ಇಂಡಿಯನ್ ಓವರ್ಸೀಸ್ ಬ್ಯಾಂಕಿ(IOB)ನಲ್ಲಿ ಅಪ್ರೆಂಟಿಸ್ ಹುದ್ದೆಗಳ ಭರ್ತಿ

ಈ ನೇಮಕಾತಿಗೆ ಅರ್ಜಿ ಸಲ್ಲಿಕೆಗೆ ಬೇಕಾದ ಅರ್ಹತಾ ಮಾನದಂಡಗಳ ಕುರಿತು ಇಲ್ಲಿ ವಿವರಿಸಲಾಗಿದೆ.

Published on:

2025-26ನೇ ಸಾಲಿಗೆ ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಇಂಡಿಯನ್ ಓವರ್ಸೀಸ್ ಬ್ಯಾಂಕ್ (IOB) ಆ.8ರಂದು ಅಧಿಸೂಚನೆಯನ್ನು ಹೊರಡಿಸಿದೆ.

ಅಪ್ರೆಂಟಿಸ್ ಕಾಯ್ದೆಯಡಿಯಲ್ಲಿ ಒಟ್ಟು 750 ಅಪ್ರೆಂಟಿಸ್‌ಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಬ್ಯಾಂಕಿನಲ್ಲಿ ಕೆಲಸ ಮಾಡಲು ಆಸಕ್ತಿ ಇರುವವರು ಅಧಿಕೃತ ವೆಬ್ಸೈಟ್ https://www.iob.in/Careersಗೆ ಭೇಟಿ ನೀಡಿ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಸದರಿ ನೇಮಕಾತಿಗೆ ಬೇಕಾದ ವಿದ್ಯಾರ್ಹತೆ, ವಯಸ್ಸಿನ ಮಿತಿ, ಪ್ರಮುಖ ದಿನಾಂಕಗಳು, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ. ತಪ್ಪದೇ ಕೊನೆವರೆಗೂ ಓದಿ, ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಆಗಸ್ಟ್ 10, 2025
  • ಅರ್ಜಿ ಸಲ್ಲಿಸಲು‌ ಕೊನೆಯ ದಿನಾಂಕ – ಆಗಸ್ಟ್ 20, 2025

ಶೈಕ್ಷಣಿಕ ಅರ್ಹತೆ:

ಇಂಡಿಯನ್ ಓವರ್ಸೀಸ್ ಬ್ಯಾಂಕ್​ನ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ(Any Degree) ಪೂರ್ಣಗೊಳಿಸಿರಬೇಕು.

ವಯೋಮಿತಿ:

01-08-2025 ರಂತೆ;

  • ಕನಿಷ್ಠ ಮಿತಿ – 20 ವರ್ಷಗಳು
  • ಗರಿಷ್ಠ ಮಿತಿ – 28 ವರ್ಷಗಳು

ಸರ್ಕಾರಿ ನಿಯಮಗಳ ಪ್ರಕಾರ ಮೀಸಲಾತಿ ವರ್ಗಗಳಿಗೆ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.

ಆಯ್ಕೆ ಪ್ರಕ್ರಿಯೆ:

→ ಲಿಖಿತ ಪರೀಕ್ಷೆ
→ ಸ್ಥಳೀಯ ಭಾಷಾ ಪರೀಕ್ಷೆ
→ ವೈಯಕ್ತಿಕ ಸಂದರ್ಶನ
→ ವೈದ್ಯಕೀಯ ಪರೀಕ್ಷೆ

ವೇತನ:

ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮಾಸಿಕ 10000-15000ರೂ. ವರೆಗೆ ಸ್ಟೈಫಂಡ್ ನೀಡಲಾಗುತ್ತದೆ.

ಅರ್ಜಿ ಶುಲ್ಕ:

  • ಸಾಮಾನ್ಯ, ಇಡಬ್ಲ್ಯೂಎಸ್, ಒಬಿಸಿ ಅಭ್ಯರ್ಥಿಗಳಿಗೆ – 944ರೂ.
  • ಪ.ಜಾತಿ, ಪ. ಪಂಗಡ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ – 708ರೂ.
  • ಅಂಗವಿಕಲ ಅಭ್ಯರ್ಥಿಗಳಿಗೆ – 472ರೂ.

How to Apply for Indian Overseas Bank (IOB) Apprentice Recruitment 2025

ಆನ್ ಲೈನ್ ಮೂಲಕ ಅರ್ಜಿ‌ ಸಲ್ಲಿಸುವ ವಿಧಾನ;

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಸಂಪೂರ್ಣ ಅಧಿಸೂಚನೆಯನ್ನು ಓದಿ.

  1. ಅಧಿಕೃತ ವೆಬ್ಸೈಟ್ https://bfsissc.com/IndianOverSeasBankಗೆ ಭೇಟಿ ನೀಡಿ.
  2. ನಂತರ ಅಲ್ಲಿ Indian Overseas Bank Apprenticeship Program FY 2025-26 Round (2)ರ ಅಡಿಯಲ್ಲಿ Apprenticeship Application Form ಲಿಂಕ್​ ಮೇಲೆ ಕ್ಲಿಕ್ ಮಾಡಿ.
  3. ಅಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ.
  4. ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ ಹಾಗೂ ಶುಲ್ಕ ಪಾವತಿಸಿ.
  5. ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.

Important Direct Links:

IOB Official Notification PDFDownload
Online Application Form LinkApply Now
Official Websitewww.iob.in
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment