ಕರ್ನಾಟಕ ಕರಾವಳಿ ಭದ್ರತಾ ಪೊಲೀಸ್ ಠಾಣೆಗಳಲ್ಲಿ ತಾಂತ್ರಿಕ ಸಿಬ್ಬಂದಿ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ.
ಕರಾವಳಿ ಭದ್ರತಾ ಪೊಲೀಸ್ ಠಾಣೆಗಳಿಗೆ ಮಂಜೂರಾದ ದೋಣಿಗಳನ್ನು ನಡೆಸಲು 54 ವಿವಿಧ ರೀತಿಯ ತಾಂತ್ರಿಕ ಸಿಬ್ಬಂದಿ ಹುದ್ದೆಗಳಿಗೆ (ನಿವೃತ್ತ ನೌಕಾಪಡೆ/ಕೋಸ್ಟ್ ಗಾರ್ಡ್/ಬಿಎಸ್‌ಎಫ್ (ವಾಟರ್ ವಿಂಗ್) ಅಧಿಕಾರಿಗಳು/ಸಿಬ್ಬಂದಿ) ಅಭ್ಯರ್ಥಿಗಳನ್ನು 5 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸಲು ಸೆ.30 ರೊಳಗೆ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಉಡುಪಿಯ ಕರಾವಳಿ ಭದ್ರತಾ ಪೊಲೀಸ್, ಪೊಲೀಸ್ ಅಧೀಕ್ಷಕರು ಹಾಗೂ ತಾಂತ್ರಿಕ ಹುದ್ದೆಗಳಿಗೆ ವಿಶೇಷ ನೇಮಕಾತಿ ಸಮಿತಿಯ ಸದಸ್ಯ ಕಾರ್ಯದರ್ಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
- ಅಧಿಸೂಚನೆಯ ದಿನಾಂಕ – ಆಗಸ್ಟ್ 29, 2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಸೆಪ್ಟೆಂಬರ್ 30, 2025
ಹುದ್ದೆಗಳ ವಿವರ:
- ಮೋಟಾರ್ ಲಾಂಚ್ ಎಂಜಿನಿಯರ್ (ಪೊಲೀಸ್ ಇನ್ಸ್‌ಪೆಕ್ಟರ್ ದರ್ಜೆ) – 01 ಹುದ್ದೆ
- ಬೋಟ್ ಕ್ಯಾಪ್ಟನ್ (ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ದರ್ಜೆ) – 12 ಹುದ್ದೆಗಳು
- ಸಹಾಯಕ ಬೋಟ್ ಕ್ಯಾಪ್ಟನ್ (ಸಹಾಯಕ ಸಬ್ ಇನ್ಸ್‌ಪೆಕ್ಟರ್ ದರ್ಜೆ – 13 ಹುದ್ದೆಗಳು
- ಮೋಟಾರ್ ಲಾಂಚ್ ಮೆಕ್ಯಾನಿಕ್ (ಸಹಾಯಕ ಸಬ್ ಇನ್ಸ್‌ಪೆಕ್ಟರ್ ದರ್ಜೆ) – 02 ಹುದ್ದೆಗಳು
- ಇಂಜಿನ್ ಡ್ರೈವರ್ (ಹೆಡ್ ಕಾನ್ಸ್ಟೇಬಲ್ ದರ್ಜೆ) – 15 ಹುದ್ದೆಗಳು
- ಖಲಾಸಿ (ಪೊಲೀಸ್ ಕಾನ್‌ಸ್ಟೆಬಲ್ ದರ್ಜೆ) – 11 ಹುದ್ದೆಗಳು
ಶೈಕ್ಷಣಿಕ ಅರ್ಹತೆ:
ನೇಮಕಾತಿಯ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ, ಅರ್ಜಿ ಸಲ್ಲಿಸಲು ನೌಕಾಪಡೆ/ಕೋಸ್ಟ್ ಗಾರ್ಡ್/ಬಿಎಸ್‌ಎಫ್ (ವಾಟರ್ ವಿಂಗ್)ನಿಂದ ನಿವೃತ್ತ ಹೊಂದಿರುವ ಅಧಿಕಾರಿಗಳು ಅರ್ಜಿ ಸಲ್ಲಿಸಲು ಅರ್ಹರು. ಜೊತೆಗೆ ನಿಗದಿತ ವೃತ್ತಿ ಅನುಭವವನ್ನು ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆ ಓದಿ. ಸುದ್ದಿಯ ಕೊನೆಯಲ್ಲಿ “Important Direct Links” ಶೀರ್ಷಿಕೆಯಡಿಯಲ್ಲಿ ನೀಡಲಾಗಿದೆ.
