ಕರ್ನಾಟಕ ಕರಾವಳಿ ಭದ್ರತಾ ಪೊಲೀಸ್ ಠಾಣೆಗಳಲ್ಲಿ ತಾಂತ್ರಿಕ ಸಿಬ್ಬಂದಿ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ.
ಕರಾವಳಿ ಭದ್ರತಾ ಪೊಲೀಸ್ ಠಾಣೆಗಳಿಗೆ ಮಂಜೂರಾದ ದೋಣಿಗಳನ್ನು ನಡೆಸಲು 54 ವಿವಿಧ ರೀತಿಯ ತಾಂತ್ರಿಕ ಸಿಬ್ಬಂದಿ ಹುದ್ದೆಗಳಿಗೆ (ನಿವೃತ್ತ ನೌಕಾಪಡೆ/ಕೋಸ್ಟ್ ಗಾರ್ಡ್/ಬಿಎಸ್ಎಫ್ (ವಾಟರ್ ವಿಂಗ್) ಅಧಿಕಾರಿಗಳು/ಸಿಬ್ಬಂದಿ) ಅಭ್ಯರ್ಥಿಗಳನ್ನು 5 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸಲು ಸೆ.30 ರೊಳಗೆ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಉಡುಪಿಯ ಕರಾವಳಿ ಭದ್ರತಾ ಪೊಲೀಸ್, ಪೊಲೀಸ್ ಅಧೀಕ್ಷಕರು ಹಾಗೂ ತಾಂತ್ರಿಕ ಹುದ್ದೆಗಳಿಗೆ ವಿಶೇಷ ನೇಮಕಾತಿ ಸಮಿತಿಯ ಸದಸ್ಯ ಕಾರ್ಯದರ್ಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೇಮಕಾತಿಯ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ, ಅರ್ಜಿ ಸಲ್ಲಿಸಲು ನೌಕಾಪಡೆ/ಕೋಸ್ಟ್ ಗಾರ್ಡ್/ಬಿಎಸ್ಎಫ್ (ವಾಟರ್ ವಿಂಗ್)ನಿಂದ ನಿವೃತ್ತ ಹೊಂದಿರುವ ಅಧಿಕಾರಿಗಳು ಅರ್ಜಿ ಸಲ್ಲಿಸಲು ಅರ್ಹರು. ಜೊತೆಗೆ ನಿಗದಿತ ವೃತ್ತಿ ಅನುಭವವನ್ನು ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆ ಓದಿ. ಸುದ್ದಿಯ ಕೊನೆಯಲ್ಲಿ “Important Direct Links” ಶೀರ್ಷಿಕೆಯಡಿಯಲ್ಲಿ ನೀಡಲಾಗಿದೆ.
ವಯೋಮಿತಿ:
ಗರಿಷ್ಠ ವಯಸ್ಸಿನ ಮಿತಿ – 58 ವರ್ಷಗಳು
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ವಿಶೇಷ ನೇಮಕಾತಿ ಸಮಿತಿಯ ಮೂಲಕ ಸಂದರ್ಶನವನ್ನು ನಡೆಸಿ ಆಯ್ಕೆ ಮಾಡಲಾಗುತ್ತದೆ.
ವೇತನ:
ಮಾಸಿಕ 23,000-36,000ರೂ.ವರೆಗೆ
ಮೋಟಾರ್ ಲಾಂಚ್ ಎಂಜಿನಿಯರ್ – ರೂ.36,000/-
ಬೋಟ್ ಕ್ಯಾಪ್ಟನ್- ರೂ.34,000/-
ಸಹಾಯಕ ಬೋಟ್ ಕ್ಯಾಪ್ಟನ್ – ರೂ.27,000/-
ಮೋಟಾರ್ ಲಾಂಚ್ ಮೆಕ್ಯಾನಿಕ್ – ರೂ.27,000/-
ಇಂಜಿನ್ ಡ್ರೈವರ್ – ರೂ.25,000/-
ಖಲಾಸಿ – ರೂ.23,000/-
How to Apply for KSP Technical Staff Recruitment 2025
ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ
• ಅರ್ಜಿ ನಮೂನೆ ಹಾಗೂ ನೇಮಕಾತಿಯ ಅಧಿಸೂಚನೆಯನ್ನು ಈ ಕೆಳಗೆ ನೀಡಲಾಗಿರುವ ಲಿಂಕ್ ಮೂಲಕ ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ.
I am confident for