ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ವತಿಯಿಂದ 2025ನೇ ಸಾಲಿಗೆ ಪದವಿ, ಸ್ನಾತಕೋತ್ತರ ಪದವಿ, ಬೋಧಕರು ಹಾಗೂ ಜನಸಾಮಾನ್ಯರ ಆವಿಷ್ಕಾರ/ನಾವಿನ್ಯತೆಗೆ ಪುರಸ್ಕಾರ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ವಿಜ್ಞಾನ ಮತ್ತು ತಂತ್ರಜ್ಞಾನ ಅಥವಾ ಆರ್ಥಿಕತೆಯ ಯಾವುದೇ ವಿಭಾಗದಿಂದ ಮೂಡಿದ ಜನಸಾಮಾನ್ಯರ ಅದರಲ್ಲೂ ಗ್ರಾಮೀಣ ಪ್ರದೇಶದ ಜನಜೀವನವನ್ನು ಪರಿವರ್ತಿಸಲು ಸಹಾಯಕವಾದ ಅಥವಾ ಉದ್ಯಮಗಳು ಹಾಗೂ ಉದ್ಯೋಗ ಸೃಷ್ಟಿಗೆ ಕಾರಣವಾದ ಅನುಕರಣೀಯ ಆವಿಷ್ಕಾರಗಳನ್ನು ಗುರುತಿಸಿ ಪದವಿ, ಸ್ನಾತಕೋತ್ತರ ಪದವಿ, ಬೋಧಕರು ಹಾಗೂ ಜನಸಾಮಾನ್ಯರಿಗೆ ನಗದು ಪುರಸ್ಕಾರದ ಜೊತೆಗೆ ಪ್ರಶಸ್ತಿ ಪತ್ರಗಳನ್ನು ನೀಡಲಾಗುತ್ತದೆ. ಸದರಿ ಪುರಸ್ಕಾರದ ಅರ್ಹತೆಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಡಿ.31ರೊಳಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ವಿಜೇತರನ್ನು 2026ರ ಫೆಬ್ರುವರಿ ತಿಂಗಳಲ್ಲಿ ಘೋಷಿಸಲಾಗುತ್ತದೆ ಎಂದು ಇಲಾಖೆ ಹೊರಡಿಸಿದ ಮಾರ್ಗಸೂಚಿ ಹೊಂದಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಅರ್ಜಿ ಸಲ್ಲಿಕೆ ಈಗಾಗಲೇ ಪ್ರಾರಂಭವಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಡಿಸೆಂಬರ್ 31, 2025
ಪುರಸ್ಕಾರದ ವಿವರಗಳು:
• ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಆವಿಷ್ಕಾರ/ನಾವಿನ್ಯತೆಗೆ ಪ್ರೊ. ಯು.ಆರ್. ರಾವ್ ಪುರಸ್ಕಾರ ಗೌರವವನ್ನು ನೀಡಲಾಗುತ್ತದೆ.
• ಪದವಿ ವಿದ್ಯಾರ್ಥಿಗಳ ಆವಿಷ್ಕಾರ/ನಾವಿನ್ಯತೆಗೆ ಡಾ. ಎಸ್.ಕೆ. ಶಿವಕುಮಾರ್ ಪುರಸ್ಕಾರ ಗೌರವವನ್ನು ನೀಡಲಾಗುತ್ತದೆ.
• ಬೋಧಕರಿಗೆ ಮತ್ತು ಜನಸಾಮ್ಯಾನರ ಆವಿಷ್ಕಾರ/ನಾವಿನ್ಯತೆಗೆ ಪ್ರೊ. ಎಸ್. ಅಯ್ಯಪ್ಪನ್ ಪುರಸ್ಕಾರ ಗೌರವವನ್ನು ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:
• ಸದರಿ ಪುರಸ್ಕಾರಕ್ಕಾಗಿ ಅರ್ಜಿ ಸಲ್ಲಿಸುವ ಆವಿಷ್ಕಾರ ಅರ್ಜಿದಾರರು ಕರ್ನಾಟಕ ರಾಜ್ಯದ ಮೂಲದವಾಗಿರಬೇಕು/ನಿವಾಸಿಯಾಗಿರಬೇಕು/ಕರ್ನಾಟಕದಲ್ಲಿ ಜನಿಸಿರಬೇಕು.
• ಕಳೆದ ಎರಡು ವರ್ಷಗಳಲ್ಲಿ ನೀಡಲಾದ ಆವಿಷ್ಕಾರ/ನಾವಿನ್ಯತೆ ಪುರಸ್ಕಾರ ವಿಜೇತರು ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.
