SSC CHSL ಶ್ರೇಣಿ-II ಪರೀಕ್ಷೆಯ ತಾತ್ಕಾಲಿಕ ಕೀ-ಉತ್ತರ ಪ್ರಕಟ

Published on:

Updated On:

ಸಿಬ್ಬಂದಿ ಆಯ್ಕೆ ಆಯೋಗವು ಕಂಬೈನ್‌ ಹೈಯರ್ ಸೆಕೆಂಡರಿ ಮಟ್ಟದ ಒಟ್ಟು 3131 ತಾತ್ಕಾಲಿಕ ಖಾಲಿ ಹುದ್ದೆಗಳ ನೇಮಕಾತಿಗಾಗಿ ನಡೆಸಲಾದ ಶ್ರೇಣಿ-II ಪರೀಕ್ಷೆಯ ಅಧಿಕೃತ ತಾತ್ಕಾಲಿಕ ಕೀ-ಉತ್ತರವನ್ನು ಸೋಮವಾರ(ಏ.20) ಪ್ರಕಟಿಸಿದೆ.

ಶ್ರೇಣಿ-I ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ 2026ರ ಏಪ್ರಿಲ್ 10ರಂದು ಶ್ರೇಣಿ-II ಪರೀಕ್ಷೆಯನ್ನು ನಡೆಸಲಾಗಿತ್ತು, ಇದೀಗ ಸದರಿ ಪರೀಕ್ಷೆಯ ಪ್ರತಿಕ್ರಿಯೆ ಪತ್ರಿಕೆಗಳು ಮತ್ತು ತಾತ್ಕಾಲಿಕ ಕೀ-ಉತ್ತರವನ್ನುSSC ಅಧಿಕೃತ ವೆಬ್ಸೈಟ್ https://ssc.gov.in/ನಲ್ಲಿ ಬಿಡುಗಡೆ ಮಾಡಲಾಗಿದ್ದು, ಶ್ರೇಣಿ-II ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಆಗಿ ಪರಿಶೀಲಿಸಬಹುದು.

ಆಕ್ಷೇಪಣೆ ಸಲ್ಲಿಸಲು ಅವಕಾಶ

ಅಭ್ಯರ್ಥಿಗಳು ಶ್ರೇಣಿ-II ಪರೀಕ್ಷೆಯ ಪ್ರತಿಕ್ರಿಯೆ ಪತ್ರಿಕೆಗಳು ಮತ್ತು ತಾತ್ಕಾಲಿಕ ಕೀ-ಉತ್ತರಗಳನ್ನು ಪರಿಶೀಲಿಸಿ ಸದರಿ ಪ್ರಕಟಿತ (ಪ್ರತಿಕ್ರಿಯೆ ಪತ್ರಿಕೆಗಳು & ತಾತ್ಕಾಲಿಕ ಕೀ-ಉತ್ತರಗಳ) ವಿರುದ್ಧ ಆಕ್ಷೇಪಣೆಗಳನ್ನು ಸಲ್ಲಿಸಲು ಏಪ್ರಿಲ್ 20ರಿಂದ 23ರ ಸಂಜೆ 6 ಗಂಟೆಯವರೆಗೆ ರವರೆಗೆ ಕಾಲಾವಕಾಶವನ್ನು ನೀಡಲಾಗಿದ್ದು, ಅಭ್ಯರ್ಥಿಗಳು ಆಕ್ಷೇಪಣೆ ಸಲ್ಲಿಸಲು ಪ್ರತಿ ಪ್ರಶ್ನೆ/ಉತ್ತರಕ್ಕೆ ಅನ್ವಯವಾಗುವ ನಿಗದಿತ 50ರೂ. ಶುಲ್ಕ ಪಾವತಿಸಿ ಆಕ್ಷೇಪಣೆ ಸಲ್ಲಿಸಬಹುದು.

ಕೀ ಉತ್ತರ ವೀಕ್ಷಿಸುವ ಹಾಗೂ ಆಕ್ಷೇಪಣೆ ಸಲ್ಲಿಸುವ ವಿಧಾನ:

• ಮೊದಲಿಗೆ ಅಭ್ಯರ್ಥಿಗಳು SSC ಅಧಿಕೃತ ವೆಬ್ಸೈಟ್https://ssc.gov.in/ ಗೆ ಭೇಟಿ ನೀಡಿ.

• ನಂತರ ಅಭ್ಯರ್ಥಿಗಳು ನೋಂದಣಿ ಸಂಖ್ಯೆ ಹಾಗೂ ಜನ್ಮ ದಿನಾಂಕವನ್ನು ನಮೂದಿಸಿ ಲಾಗಿನ್ ಆಗಿ.

• ಶ್ರೇಣಿ-II ಪರೀಕ್ಷೆ ಪ್ರತಿಕ್ರಿಯೆ ಪತ್ರಿಕೆಗಳು ಮತ್ತು ತಾತ್ಕಾಲಿಕ ಕೀ-ಉತ್ತರಗಳನ್ನು ಪರಿಶೀಲಿಸಿ.

• ನಂತರ, ಸದರಿ ಪ್ರಕಟಿತ ಕೀ-ಉತ್ತರಗಳಲ್ಲಿ ಅಸಮಧಾನವಿದ್ದಲ್ಲಿ, ಆಕ್ಷೇಪಣೆ ಸಲ್ಲಿಕೆಯ ನಿಗದಿತ ಶುಲ್ಕ ಪಾವತಿಸಿ ಅಗತ್ಯ ವಿವರಗಳೊಂದಿಗೆ ಆಕ್ಷೇಪಣೆಯನ್ನು ಸಲ್ಲಿಸಬಹುದು.

Important Direct Links:

Notice PDFDownload
Official Websitehttps://ssc.gov.in/
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment