ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ(SHIMUL)ದಲ್ಲಿ ವಿವಿಧ ವೃಂದದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.
ಸಹಾಯಕ ವ್ಯವಸ್ಥಾಪಕ, ಎಂಐಎಸ್/ಸಿಸ್ಟಂ ಆಫೀಸರ್, ಮಾರುಕಟ್ಟೆ ಅಧಿಕಾರಿ, ತಾಂತ್ರಿಕ ಅಧಿಕಾರಿಗಳು ಹಾಗೂ ಇತರೆ ಹುದ್ದೆಗಳೂ ಸೇರಿ ಒಟ್ಟು 194 ಹುದ್ದೆಗಳಿಗೆ ನೇರ ನೇಮಕಾತಿ ನಡೆಯಲಿದೆ. ಹುದ್ದೆಗಳಿಗೆ ನಿಗದಿಪಡಿಸಿದ ಅರ್ಹತಾ ಮಾನದಂಡ ಪೂರೈಸುವ ಆಸಕ್ತರು ನ.14 ರಿಂದ ಡಿ.14ರೊಳಗೆ https://virtualofficeerp.com/shimul2025/instructionನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಕೋರಲಾಗಿದೆ.
ಮುಖ್ಯ ದಿನಾಂಕಗಳು ಎಂತ?
- ಅರ್ಜಿ ಸಲ್ಲಿಕೆ ಆರಂಭ ದಿನಾಂಕ – ನವೆಂಬರ್ 14, 2025
- ಅರ್ಜಿ ಸಲ್ಲಿಸಲು ಕೊನೆ ದಿನ – ಡಿಸೆಂಬರ್ 14, 2025
ಖಾಲಿ ಹುದ್ದೆಗಳ ವಿವರಗಳು:
ಸಹಾಯಕ ವ್ಯವಸ್ಥಾಪಕರು(ಎಹೆಚ್/ಎಐ) – 17 ಹುದ್ದೆಗಳು
ಸಹಾಯಕ ವ್ಯವಸ್ಥಾಪಕರು(ಆಡಳಿತ) – 01 ಹುದ್ದೆ
ಸಹಾಯಕ ವ್ಯವಸ್ಥಾಪಕರು (ಎಫ್ಅಂಡ್ ಎಫ್) – 03 ಹುದ್ದೆಗಳು
ಎಂಐಎಸ್ / ಸಿಸ್ಟಂ ಆಫೀಸರ್ – 01 ಹುದ್ದೆ
ಮಾರುಕಟ್ಟೆ ಅಧಿಕಾರಿ – 02 ಹುದ್ದೆಗಳು
ತಾಂತ್ರಿಕ ಅಧಿಕಾರಿ (ಅಭಿಯಂತರ) – 02 ಹುದ್ದೆಗಳು
ತಾಂತ್ರಿಕ ಅಧಿಕಾರಿ (ಗುಣನಿಯಂತ್ರಣ) – 02 ಹುದ್ದೆಗಳು
ತಾಂತ್ರಿಕ ಅಧಿಕಾರಿ(ಡಿಜಿ) – 14 ಹುದ್ದೆಗಳು
ಕೆಮಿಸ್ಟ್ ದರ್ಜೆ-1 – 04 ಹುದ್ದೆಗಳು
