ಕರ್ನಾಟಕ ಸರ್ಕಾರದ ಉದ್ಯಮ ಸಂಸ್ಥೆಯಾಗಿರುವ ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ (ಕಿಯೋನಿಕ್ಸ್)ದಲ್ಲಿ ಖಾಲಿ ಇರುವ ತರಬೇತಿ ಸಲಹೆಗಾರ ಮತ್ತು ಕಾನೂನು ಸಲಹೆಗಾರ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಐಸಿಟಿ (ICT) ತರಬೇತಿ ಸಲಹೆಗಾರ(01) ಮತ್ತು ಕಾನೂನು ಸಲಹೆಗಾರ (01) ಸೇರಿದಂತೆ ಒಟ್ಟು 02 ಹುದ್ದೆಗಳಿಗೆ ಪದವೀಧರ ಅಭ್ಯರ್ಥಿಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲಾಗುತ್ತದೆ. ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಡಿ.02 ರೊಳಗೆ ಸ್ವಯಂ ದೃಢೀಕರಿಸಿದ ದಾಖಲಾತಿಗಳನ್ನು Info@keonics.comಗೆ ಕಳುಹಿಸುವ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಕಿಯೋನಿಕ್ಸ್‌ನ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಪ್ರಕಟಣೆಯ ದಿನಾಂಕ – ನವೆಂಬರ್ 26, 2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಡಿಸೆಂಬರ್ 02, 2025
ಶೈಕ್ಷಣಿಕ ಅರ್ಹತೆ:
✓ ತರಬೇತಿ ಸಲಹೆಗಾರ (01) ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಶಿಕ್ಷಣ/ತರಬೇತಿ/ಕಲಿಕೆ/ಸಂಬಂಧಿತ ಕ್ಷೇತ್ರಗಳಲ್ಲಿ ಸ್ನಾತಕೋತ್ತರ ಪದವಿ ಅಥವಾ ಪ್ರಮಾಣಿಕರಣವನ್ನು ಹೊಂದಿರಬೇಕು ಜೊತೆಗೆ ಕಲಿಕಾ ನಿರ್ವಹಣಾ ವ್ಯವಸ್ಥೆಗಳು (LMS), ಇ-ಕಲಿಕಾ ಲೇಖಕ/ವಿನ್ಯಾಸ ಪರಿಕರಗಳಂತಹ ಪರಿಕರಗಳು ಮತ್ತು ತಂತ್ರಜ್ಞಾನಗಳ ಜ್ಞಾನವನ್ನು ಹೊಂದಿರಬೇಕು ಮತ್ತು ಸಂಬಂಧಿತ ಕ್ಷೇತ್ರದಲ್ಲಿ 10 ವರ್ಷಗಳ ಅನುಭವ ಹೊಂದಿರಬೇಕು.
✓ ಕಾನೂನು ಸಲಹೆಗಾರ (01) ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಎಲ್.ಎಲ್.ಬಿ ಕಾನೂನು ಪದವಿಯನ್ನು ಹೊಂದಿರಬೇಕು ಅಥವಾ ಎಲ್.ಎಲ್.ಎಂ ಸ್ನಾತಕೋತ್ತರ ಪದವಿ ಪಡೆದವರಿಗೆ ಮೊದಲು ಆದ್ಯತೆ ನೀಡಲಾಗುತ್ತದೆ. ಸಂಬಂಧಿತ ಕ್ಷೇತ್ರದಲ್ಲಿ 10 ವರ್ಷಗಳ ಅನುಭವ ಹೊಂದಿರಬೇಕು.
ವಯೋಮಿತಿ:
ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ (ಕಿಯೋನಿಕ್ಸ್) ನಿಯಮಗಳ ಪ್ರಕಾರ.
ತರಬೇತಿ ಸಲಹೆಗಾರ – 55 ವರ್ಷದೊಳಗಿನ ಅಭ್ಯರ್ಥಿಗಳು
ವೇತನ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಅವರ ಹುದ್ದೆಗಳಿಗೆ ಅನುಗುಣವಾಗಿ ಸರ್ಕಾರಿ ನಿಯಮಗಳ ಪ್ರಕಾರ ಪ್ರತಿ ತಿಂಗಳು ವೇತನವನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ
ಸದರಿ ಹುದ್ದೆಗಳ ಅರ್ಹತಾ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು
ತಮ್ಮ ಸ್ವ-ವಿವರ (Curriculum Vitae), ಸ್ವಯಂ ದೃಢೀಕೃತ ವಿದ್ಯಾರ್ಹತೆಗಳ ನಕಲು ಪ್ರತಿಗಳು ಹಾಗೂ ಸಂಬಂಧಿಸಿದ ಅನುಭವ ಪ್ರಮಾಣ ಪತ್ರಗಳನ್ನು ತಮ್ಮ ಸಹಿ ಹೊಂದಿರುವ ಅರ್ಜಿಯೊಂದಿಗೆ ಲಗತ್ತಿಸಿ.
PDF ಸ್ವರೂಪದಲ್ಲಿ – ಕಿಯೋನಿಕ್ಸ್ ವ್ಯವಸ್ಥಾಪಕ ನಿರ್ದೇಶಕ ಕಚೇರಿಯ ಇ-ಮೇಲ್ ವಿಳಾಸ Info@keonics.comಕ್ಕೆ ಡಿಸೆಂಬರ್ 02ರೊಳಗೆ ತಲುಪುವಂತೆ ಕಳುಹಿಸಲು ಸೂಚಿಸಲಾಗಿದೆ.
Important Direct Links:
| Training Consultant Job Description Details PDF | Download |
| Legal Consultant Job Description Details PDF | Download |
| Training Consultant Application Form PDF | Download |
| Legal Consultant Application Form PDF | Download |
| Official Website | www.keonics.in |
| More Updates | KarnatakaHelp.in |
586114
I Will come