‘ಹೈಕೋರ್ಟ್‌’ನಲ್ಲಿ ಸಿವಿಲ್‌ ನ್ಯಾಯಾಧೀಶರ ಭರ್ತಿ; ಅರ್ಜಿ ಆಹ್ವಾನ

ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ

Published on:

ಬೆಂಗಳೂರು: ಕರ್ನಾಟಕ ಉಚ್ಚ ನ್ಯಾಯಾಲಯ(ಹೈಕೋರ್ಟ್‌)ವು 90 ಸಿವಿಲ್‌ ನ್ಯಾಯಾಧೀಶರ ನೇರ ನೇಮಕಾತಿಗಾಗಿ ಆಸಕ್ತರಿಂದ ಆನ್ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದೆ.

15 ಹೊಸ ಸ್ಥಾನಗಳು ಸೇರಿದಂತೆ 75 ಬ್ಯಾಕ್‌ಲಾಗ್‌ ಸ್ಥಾನಗಳಿಗೆ ಭರ್ತಿ ಪ್ರಕ್ರಿಯೆ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು ಕಾನೂನು ಪದವಿ ಜೊತೆಗೆ ಇತರೆ ಅರ್ಹತೆ ಹೊಂದಿರಬೇಕು. ಅರ್ಜಿ ಸಲ್ಲಿಸಲು ಮೇ 15 ಕೊನೆಯ ದಿನವಾಗಿದ್ದು, ಅಧಿಸೂಚನೆ, ಅರ್ಜಿ ಸಲ್ಲಿಕೆ ಲಿಂಕ್‌ಗಾಗಿ https://judiciary.karnataka.gov.in/recsubnotify.php?p=1188&stateNM=ಗೆ ಭೇಟಿ ನೀಡಿ.

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ – ಏಪ್ರಿಲ್‌ 16
  • ಅರ್ಜಿ ಸಲ್ಲಿಸಲು ಹಾಗೂ ಶುಲ್ಕ ಭರಿಸಲು ಕೊನೆಯ ದಿನ – ಮೇ 15

ಶೈಕ್ಷಣಿಕ ಅರ್ಹತೆ:

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಹೊಂದಿರಬೇಕು.

ಇತರೆ ಅರ್ಹತೆ: (ಎ) ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ ಅಥವಾ ದೇಶದ ಉಚ್ಚ ನ್ಯಾಯಾಲಯಗಳಲ್ಲಿ ಅಥವಾ ಜಿಲ್ಲಾ ಮತ್ತು ಅಧಿವಿಚಾರಣಾ ನ್ಯಾಯಾಲಯಗಳಲ್ಲಿ ವಕೀಲರಾಗಿ ಕಾರ್ಯನಿರ್ವಹಿಸುತ್ತಿರಬೇಕು ಮತ್ತು ಮೂರು ವರ್ಷಗಳಿಗಿಂತ ಕಡಿಮೆಯಲ್ಲದ ಅವಧಿಯವರಗೆ ನಿರಂತರವಾಗಿ ವೃತ್ತಿಯನ್ನು ಮಾಡಿರಬೇಕು ಅಥವಾ ಕೇಂದ್ರ ಸರ್ಕಾರ ಅಥವಾ ದೇಶದ ರಾಜ್ಯ ಸರ್ಕಾರಗಳ ಪೂರ್ಣಾವಧಿಯ ಉದ್ಯೋಗದಲ್ಲಿ ಸರ್ಕಾರಿ ನ್ಯಾಯವಾದಿಯಾಗಿ ಕೆಲಸ ನಿರ್ವಹಿಸಿರಬೇಕು ಮತ್ತು ಮೂರು ವರ್ಷಗಳಿಗಿಂತ ಕಡಿಮೆಯಲ್ಲದ ಅವಧಿವರೆಗೆ ಕಾರ್ಯನಿರ್ವಹಿಸಿರಬೇಕು.