• ಅರ್ಜಿದಾರರು ವಿಜ್ಞಾನ ಮತ್ತು ತಂತ್ರಜ್ಞಾನ ಅಥವಾ ಆರ್ಥಿಕತೆಯ ಯಾವುದೇ ವಿಭಾಗದಿಂದ ಮೂಡಿದ ಜನಸಾಮಾನ್ಯರ ಅದರಲ್ಲೂ ಗ್ರಾಮೀಣ ಪ್ರದೇಶದ ಜನಜೀವನವನ್ನು ಪರಿವರ್ತಿಸಲು ಸಹಾಯಕವಾದ ಅಥವಾ ಉದ್ಯಮಗಳು ಹಾಗೂ ಉದ್ಯೋಗ ಸೃಷ್ಟಿಗೆ ಕಾರಣವಾದ ಅನುಕರಣೀಯ ಆವಿಷ್ಕಾರಗಳನ್ನು ಕೈಗೊಂಡ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
• ಅರ್ಜಿಗಳು ಕನ್ನಡದಲ್ಲಿ ಅಥವಾ ಇಂಗ್ಲಿಷ್ ನಲ್ಲಿ ಇರಬೇಕು.
ನಗದು ಮತ್ತು ಪ್ರಮಾಣಪತ್ರ
ಪ್ರತಿ ವರ್ಗದಲ್ಲಿ ಐದು ಪುರಸ್ಕಾರಗಳನ್ನು ನೀಡಲಾಗುತ್ತದೆ. ಸದರಿ ಆವಿಷ್ಕಾರ/ನಾವಿನ್ಯತೆ ಪುರಸ್ಕಾರಕ್ಕೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಲಾ 10,000ರೂ. ನಗದು ಬಹುಮಾನ ಮತ್ತು ಪ್ರಮಾಣ ಪತ್ರವನ್ನು ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವ ಪ್ರಕ್ರಿಯೆ:
• ಮೊದಲಿಗೆ ಕರ್ನಾಟಕ ತಂತ್ರಜ್ಞಾನ ಮತ್ತು ವಿಜ್ಞಾನ ಅಕಾಡೆಮಿಯ ಅಧಿಕೃತ ಜಾಲತಾಣ https://kstacademy.in/kn/ಕ್ಕೆ ಭೇಟಿ ನೀಡಿ.
• ಬಳಿಕ ಮುಖಪುಟದಲ್ಲಿ “ನಾವೀನ್ಯತೆ/ಆವಿಷ್ಕಾರ ಪುರಸ್ಕಾರ” ಪ್ರಕಟಣೆಯ ಕೆಳಗೆ ನೀಡಲಾಗಿರುವ “For more details visit” ಲಿಂಕ್ ಅನ್ನು ಆಯ್ಕೆ ಮಾಡಿ.
• ನಂತರ “ಗೂಗಲ್ ಫಾರ್ಮ್” ಲಿಂಕ್ ಮೇಲೆ ಕ್ಲಿಕ್ ಮಾಡಿ.
• ನಂತರ ಅರ್ಜಿಯಲ್ಲಿ ಕೇಳಲಾಗುವ ಸ್ವ-ವಿವರ, ನವೀನ ಯೋಜನೆಯ ವಿವರ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
• ಅಂತಿಮವಾಗಿ ಅರ್ಜಿಯನ್ನು ಮತ್ತೊಮ್ಮೆ ಎಚ್ಚರಿಕೆಯಿಂದ ಪರಿಶೀಲಿಸಿ ಸಲ್ಲಿಸಿ.
• ಅರ್ಜಿಯನ್ನು ಆನ್-ಲೈನ್ ಮೂಲಕ ಸಲ್ಲಿಸಿದ ಬಳಿಕ ಅರ್ಜಿ ಪ್ರತಿಯನ್ನು ಈ ಕೆಳಗಿನ ವಿಳಾಸಕ್ಕೆ ಡಿಸೆಂಬರ್ 31ರೊಳಗೆ ತಲುಪುವಂತೆ ಕಳುಹಿಸಬೇಕು.
ವಿಳಾಸ: Prof. U R Rao Vijnan Bhavan, Major Sandeep Unnikrishnan Road, Opp. Doddabettahalli Layout Busstop, Vidyaranyapura post bangalore – 560097
Important Direct Links:
Prize for Innovation/Discovery 2025 Guidelines PDF