ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (KSIIDC)ದಿಂದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಖಾಲಿ ಇರುವ ತಾಂತ್ರಿಕ ಸಿಬ್ಬಂದಿ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ ಎಂದು ನಿಗಮದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿವಮೊಗ್ಗ ಮತ್ತು ವಿಜಯಪುರ ವಿಮಾನ ನಿಲ್ದಾಣಗಳಲ್ಲಿ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಏರ್ಪೋರ್ಟ್ ಡೈರೆಕ್ಟರ್, ಸಿವಿಲ್ ಇಂಜಿನಿಯರ್ ಹೆಡ್, ಎಆರ್ ಎಫ್ಎಫ್ ಹೆಡ್, ಅಸಿಸ್ಟೆಂಟ್ ಟರ್ಮಿನಲ್ ಮ್ಯಾನೇಜರ್ ಸೇರಿದಂತೆ ಇತರೆ ಒಟ್ಟು 10 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಆಫ್ಲೈನ್ ಮೂಲಕ ಆಗಸ್ಟ್ 30 ರೊಳಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಶಿವಮೊಗ್ಗ ಏರ್ಪೋರ್ಟ್ ವಿಭಾಗದಲ್ಲಿ ಖಾಲಿ ಇರುವ ಹುದ್ದೆಗಳ ವಿವರ ಹಾಗೂ ಶೈಕ್ಷಣಿಕ ಅರ್ಹತೆ:
ಏರ್ಪೋರ್ಟ್ ಡೈರೆಕ್ಟರ್ (01 ಹುದ್ದೆ):- ಅಭ್ಯರ್ಥಿಯು ಯಾವುದೇ ವಿಭಾಗದಲ್ಲಿ ಪದವಿ ಪಡೆದಿರಬೇಕು. ಮುಖ್ಯವಾಗಿ ಬಿಸಿನೆಸ್, ವಿವಿಯೇಷನ್, ಅಡ್ಮಿನಿಸ್ಟ್ರೇಷನ್/ಇಂಜಿನಿಯರಿಂಗ್ನಲ್ಲಿ ಪದವಿ ಅಥವಾ ತತ್ಸಂಬಂಧಿತ ಕ್ಷೇತ್ರದಲ್ಲಿ ಪದವಿ ಪಡೆದಿರಬೇಕು.
ಸಿವಿಲ್ ಇಂಜಿನಿಯರ್ ಹೆಡ್ (01 ಹುದ್ದೆ):- ಅಭ್ಯರ್ಥಿಗಳು ಬಿಇ(ಸಿವಿಲ್)/ಎಂಇ/ಎಂ.ಟೆಕ್ ವಿಭಾಗದಲ್ಲಿ ಪದವಿ ಪಡೆದಿರಬೇಕು.
ಎಆರ್ಎಫ್ಎಫ್ಹೆಡ್ (01 ಹುದ್ದೆ):- ಅಭ್ಯರ್ಥಿಯು ಮೆಕಾನಿಕಲ್, ಎಲೆಕ್ಟ್ರಿಕಲ್, ಫೈರ್ ಇಂಜಿನಿಯರಿಂಗ್ ಗಳ ಪೈಕಿ ಯಾವುದೇ ಒಂದು ವಿಭಾಗದಲ್ಲಿ ಪದವಿ ಪಡೆದಿರಬೇಕು ಅಥವಾ ಪ್ರತಿಷ್ಠಿತ ಸಂಸ್ಥೆಗಳಿಂದ ಫೈರ್ ಸೇಫ್ಟಿ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮೋ ಹೊಂದಿರಬೇಕು.
ಅಸಿಸ್ಟೆಂಟ್ ಟರ್ಮಿನಲ್ ಮ್ಯಾನೇಜರ್ (01 ಹುದ್ದೆ):- ಅಭ್ಯರ್ಥಿಯು ಯಾವುದೇ ವಿಭಾಗದಲ್ಲಿ ಪದವಿ ಅಥವ ಡಿಪ್ಲೋಮಾ ಪದವಿ ಹೊಂದಿರಬೇಕು.
ಅಸಿಸ್ಟೆಂಟ್ ಏರ್ ಸೈಡ್ ಆಪರೇಷನಲ್ ಮ್ಯಾನೇಜರ್ (01 ಹುದ್ದೆ):- ಅಭ್ಯರ್ಥಿಯು ಯಾವುದೇ ವಿಭಾಗದಲ್ಲಿ ಪದವಿ ಅಥವಾ ಡಿಪ್ಲೋಮಾ ಪದವಿ ಹೊಂದಿರಬೇಕು.