ವಯೋಮಿತಿ:

ಪ.ಜಾತಿ, ಪ.ಪಂಗಡ, ಹಿಂದುಳಿದ ವರ್ಗಗಳ ಪ್ರವರ್ಗ-I ಅಭ್ಯರ್ಥಿಗಳು 45 ವರ್ಷಗಳು
ಇತರೆ ಹಿಂದುಳಿದ ವರ್ಗಗಳ ಪ್ರವರ್ಗ-II(ಎ)/II(ಬಿ)/III(ಎ)/III(ಬಿ) ಅಭ್ಯರ್ಥಿಗಳಿಗೆ 43 ವರ್ಷಗಳು
ಇತರೆ ಯಾವುದೇ ವರ್ಗದ ಅಭ್ಯರ್ಥಿಗಳಿಗೆ 40 ವರ್ಷಗಳು

ಸೂಚನೆ: ಸರ್ಕಾರಿ ನಿಯಮಗಳ ಪ್ರಕಾರ ವರ್ಗವಾರು ವಯೋಮಿತಿ ಸಡಿಲಿಕೆ ಇರಲಿದೆ.

ಆಯ್ಕೆ ಪ್ರಕ್ರಿಯೆ:

ಮೂರು ಹಂತದ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.

  • ಪೂರ್ವಭಾವಿ ಪರೀಕ್ಷೆ
  • ಮುಖ್ಯ ಪರೀಕ್ಷೆ
  • ಮೌಖಿಕ ಸಂದರ್ಶನ

ಸಂಬಳ:

ವೇತನ ಶ್ರೇಣಿ- ₹77,840 ರಿಂದ 1,36,520/-

ಪರೀಕ್ಷಾ ಶುಲ್ಕ:

ಪೂರ್ವಭಾವಿ ಪರೀಕ್ಷೆಗೆ ಶುಲ್ಕ: ಸಾಮಾನ್ಯ ವರ್ಗ ಮತ್ತು ಪ್ರವರ್ಗ-II(ಎ) / II(ಬಿ) / III(ಎ) / III(ಬಿ)ರ ಅಭ್ಯರ್ಥಿಗಳಿಗೆ ₹1000/- (ಮುಖ್ಯ ಪರೀಕ್ಷೆ ಶುಲ್ಕ; 1,500/-)
ಪ.ಜಾತಿ/ಪ.ಪಂಗಡ/ಪ್ರವರ್ಗ-I ವರ್ಗ/ಅಂಗವಿಕ ಅಭ್ಯರ್ಥಿಗಳಿಗೆ ₹500/- (ಮುಖ್ಯ ಪರೀಕ್ಷೆ ಶುಲ್ಕ;750/-)

ಅರ್ಜಿ ಸಲ್ಲಿಸುವ ಪರಿ..

ಹಂತ-1 ಅಧಿಕೃತ ವೆಬ್‌ಸೈಟ್‌ https://judiciary.karnataka.gov.in/index_kan.php#ಗೆ ಭೇಟಿ.

ಹಂತ-2 ನಂತರ “ಅಧಿಸೂಚನೆಗಳು/Notifications” ವಿಭಾಗದಡಿ “ನೇಮಕಾತಿಗಳು(Recruitments)” ಎಂಬ ಉಪವಿಭಾಗದಡಿ ನೀಡಲಾದ “High Court” ವಿಭಾಗದ ಮೇಲೆ ಒತ್ತಿ.

ಹಂತ-3 ತದನಂತರ ಹೊಸಪುಟ ತೆರೆದುಕೊಳ್ಳುತ್ತದೆ, ಅಲ್ಲಿ “Notification No. HCRB/CJR 09/2026 for direct recruitment of 90 Posts of Civil Judges” ಶಿರ್ಷೀಕೆ ಲಿಂಕ್‌ ಮೇಲೆ ಒತ್ತಿ, ಮುಂದೆ “To Apply Online –Click Here” ಲಿಂಕ್‌ ಮೇಲೆ ಒತ್ತುವ ಮೂಲಕ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ. ನಮೂನೆಯಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಿ, ಪರೀಕ್ಷಾ ಶುಲ್ಕ ಪಾವತಿಸಿ.

Karnataka High Court Civil Judge Online Form 2026
ಕರ್ನಾಟಕ ಹೈಕೋರ್ಟ್‌ ನೇಮಕಾತಿ 2026ರ ಆನ್‌ಲೈನ್‌ ಅರ್ಜಿ ನಮೂನೆ

Important Direct Links:

Official Notification PDFDownload
Online Application Form LinkApply Now
Official Websitejudiciary.karnataka.gov.in
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ತೊಡಗಿಕೊಂಡಿದ್ದೇನೆ.

Leave a Comment