ವಿಸ್ತರಣಾಧಿಕಾರಿ ದರ್ಜೆ 3 – 17 ಹುದ್ದೆಗಳು
ಆಡಳಿತ ಸಹಾಯಕ ದರ್ಜೆ 2 – 17 ಹುದ್ದೆಗಳು
ಲೆಕ್ಕ ಸಹಾಯಕ ದರ್ಜೆ 2 – 12 ಹುದ್ದೆಗಳು
ಮಾರುಕಟ್ಟೆ ಸಹಾಯಕ ದರ್ಜೆ 2 – 10 ಹುದ್ದೆಗಳು
ಕೆಮಿಸ್ಟ್ ದರ್ಜೆ 2 – 28 ಹುದ್ದೆಗಳು
ಕಿರಿಯ ಸಿಸ್ಟಂ ಆಪರೇಟರ್ – 13 ಹುದ್ದೆಗಳು
ಶೀಘ್ರಲಿಪಿಗಾರ ದರ್ಜೆ 2 – 1 ಹುದ್ದೆ
ಕಿರಿಯ ತಾಂತ್ರಿಕರು – 50 ಹುದ್ದೆಗಳು
ಶೈಕ್ಷಣಿಕ ಅರ್ಹತೆ:
ಸಹಾಯಕ ವ್ಯವಸ್ಥಾಪಕ(ಎಹೆಚ್/ಎಐ) ಹುದ್ದೆಗೆ – ಪಶುವೈದ್ಯಕೀಯ ವಿಜ್ಞಾನ ಮತ್ತು ಪಶು ಸಂಗೋಪನೆ ವಿಷಯದಲ್ಲಿ (ಬಿ.ವಿ.ಎಸ್ಸಿ ಅಂಡ್ ಎಹೆಚ್) ಪದವಿಯ
ಸಹಾಯಕ ವ್ಯವಸ್ಥಾಪಕರು(ಆಡಳಿತ) ಹುದ್ದೆಗೆ – ಮಾನವ ಸಂಪನ್ಮೂಲ ವಿಷಯದಲ್ಲಿ 02 ವರ್ಷಗಳ ಪೂರ್ಣಾವಧಿ ಎಂಬಿಎ(MBL) ಜೊತೆಗೆ ಆಡಳಿತ ನಿರ್ವಹಣೆಯಲ್ಲಿ 03 ವರ್ಷಗಳ ಅನುಭವ + ಕಂಪ್ಯೂಟರ್ ನಿರ್ವಹಣೆ ಜ್ಞಾನ.
ಸಹಾಯಕ ವ್ಯವಸ್ಥಾಪಕ(ಎಫ್ ಅಂಡ್ ಎಫ್) ಹುದ್ದೆಗೆ – ಕೃಷಿ ವಿಜ್ಞಾನ ವಿಷಯದಲ್ಲಿ ಬಿ.ಎಸ್ಸಿ (ಕೃಷಿ) ಪದವಿ
ಎಂಐಎಸ್ / ಸಿಸ್ಟಂ ಆಫೀಸರ್ ಹುದ್ದೆಗೆ– ಬಿಇ ಕಂಪ್ಯೂಟರ್ ಸೈನ್ಸ್ / ಇನ್ಫಾರ್ಮೇಷನ್ ಸೈನ್ಸ್ ಇಂಜಿನಿಯರಿಂಗ್ ಪದವಿ
ಮಾರುಕಟ್ಟೆ ಅಧಿಕಾರಿ ಹುದ್ದೆಗೆ – ಬಿ.ಕಾಂ ಅಥವಾ ಬಿ.ಎಸ್ಸಿ ಅಥವಾ ಬಿಬಿಎಂ ಪದವಿ ಜೊತೆಗೆ ಮಾರುಕಟ್ಟೆಯಲ್ಲಿ 03 ವರ್ಷಗಳ ಅನುಭವ + ಕಂಪ್ಯೂಟರ್ ನಿರ್ವಹಣೆ ಜ್ಞಾನ.
ತಾಂತ್ರಿಕ ಅಧಿಕಾರಿ (ಅಭಿಯಂತರ) ಹುದ್ದೆಗೆ– ಬಿಇ (ಮೆಕಾನಿಕಲ್) ಪದವಿ ಅಥವಾ ಬಿಇ (ಎಲೆಕ್ಟಿಕಲ್ & ಎಲೆಕ್ಟ್ರಾನಿಕ್ಸ್) ಪದವಿ.
ತಾಂತ್ರಿಕ ಅಧಿಕಾರಿ (ಗುಣನಿಯಂತ್ರಣ) ಹುದ್ದೆಗೆ – ಎಂ.ಎಸ್ಸಿ (ಕೆಮಿಸ್ಟ್ರಿ) ಸ್ನಾತಕೋತ್ತರ ಪದವಿ ಅಥವಾ ಎಂ.ಎಸ್ಸಿ (ಮೈಕ್ರೋಬಯಾಲಜಿ) ಸ್ನಾತಕೋತ್ತರ ಪದವಿ.
ತಾಂತ್ರಿಕ ಅಧಿಕಾರಿ (ಡಿಟಿ) ಹುದ್ದೆಗೆ – ಬಿ.ಟೆಕ್ (ಡೈರಿ ಟೆಕ್ನಾಲಜಿ) ಪದವಿ
ಕೆಮಿಸ್ಟ್ ದರ್ಜೆ-1 ಹುದ್ದೆಗೆ – ಬಿ.ಎಸ್ಸಿ ಪದವಿಯಲ್ಲಿ ಕೆಮಿಸ್ಟ್ರಿ ವಿಷಯ ಅಥವಾ ಬಿ.ಎಸ್ಸಿ ಪದವಿಯಲ್ಲಿ ಮೈಕ್ರೋಬಯಾಲಜಿ ವಿಷಯ ಅಧ್ಯಯನ ಮಾಡಿರಬೇಕು. ಡೇರಿ/ಆಹಾರ ಸಂಸ್ಕರಣಾ ಘಟಕಗಳಲ್ಲಿ ಕನಿಷ್ಟ 02 ವರ್ಷಗಳ ಅನುಭವ.
ವಿಸ್ತರಣಾಧಿಕಾರಿ, ಆಡಳಿತ ಸಹಾಯಕ ದರ್ಜೆ ಹುದ್ದೆಗೆ – ಯಾವುದೇ ಪದವಿ
ಲೆಕ್ಕ ಸಹಾಯಕ ದರ್ಜೆ-2 ಹುದ್ದೆಗೆ – ಬಿ.ಕಾಂ ಪದವಿ ಜೊತೆಗೆ ಟ್ಯಾಲಿ ಸರ್ಟಿಫಿಕೇಟ್ ಅಥವಾ ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು.
ಮಾರುಕಟ್ಟೆ ಸಹಾಯಕ ದರ್ಜೆ 2 ಹುದ್ದೆಗೆ – ಬಿಬಿಎಂ ಬಿ.ಎಸ್ಸಿ/ಬಿ.ಕಾಂ ಪದವಿ
ಕೆಮಿಸ್ಟ್ ದರ್ಜೆ 2 ಹುದ್ದೆಗಳಿಗೆ – ಬಿ.ಎಸ್ಸಿ ಪದವಿಯಲ್ಲಿ ಕೆಮಿಸ್ಟ್ರಿ ಅಥವಾ ಮೈಕ್ರೋಬಯಾಲಜಿ ಒಂದು ವಿಷಯವನ್ನಾಗಿ ವ್ಯಾಸಂಗ ಮಾಡಿರುವುದರ ಜೊತೆಗೆ ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕ
ಕಿರಿಯ ಸಿಸ್ಟಂ ಆಪರೇಟರ್ ಹುದ್ದೆಗೆ – ಯಾವುದೇ ಪದವಿ ಜೊತೆಗೆ ಕನಿಷ್ಟ 1 ವರ್ಷದ ಡಿಪ್ಲೋಮಾ ಇನ್ ಕಂಪ್ಯೂಟರ್ ಅಪ್ಲಿಕೇಷನ್ ಕೋರ್ಸ್ ಹಾಗೂ 03 ವರ್ಷಗಳ ಅನುಭವ.