ವಯೋಮಿತಿ:
ಗರಿಷ್ಠ ವಯಸ್ಸಿನ ಮಿತಿ – 58 ವರ್ಷಗಳು
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ವಿಶೇಷ ನೇಮಕಾತಿ ಸಮಿತಿಯ ಮೂಲಕ ಸಂದರ್ಶನವನ್ನು ನಡೆಸಿ ಆಯ್ಕೆ ಮಾಡಲಾಗುತ್ತದೆ.
ವೇತನ:
ಮಾಸಿಕ 23,000-36,000ರೂ.ವರೆಗೆ
- ಮೋಟಾರ್ ಲಾಂಚ್ ಎಂಜಿನಿಯರ್ – ರೂ.36,000/-
- ಬೋಟ್ ಕ್ಯಾಪ್ಟನ್- ರೂ.34,000/-
- ಸಹಾಯಕ ಬೋಟ್ ಕ್ಯಾಪ್ಟನ್ – ರೂ.27,000/-
- ಮೋಟಾರ್ ಲಾಂಚ್ ಮೆಕ್ಯಾನಿಕ್ – ರೂ.27,000/-
- ಇಂಜಿನ್ ಡ್ರೈವರ್ – ರೂ.25,000/-
- ಖಲಾಸಿ – ರೂ.23,000/-
How to Apply for KSP Technical Staff Recruitment 2025
ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ
• ಅರ್ಜಿ ನಮೂನೆ ಹಾಗೂ ನೇಮಕಾತಿಯ ಅಧಿಸೂಚನೆಯನ್ನು ಈ ಕೆಳಗೆ ನೀಡಲಾಗಿರುವ ಲಿಂಕ್ ಮೂಲಕ ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ.
• ಅರ್ಜಿ ನಮೂನೆ ಹಾಗೂ ನೇಮಕಾತಿಯ ಅಧಿಸೂಚನೆ ಲಿಂಕ್ :- https://karnatakahelp.in/wp-content/uploads/2025/08/KSP-Technical-Staff-Recruitment-2025-Application-Form.pdf
• ಅರ್ಜಿ ನಮೂನೆಯಲ್ಲಿ ಕೇಳಲಾಗಿರುವ ಸ್ವ ವಿವರ ನಮೂದಿಸಿ. ಭಾವಚಿತ್ರ, ಶೈಕ್ಷಣಿಕ ಅರ್ಹತೆಯ ಪ್ರಮಾಣ ಪತ್ರ ಹಾಗೂ ಇತರೆ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ.
ಈ ಕೆಳಗೆ ನೀಡಲಾಗಿರುವ ವಿಳಾಸಕ್ಕೆ ಸ್ಪೀಡ್ ಪೋಸ್ಟ್ ಅಥವಾ ಕೊರಿಯರ್ ಮೂಲಕ ಸೆಪ್ಟೆಂಬರ್ 30ರ ಸಂಜೆ 4:30 ರೊಳಗೆ ಕಳುಹಿಸಬೇಕು.
ವಿಳಾಸ: ಪೊಲೀಸ್ ಅಧೀಕ್ಷಕರ ಕಚೇರಿ, ಕರಾವಳಿ ಭದ್ರತಾ ಪೊಲೀಸ್, ಉಡುಪಿ ಕರ್ನಾಟಕ
ಹೆಚ್ಚಿನ ಮಾಹಿತಿಗಾಗಿ: ನೇಮಕಾತಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ದೂರವಾಣಿ ಸಂಖ್ಯೆ 0820-2538120 ಅನ್ನು ಸಂಪರ್ಕಿಸಬಹುದು.
Important Direct Links:
| Official Notification and | Download |
| Official Application Form PDF | Download |
| Official Website | ksp.karnataka.gov.in |
| More Updates | KarnatakaHelp.in |
I am confident for
Job
Un employee