ಏರ್ಪೋರ್ಟ್ ಸಿಸ್ಟಮ್ & ಐ ಟಿ ನೆಟ್ವರ್ಕ್ ಕನ್ಸಲ್ಟೆಂಟ್ (01 ಹುದ್ದೆ):- ಅಭ್ಯರ್ಥಿಯು ಎಐಸಿಟಿಇ /ಯುಜಿಸಿ ಮಾನ್ಯತೆ/ಅನುಮೋದಿತ ವಿಶ್ವವಿದ್ಯಾಲಯ ಸಂಸ್ಥೆಯಿಂದ ಎಲೆಕ್ಟ್ರಾನಿಕ್ಸ್ & ಕಮ್ಯೂನಿಕೇಶನ್ ಇಂಜಿನಿಯರಿಂಗ್/ಕಂಪ್ಯೂಟರ್ ಇಂಜಿನಿಯರಿಂಗ್ ಪದವಿ ಪಡೆದಿರಬೇಕು.
ವಿಜಯಪುರ ಏರ್ಪೋರ್ಟ್ ವಿಭಾಗದಲ್ಲಿ ಖಾಲಿ ಇರುವ ಹುದ್ದೆಗಳು ಹಾಗೂ ಶೈಕ್ಷಣಿಕ ಅರ್ಹತೆ:
ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಹೆಡ್ (01 ಹುದ್ದೆ):- ಅಭ್ಯರ್ಥಿಯು ಬಿಇ (ಎಲೆಕ್ಟ್ರಿಕಲ್)/ಎಂಇ/ಎಂ.ಟೆಕ್ ವಿಭಾಗದಲ್ಲಿ ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿರಬೇಕು.
ಏರ್ ಸೈಡ್ ಆಪರೇಷನಲ್ ಮ್ಯಾನೇಜರ್ (01 ಹುದ್ದೆ):- ಅಭ್ಯರ್ಥಿಯು ಯಾವುದೇ ಪದವಿ ಹೊಂದಿದ್ದು, ಏರ್ ಸೈಡ್ ಆಪರೇಷನ್ / ಸಿವಿಲ್ ವಿವಿಯೇಷನ್ ಪಿ.ಎನ್.ಯು ಏರ್ಪೋರ್ಟ್/ಪ್ರೈವೇಟ್ ಏರ್ಪೋರ್ಟ್ಗಳಲ್ಲಿ 3 ರಿಂದ 5 ವರ್ಷಗಳ ಅನುಭವ ಹೊಂದಿರಬೇಕು.
ಅಸಿಸ್ಟೆಂಟ್ ಸೆಕ್ಯೂರಿಟಿ ಡಿಪಾರ್ಟ್ಮೆಂಟ್ (01 ಹುದ್ದೆ):- ಅಭ್ಯರ್ಥಿಯು ಯಾವುದೇ ವಿಭಾಗದಲ್ಲಿ ಪದವಿ ಹೊಂದಿರಬೇಕು.
ಟೆಕ್ನಿಷಿಯನ್ ಕ0 ಆಟೋ ಮೆಕಾನಿಕ್ (01 ಹುದ್ದೆ):- ಅಭ್ಯರ್ಥಿಯು 3 ರಿಂದ 6 ವರ್ಷಗಳ ಡಿಪ್ಲೋಮಾ/ ಎಲೆಕ್ಟ್ರಿಕಲ್ / ಮೆಕಾನಿಕಲ್ / ಆಟೋಮೊಬೈಲ್ ಇಂಜಿನಿಯರಿಂಗ್ ನಲ್ಲಿ ಐಟಿಐ ನೊಂದಿಗೆ 3 ರಿಂದ 5 ವರ್ಷಗಳ ಅನುಭವ ಹೊಂದಿರಬೇಕು.
ಮೇಲಿನ ಎಲ್ಲಾ ಹುದ್ದೆಗಳಿಗೂ ಆಯಾ ವೃತ್ತಿಗೆ ಅನುಗುಣವಾಗಿ ವೃತ್ತಿ ಅನುಭವವನ್ನು ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ತಪ್ಪದೆ ಸಂಪೂರ್ಣ ಅದಿಸೂಚನೆಯನ್ನು ಓದಬೇಕು
ಶಿವಮೊಗ್ಗ ವಿಭಾಗದ ಹುದ್ದೆಗಳ ವಯೋಮಿತಿ:
✓ ಏರ್ಪೋರ್ಟ್ ಡೈರೆಕ್ಟರ್ ಹುದ್ದೆಗೆ – ಕನಿಷ್ಠ ಮಿತಿ – 35 ವರ್ಷಗಳು, ಗರಿಷ್ಠ ಮಿತಿ – 55 ವರ್ಷಗಳು
✓ ಸಿವಿಲ್ ಇಂಜಿನಿಯರ್ ಹೆಡ್/ಎಆರ್ಎಫ್ಎಫ್ಹೆಡ್/ ಹುದ್ದೆಗೆ – ಕನಿಷ್ಠ ಮಿತಿ- 30 ವರ್ಷಗಳು, ಗರಿಷ್ಠ ಮಿತಿ – 62 ವರ್ಷಗಳು
✓ ಅಸಿಸ್ಟೆಂಟ್ ಟರ್ಮಿನಲ್ ಮ್ಯಾನೇಜರ್/ಅಸಿಸ್ಟೆಂಟ್ ಏರ್ ಸೈಡ್ ಆಪರೇಷನಲ್ ಮ್ಯಾನೇಜರ್/ಏರ್ಪೋರ್ಟ್ ಸಿಸ್ಟಮ್ & ಐ ಟಿ ನೆಟ್ವರ್ಕ್ ಕನ್ಸಲ್ಟೆಂಟ್ ಹುದ್ದೆಗೆ – ಕನಿಷ್ಠ ಮಿತಿ- 25 ವರ್ಷಗಳು, ಗರಿಷ್ಠ ಮಿತಿ – 45 ವರ್ಷಗಳು
ವಿಜಯಪುರ ವಿಭಾಗದ ಹುದ್ದೆಗಳ ವಯೋಮಿತಿ:
✓ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಹೆಡ್ ಹುದ್ದೆಗೆ – ಕನಿಷ್ಠ ಮಿತಿ- 35 ವರ್ಷಗಳು, ಗರಿಷ್ಠ ಮಿತಿ – 62 ವರ್ಷಗಳು
✓ ಏರ್ ಸೈಡ್ ಆಪರೇಷನಲ್ ಮ್ಯಾನೇಜರ್ ಹುದ್ದೆಗೆ – ಕನಿಷ್ಠ ಮಿತಿ- 35 ವರ್ಷಗಳು, ಗರಿಷ್ಠ ಮಿತಿ – 55 ವರ್ಷಗಳು
✓ ಅಸಿಸ್ಟೆಂಟ್ ಸೆಕ್ಯೂರಿಟಿ ಡಿಪಾರ್ಟ್ಮೆಂಟ್ ಹುದ್ದೆಗೆ – ಕನಿಷ್ಠ ಮಿತಿ- 30 ವರ್ಷಗಳು, ಗರಿಷ್ಠ ಮಿತಿ – 40 ವರ್ಷಗಳು
✓ ಟೆಕ್ನಿಷಿಯನ್ ಕಂ-ಆಟೋ ಮೆಕಾನಿಕ್ ಹುದ್ದೆಗೆ – ಕನಿಷ್ಠ ಮಿತಿ- 25 ವರ್ಷಗಳು, ಗರಿಷ್ಠ ಮಿತಿ- 45 ವರ್ಷಗಳು
ಆಯ್ಕೆ ವಿಧಾನ:
ಅಭ್ಯರ್ಥಿಗಳ ಶಾರ್ಟ್ ಲಿಸ್ಟಿಂಗ್ (ವಿದ್ಯಾರ್ಹತೆ ಮತ್ತು ಅನುಭವದ ಮೇಲೆ)
ಸಂದರ್ಶನ
ದಾಖಲೆ ಪರಿಶೀಲನೆ
ಸಂಬಳ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 40,000-1,25,000ರೂ.ವರೆಗೆ ವೇತನವನ್ನು ನೀಡಲಾಗುತ್ತದೆ. (ಹುದ್ದೆಗಳ ಆಧಾರಿತ ವೇತನದ ಮಾಹಿತಿಗಾಗಿ ಅಧಿಸೂಚನೆ ಓದಿ)
ಅರ್ಜಿ ಶುಲ್ಕ:
ಉಲ್ಲೇಖಿಸಲಾಗಿರುವುದಿಲ್ಲ
How to Apply for KSIIDC Airport Technical Staff Recruitment 2025
ಅರ್ಜಿ ಸಲ್ಲಿಸುವ ವಿಧಾನ ಈ ಕೆಳಗಿನಂತಿದೆ;
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ಸ್ವ-ವಿವರ, ರೆಸ್ಯೂಮ್, ಶೈಕ್ಷಣಿಕ ವಿದ್ಯಾರ್ಹತೆ ಹಾಗೂ ವೃತ್ತಿ ಅನುಭವದ ಪ್ರಮಾಣ ಪತ್ರಗಳನ್ನು ಲಗತ್ತಿಸಿ ಈ ಕೆಳಗಿನ ವಿಳಾಸಕ್ಕೆ ಆಗಸ್ಟ್ 30ರೊಳಗೆ ಸ್ಪೀಡ್ ಪೋಸ್ಟ್/ಖುದ್ದಾಗಿ ಈ ಕೆಳಗಿನ ವಿಳಾಸಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.
ವಿಳಾಸ: ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (ಕೆಎಸ್ಐಐಡಿಸಿ),ಖನಿಜ ಭವನ’, 4ನೇ ಮಹಡಿ, ಪೂರ್ವ ಭಾಗ, ನಂ.49, ರೇಸ್ ಕೋರ್ಸ್ ರಸ್ತೆ, ಬೆಂಗಳೂರು-1
ಹೆಚ್ಚಿನ ಮಾಹಿತಿಗಾಗಿ: ಅಭ್ಯರ್ಥಿಗಳು ನೇಮಕಾತಿ ಸಂಬಂಧ ಹೆಚ್ಚಿನ ವಿವರಗಳಿಗಾಗಿ ಮೊಬೈಲ್ ಸಂಖ್ಯೆ 9845833566 ಅನ್ನು ಸಂಪರ್ಕಿಸಬಹುದು.
S,S,L,C,II,puc, Completing ms, kollesha