಯಲ್ಲಿ ಕೊಲ್ಲಲ್ಪಟ್ಟ ಬಲಿಪಶುಗಳ ಮಕ್ಕಳು ಮತ್ತು ಅವಲಂಬಿತ (ಸಾಮಾನ್ಯ) ಅಭ್ಯರ್ಥಿಗಳಿಗೆ 05 ವರ್ಷಗಳು. 1984ರ ಗಲಭೆಯಲ್ಲಿ ಸಾವನ್ನಪ್ಪಿದ ಬಲಿಪಶುಗಳ ಮಕ್ಕಳು ಮತ್ತು ಅವಲಂಬಿತ (ಒಬಿಸಿ) ಅಭ್ಯರ್ಥಿಗಳಿಗೆ 08 ವರ್ಷಗಳು ಹಾಗೂ 1984ರ ಗಲಭೆಯಲ್ಲಿ ಸಾವನ್ನಪ್ಪಿದ ಬಲಿಪಶುಗಳ ಮಕ್ಕಳು ಮತ್ತು ಅವಲಂಬಿತ (ಪ.ಜಾತಿ & ಪ.ಪಂಗಡ) ಅಭ್ಯರ್ಥಿಗಳಿಗೆ 10 ವರ್ಷಗಳು.
ಆಯ್ಕೆ ವಿಧಾನ:
ದೈಹಿಕ ದಕ್ಷತೆ ಪರೀಕ್ಷೆ (PET)
ದೈಹಿಕ ಗುಣಮಟ್ಟ ಪರೀಕ್ಷೆ (PST)
ಕಂಪ್ಯೂಟರ್ ಆಧಾರಿತ ಪರೀಕ್ಷೆ
ಟ್ರೇಡ್ ಪರೀಕ್ಷೆ
ದಾಖಲೆ ಪರಿಶೀಲನೆ
ವೈದ್ಯಕೀಯ ಪರೀಕ್ಷೆ
ಸಂಬಳ:
ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ₹21,700ಗಳಿಂದ ₹69,100ವರೆಗೆ ವೇತನವನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಸಾಮಾನ್ಯ, ಒಬಿಸಿ ಹಾಗೂ ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ – ₹100 ಪ.ಜಾತಿ, ಪ.ಪಂಗಡ, ಮಾಜಿ ಸೈನಿಕರು ಮತ್ತು ಎಲ್ಲಾ ವರ್ಗದ ಮಹಿಳಾ ಅಭ್ಯರ್ಥಿಗಳಿಗೆ – ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಸುವ ವಿಧಾನ
• ಅಭ್ಯರ್ಥಿಗಳು CPRF ಅಧಿಕೃತ ಜಾಲತಾಣ https://rect.crpf.gov.in/ ಕ್ಕೆ ಭೇಟಿ ನೀಡಿ.
• ಬಳಿಕ *CRPF ನಲ್ಲಿ ಕಾನ್ಸ್ಟೇಬಲ್ (ತಾಂತ್ರಿಕ ಮತ್ತು ವ್ಯಾಪಾರಿ) ಮತ್ತು ಪಯೋನೀರ್ (ಪುರುಷ/ಮಹಿಳೆ) 2026 ಹುದ್ದೆಗಳಿಗೆ ನೇಮಕಾತಿ* ಶೀರ್ಷಿಕೆಯ ಕೆಳಗೆ ಏಪ್ರಿಲ್ 20ರಂದು ಸಕ್ರಿಯವಾಗುವ ಆನ್ ಲೈನ್ ಅರ್ಜಿ ನಮೂನೆಯನ್ನು ಆಯ್ಕೆ ಮಾಡಿ.
• ನಂತರ ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ/ಈಗಾಗಲೇ ನೋಂದಣಿ ಮಾಡಿದ್ದರೆ ನೋಂದಣಿ ಐಡಿ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.
• ಮುಂದುವರಿದಂತೆ ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ, ಭಾವಚಿತ್ರ ಸಹಿ ಶೈಕ್ಷಣಿಕ ಮಾಹಿತಿ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
• ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸಿ.
• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ತಿದ್ದುಪಡಿಗಳಿದ್ದಲ್ಲಿ ಅದನ್ನು ಸರಿಪಡಿಸಿ ಸಲ್ಲಿಸಿ.
• ಅಂತಿಮವಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ.
Prabhakar
ಮಂಜುನಾಥ್
Normal
Navadehali-job crpf
Children 1984 balipashu /1984 kollalpatta children’s job relaxation year is best
ತೇಜಸ್ವಿನಿ
ನಾನು 12puc ಮುಗಿಸಿದ್ದೇನೆ
Einnu eilla
Degree final year (B.A)
Degree secnd year B.A