ಶೀಘ್ರಲಿಪಿಗಾರ ದರ್ಜೆ 2 ಹುದ್ದೆಗೆ – ಯಾವುದೇ ಪದವಿ + ಸೀನಿಯರ್ ಇಂಗ್ಲೀಷ್ ಮತ್ತು ಕನ್ನಡ ಶಾರ್ಟ್ ಹ್ಯಾಂಡ್ನೊಂದಿಗೆ ಕಂಪ್ಯೂಟರ್ ಆಫೀಸ್ ಪ್ಯಾಕೇಜ್ ನಿರ್ವಹಣೆಗಳ ಜ್ಞಾನ ಹೊಂದಿರಬೇಕು.
ಕಿರಿಯ ತಾಂತ್ರಿಕ ಹುದ್ದೆಗೆ – ಎಸ್ಸೆಸ್ಸೆಲ್ಸಿ ಜೊತೆಗೆ ಸಂಬಂಧಿತ ಟ್ರೇಡ್ನಲ್ಲಿ ಐಟಿಐ ಪ್ರಮಾಣ ಪತ್ರ.
ವಯೋಮಿತಿ:
14-12-2025ರಂತೆ;
ಪ.ಜಾತಿ ಪ್ರವರ್ಗ-ಎ/ಪ.ಜಾತಿ ಪ್ರವರ್ಗ-ಬಿ/ಪ.ಜಾತಿ ಪ್ರವರ್ಗ-ಸಿ/ಪ.ಪಂಗಡ ಮತ್ತು ಪ್ರವರ್ಗ 1 ಅಭ್ಯರ್ಥಿಗಳಿಗೆ – 40 ವರ್ಷಗಳು (+3=43)
ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ – 38 ವರ್ಷಗಳು (+3=41)
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ – 35 ವರ್ಷಗಳು (+3=38)
ಸರ್ಕಾರದ ಆದೇಶದಂತೆ ನೇಮಕಾತಿ ನಿಯಮಗಳಲ್ಲಿ ನಿಗದಿಪಡಿಸಿರುವ ಗರಿಷ್ಟ ವಯೋಮಿತಿಯಲ್ಲಿ ಒಂದು ಬಾರಿಯ ಕ್ರಮವಾಗಿ 03 ವರ್ಷಗಳ ಸಡಿಲಿಕೆ ನಿದಿಪಡಿಸಲಾಗಿದೆ.
ಆಯ್ಕೆ ಪ್ರಕ್ರಿಯೆ:
- ಲಿಖಿತ ಪರೀಕ್ಷೆ
- ಸಂದರ್ಶನ
ಸಂಬಳ:
| ಹುದ್ದೆಗಳ ಹೆಸರು | ವೇತನ ಶ್ರೇಣಿ (ಪ್ರ.ತಿಂ) |
| ಸಹಾಯಕ ವ್ಯವಸ್ಥಾಪಕರು ಹುದ್ದೆಗಳಿಗೆ | 83700 ರಿಂದ 155200 |
| ಎಂಐಎಸ್ / ಸಿಸ್ಟಂ ಆಫೀಸರ್, ಮಾರುಕಟ್ಟೆ ಅಧಿಕಾರಿ, ತಾಂತ್ರಿಕ ಅಧಿಕಾರಿ (ಅಭಿಯಂತರ), ತಾಂತ್ರಿಕ ಅಧಿಕಾರಿ (ಗುಣನಿಯಂತ್ರಣ/ಡಿಜಿ) ಹುದ್ದೆಗಳಿಗೆ | 69250 ರಿಂದ 134200 |
| ಕೆಮಿಸ್ಟ್ ದರ್ಜೆ-1, ವಿಸ್ತರಣಾಧಿಕಾರಿ ದರ್ಜೆ 3 ಹುದ್ದೆಗಳಿಗೆ | 54175 ರಿಂದ 99400 |
| ಆಡಳಿತ ಸಹಾಯಕ ದರ್ಜೆ 2, ಲೆಕ್ಕ ಸಹಾಯಕ ದರ್ಜೆ 2, ಮಾರುಕಟ್ಟೆ ಸಹಾಯಕ ದರ್ಜೆ 2, ಕೆಮಿಸ್ಟ್ ದರ್ಜೆ 2, ಕಿರಿಯ ಸಿಸ್ಟಂ ಆಪರೇಟರ್ ಮತ್ತು ಶೀಘ್ರಲಿಪಿಗಾರ ದರ್ಜೆ 2 ಹುದ್ದೆಗಳಿಗೆ | 44425 ರಿಂದ 83700 |
