ಭಾರತೀಯ ಭೂ ಬಂದರು ಪ್ರಾಧಿಕಾರ(LPAI)ದಲ್ಲಿ ಉದ್ಯೋಗ

ಅರ್ಜಿ ಸಲ್ಲಿಸಲು ಜ.27 ಕೊನೆ ದಿನ

Published on:

ಫಾಲೋ ಮಾಡಿ
Land Ports Authority of India Notification 2026
Land Ports Authority of India Notification 2026

ಭಾರತ ಸರ್ಕಾರದ ಗೃಹ ಸಚಿವಾಲಯದಡಿ ಬರುವ ಭಾರತೀಯ ಭೂ ಬಂದರು ಪ್ರಾಧಿಕಾರ(LPAI)ವು ವಿವಿಧ ಹುದ್ದೆಗಳ ಭರ್ತಿಗಾಗಿ ಆಫ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದೆ.

ಪ್ರಾಧಿಕಾರದ ಸಚಿವಾಲಯ, ನವದೆಹಲಿ ಮತ್ತು ಅದರ ಸಂಯೋಜಿತ ಚೆಕ್ ಪೋಸ್ಟ್‌(ICPs)ಗಳಿಗೆ ವಿಜಲೆನ್ಸ್ ಆಫೀಸರ್, ಅಸಿಸ್ಟೆಂಟ್ ಎಂಜಿನಿಯರ್, ಅಸಿಸ್ಟೆಂಟ್, ಜೆಇ, ಪರ್ಸನಲ್ ಅಸಿಸ್ಟೆಂಟ್, ಹಾಗೂ ಚೀಫ್ ಅಡ್ಮಿನಿಸ್ಟೇಟರ್ ಸೇರಿದಂತೆ ಇತರೆ ಒಟ್ಟು 64 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನಿಯೋಗ (ವಿದೇಶಿ ಸೇವೆ) ಆಧಾರದ ಮೇಲೆನಿಯೋಗ (ವಿದೇಶಿ ಸೇವೆ) ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲಿದೆ. ಅರ್ಜಿ ಸಲ್ಲಿಸಲು ಇಚ್ಚಿಸುವ ಆಸಕ್ತರು ಜ.27 ರೊಳಗೆ http://lpai.qov.in/ನಲ್ಲಿ ಲಭ್ಯವಿರುವ ಅರ್ಜಿ ನಮೂನೆ ಡೌನ್ಲೋಡ್‌ ಮಾಡಿ; ಭರ್ತಿ ಮಾಡಿ ನಿಗದಿತ ದಾಖಲೆಗಳನ್ನು ಲಗತ್ತಿಸಿ, ಉಪ ಕಾರ್ಯದರ್ಶಿ (ಆಡಳಿತ), ಭಾರತೀಯ ಭೂ ಬಂದರು ಪ್ರಾಧಿಕಾರ, 1ನೇ ಮಹಡಿ, ಲೋಕ ನಾಯಕ್ ಭವನ, ಖಾನ್ ಮಾರುಕಟ್ಟೆ, ನವದೆಹಲಿ-110003 ಗೆ ಕಳುಹಿಸಿಕೊಡಬೇಕು.

About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment