ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಪಡೆ(ಐಟಿಬಿಪಿಎಫ್)ಯಲ್ಲಿ ಗ್ರೂಪ್-ಎ ಸಹಾಯಕ ಕಮಾಂಡೆಂಟ್(ಎಂಜಿನಿಯರ್) ಹುದ್ದೆಗಳ ಭರ್ತಿಗಾಗಿ ಅಧಿಸೂಚನೆಯನ್ನು ಬಿಡುಗಡೆಯಾಗಿದೆ.
ಒಟ್ಟು 06 ಸ್ಥಾನಗಳಿಗೆ ನೇಮಕ ನಡೆಯಲಿದ್ದು, ಅರ್ಜಿ ಸಲ್ಲಿಸಲು ಮೇ 20ರವರೆಗೆ ಅವಕಾಶವಿದೆ. ಸದರಿ ಹುದ್ದೆಗಳ ಅರ್ಹತಾಮಾನದಂಡಗಳನ್ನು ಪೂರೈಸುವ ಆಸಕ್ತ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಐಟಿಬಿಪಿ ನೇಮಕಾತಿ ಜಾಲತಾಣ https://recruitment.itbpolice.nic.in/rect/index.phpಕ್ಕೆ ಭೇಟಿ ನೀಡಿ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಏಪ್ರಿಲ್ 21, 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಮೇ 20, 2026
- ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಮೇ 20, 2026
ಶೈಕ್ಷಣಿಕ ಅರ್ಹತೆಗಳು:
ಐಟಿಬಿಪಿಎಫ್ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪೂರ್ಣಗೊಳಿಸಿರಬೇಕು ಹಾಗೂ ನಿಗದಿತ ವೈದ್ಯಕೀಯ ಅರ್ಹತಾ ಮಾನದಂಡಗಳನ್ನು ಹೊಂದಿರಬೇಕು.
ವಯೋಮಿತಿ:
ಮೇ 20, 2026 ರಂತೆ
ಗರಿಷ್ಠ ವಯಸ್ಸಿನ ಮಿತಿ – 30 ವರ್ಷಗಳು
ವಯೋಮಿತಿ ಸಡಿಲಿಕೆ; ಪ.ಜಾತಿ, ಪ.ಪಂಗಡ ಹಾಗೂ ಸಿವಿಲಿಯನ್ ಕೇಂದ್ರ ಸರ್ಕಾರಿ ನೌಕರಿ ಅಭ್ಯರ್ಥಿಗಳಿಗೆ 05 ವರ್ಷಗಳು, ಒಬಿಸಿ ಅಭ್ಯರ್ಥಿಗಳಿಗೆ – 03 ವರ್ಷಗಳು.
ವೇತನ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 56,100ರೂ. ಗಳಿಂದ 1,77,500ರೂ.ವರೆಗೆ ಪ್ರತಿ ತಿಂಗಳು ವೇತನವನ್ನು ನೀಡಲಾಗುತ್ತದೆ.
ಆಯ್ಕೆ ವಿಧಾನ:
- ದೈಹಿಕ ಪ್ರಮಾಣೀಕರಣ ಪರೀಕ್ಷೆ (PST) & ದೈಹಿಕ ದಕ್ಷತೆ ಪರೀಕ್ಷೆ (PET)
- ಬಯೋಮೆಟ್ರಿಕ್ ಐಡೆಂಟಿಫಿಕೇಶನ್
- ಲಿಖಿತ ಪರೀಕ್ಷೆ
- ದಾಖಲಾತಿ ಪರಿಶೀಲನೆ & ಸಂದರ್ಶನ
- ಮೆರಿಟ್ ಲಿಸ್ಟ್ & ವೈದ್ಯಕೀಯ ಪರೀಕ್ಷೆ
ಅರ್ಜಿ ಶುಲ್ಕ:
ಸಾಮಾನ್ಯ, ಒಬಿಸಿ ಹಾಗೂ ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ ₹400
ಪ.ಜಾತಿ, ಪ.ಪಂಗಡ, ಮಾಜಿ ಸೈನಿಕ ವರ್ಗ ಮತ್ತು ಮಹಿಳಾ ಅಭ್ಯರ್ಥಿಗಳಿಗೆ – ಅರ್ಜಿ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಸುವ ವಿಧಾನ
• ಅಭ್ಯರ್ಥಿಗಳು ಐಟಿಬಿಪಿ ನೇಮಕಾತಿ ಜಾಲತಾಣ https://recruitment.itbpolice.nic.in/rect/index.php ಕ್ಕೆ ಭೇಟಿ ನೀಡಿ.
• ಬಳಕೆದಾರರ ಇ-ಮೇಲ್ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ ಅಥವಾ ಹೊಸ ಬಳಕೆದಾರರಾಗಿದ್ದಲ್ಲಿ ಹೊಸದಾಗಿ ನೋಂದಾಯಿಸಿ.
• ನಂತರ “ITBPF-2026ರ ಸಹಾಯಕ ಕಮಾಂಡೆಂಟ್ (ಎಂಜಿನಿಯರ್) ಹುದ್ದೆಗೆ ನೇಮಕಾತಿ” ಅರ್ಜಿ ನಮೂನೆ ಆಯ್ಕೆ ಮಾಡಿ.
• ಬಳಿಕ ಅರ್ಜಿ ನಮೂನೆಯಲ್ಲಿ ಕೇಳಲಾಗುವ ಅಭ್ಯರ್ಥಿಯ ವೈಯಕ್ತಿಕ ಮಾಹಿತಿಗಳು, ಶೈಕ್ಷಣಿಕ ವಿವರ, ಅಭ್ಯರ್ಥಿಯ ಭಾವಚಿತ್ರ, ಸಹಿ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
• ಮುಂದುವರೆದಂತೆ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸಿ.
• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಎಚ್ಚರಿಕೆಯಿಂದ ಪರಿಶೀಲಿಸಿ ತಿದ್ದುಪಡಿಗಳಿದ್ದಲ್ಲಿ ಅದನ್ನು ಸರಿಪಡಿಸಿ ಸಲ್ಲಿಸಿ.
• ಅಂತಿಮವಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ.
Important Direct Links:
| Official Notification PDF | Download |
| Online Application Form Link | Apply Now |
| Official Website | itbpolice.nic.in |
| More Updates | KarnatakaHelp.in |
Triveni Daveanada pol