| ಕಿರಿಯ ತಾಂತ್ರಿಕರು ಹುದ್ದೆಗಳಿಗೆ | 34100 ರಿಂದ 67600 |
ಅರ್ಜಿ ಶುಲ್ಕ:
ಪ.ಜಾತಿ ಪ್ರವರ್ಗ-ಎ/ಪ.ಜಾತಿ ಪ್ರವರ್ಗ-ಬಿ/ಪ.ಜಾತಿ ಪ್ರವರ್ಗ-ಸಿ/ಪ.ಪಂಗಡ ಮತ್ತು ಪ್ರವರ್ಗ 1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ – ರೂ.500/-
ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ – ರೂ.1000/-
*ಬ್ಯಾಂಕ್ ಶುಲ್ಕ ಪ್ರತ್ಯೇಕ
ಅರ್ಜಿ ಹೀಗೆ ಸಲ್ಲಿಸಿ…
ಹಂತ-1 ಮೊದಲು ಅಧಿಕೃತ ಜಾಲತಾಣ https://www.shimul.coop/ಕ್ಕೆ ಭೇಟಿ ನೀಡಿ ಅಥವಾ ನೇರವಾಗಿ “https://virtualofficeerp.com/shimul2025/instruction” ಭೇಟಿ ನೀಡಿ ಹಂತ-3ರನ್ನು ಅನುಸರಿಸಿ.
ಹಂತ-2 ನಂತರ ಮುಖಪುಟದಲ್ಲಿ ನೀಡಲಾದ “SHIMUL Recruitment 2025” ಲಿಂಕ್ ಮೇಲೆ ಕ್ಲಿಕ್ ಮಾಡಿ.
ಹಂತ-3 ಮುಂದೆ ಮತ್ತೊಂದು ಪುಟಕ್ಕೆ ನಿರ್ದೇಶಿಸಲಾಗುತ್ತದೆ. ಅಲ್ಲಿ “New Registration” ಮೇಲೆ ಒತ್ತಿ ನೋಂದಣಿ ಮಾಡಿಕೊಂಡು, “Login” ಮಾಡಿಕೊಳ್ಳಿ. ಅರ್ಜಿ ನಮೂನೆಯಲ್ಲಿ ಕೇಳಲಾದ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ ಜೊತೆಗೆ ನಿಗದಿತ ದಾಖಲೆಗಳನ್ನು ಅಪ್ಲೋಡ್ ಮಾಡಿ
ಹಂತ-4 “Pay Online” ಗುಂಡಿಯನ್ನು ಒತ್ತುವ ಮೂಲಕ ಅರ್ಜಿ ಶುಲ್ಕ ಪಾವತಿಸುವ ಮೂಲಕ ಅರ್ಜಿ ಸಲ್ಲಿಕೆಯಾಗುತ್ತದೆ. ಭವಿಷ್ಯದ ಅವಶ್ಯಕತೆಗಾಗಿ ಅರ್ಜಿ ಸಲ್ಲಿಕೆ ನಮೂನೆ ಪ್ರಿಂಟ್ ತೆಗೆದುಕೊಳ್ಳಿರಿ.
Important Direct Links:
| Official Notification PDF | Download |
| Online Application Form Link | Apply Now |
| Official Website | www.shimul.coop |
| More Updates | KarnatakaHelp.in |


