ಭಾರತೀಯ ಭೂ ಬಂದರು ಪ್ರಾಧಿಕಾರ(LPAI)ದಲ್ಲಿ ಉದ್ಯೋಗ

ಅರ್ಜಿ ಸಲ್ಲಿಸಲು ಜ.27 ಕೊನೆ ದಿನ

Published on:

ಭಾರತ ಸರ್ಕಾರದ ಗೃಹ ಸಚಿವಾಲಯದಡಿ ಬರುವ ಭಾರತೀಯ ಭೂ ಬಂದರು ಪ್ರಾಧಿಕಾರ(LPAI)ವು ವಿವಿಧ ಹುದ್ದೆಗಳ ಭರ್ತಿಗಾಗಿ ಆಫ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದೆ.

ಪ್ರಾಧಿಕಾರದ ಸಚಿವಾಲಯ, ನವದೆಹಲಿ ಮತ್ತು ಅದರ ಸಂಯೋಜಿತ ಚೆಕ್ ಪೋಸ್ಟ್‌(ICPs)ಗಳಿಗೆ ವಿಜಲೆನ್ಸ್ ಆಫೀಸರ್, ಅಸಿಸ್ಟೆಂಟ್ ಎಂಜಿನಿಯರ್, ಅಸಿಸ್ಟೆಂಟ್, ಜೆಇ, ಪರ್ಸನಲ್ ಅಸಿಸ್ಟೆಂಟ್, ಹಾಗೂ ಚೀಫ್ ಅಡ್ಮಿನಿಸ್ಟೇಟರ್ ಸೇರಿದಂತೆ ಇತರೆ ಒಟ್ಟು 64 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನಿಯೋಗ (ವಿದೇಶಿ ಸೇವೆ) ಆಧಾರದ ಮೇಲೆನಿಯೋಗ (ವಿದೇಶಿ ಸೇವೆ) ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲಿದೆ. ಅರ್ಜಿ ಸಲ್ಲಿಸಲು ಇಚ್ಚಿಸುವ ಆಸಕ್ತರು ಜ.27 ರೊಳಗೆ http://lpai.qov.in/ನಲ್ಲಿ ಲಭ್ಯವಿರುವ ಅರ್ಜಿ ನಮೂನೆ ಡೌನ್ಲೋಡ್‌ ಮಾಡಿ; ಭರ್ತಿ ಮಾಡಿ ನಿಗದಿತ ದಾಖಲೆಗಳನ್ನು ಲಗತ್ತಿಸಿ, ಉಪ ಕಾರ್ಯದರ್ಶಿ (ಆಡಳಿತ), ಭಾರತೀಯ ಭೂ ಬಂದರು ಪ್ರಾಧಿಕಾರ, 1ನೇ ಮಹಡಿ, ಲೋಕ ನಾಯಕ್ ಭವನ, ಖಾನ್ ಮಾರುಕಟ್ಟೆ, ನವದೆಹಲಿ-110003 ಗೆ ಕಳುಹಿಸಿಕೊಡಬೇಕು.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಡಿಸೆಂಬರ್ 22, 2025
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಜನವರಿ 27, 2026

ಹುದ್ದೆಗಳ ವಿವರ:

• ವಿಜಲೆನ್ಸ್ ಆಫೀಸರ್ – 01 ಹುದ್ದೆ
• ಅಸಿಸ್ಟೆಂಟ್ ಎಂಜಿನಿಯರ್ (ಸಿವಿಲ್) – 01 ಹುದ್ದೆ
• ಅಸಿಸ್ಟೆಂಟ್ – 02 ಹುದ್ದೆಗಳು
• ಜೆಇ (ಸಿವಿಲ್) – 02 ಹುದ್ದೆಗಳು
• ಜೆಇ (ಎಲೆಕ್ಟ್ರಿಕಲ್) – 02 ಹುದ್ದೆಗಳು
• ಪರ್ಸನಲ್ ಅಸಿಸ್ಟೆಂಟ್ – 02 ಹುದ್ದೆಗಳು
• ಚೀಫ್ ಅಡ್ಮಿನಿಸ್ಟೇಟರ್ – 05 ಹುದ್ದೆಗಳು
• ಪೋರ್ಟ್ ಅಡ್ಮಿನಿಸ್ಟೇಟರ್ – 02 ಹುದ್ದೆಗಳು
• ಪೋರ್ಟ್ ಎಕ್ಸಿಕ್ಯೂಟಿವ್ – 47 ಹುದ್ದೆಗಳು

ಒಟ್ಟು – 64 ಹುದ್ದೆಗಳು

ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಪದವಿ/ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು ಜೊತೆಗೆ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ಅಥವಾ ಕೇಂದ್ರಾಡಳಿತ ಪ್ರದೇಶ ಆಡಳಿತ ಅಥವಾ ಶಾಸನಬದ್ಧ ಸಂಸ್ಥೆ ಅಥವಾ ಸ್ವಾಯತ್ತ ಸಂಸ್ಥೆಯ ಅಧಿಕಾರಿಗಳು ಅರ್ಜಿ ಸಲ್ಲಿಸಬಹುದು ಹಾಗೂ ಇತರೆ ಅರ್ಹತೆಯನ್ನು ಹೊಂದಿರಬೇಕು.

• ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ತಪ್ಪದೆ ಅಧಿಕೃತ ಅಧಿಸೂಚನೆಯನ್ನು ಓದಬೇಕು.

ವಯಸ್ಸಿನ ಮಿತಿ:

27-01-2026 ರoತೆ;

• ಗರಿಷ್ಠ ವಯಸ್ಸಿನ ಮಿತಿ – 56 ವರ್ಷಗಳು

ಆಯ್ಕೆ ಪ್ರಕ್ರಿಯೆ:

ಭಾರತೀಯ ಭೂ ಬಂದರು ಪ್ರಾಧಿಕಾರದ ನಿಯಮಗಳ ಪ್ರಕಾರ ಆಯ್ಕೆ ಪ್ರಕ್ರಿಯೆ ಇರುತ್ತದೆ.

ಸಂಬಳ:

ಸದರಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಅವರ ಹುದ್ದೆಗಳಿಗೆ ಅನುಗುಣವಾಗಿ 7ನೇ ಸಿಪಿಸಿ ಪೇ ಮ್ಯಾಟ್ರಿಕ್ಸ್ ಲೆವೆಲ್ ನಿಯಮಗಳ ಅನುಸಾರ ವೇತನವನ್ನು ನೀಡಲಾಗುತ್ತದೆ.

ಅರ್ಜಿ ಶುಲ್ಕ:

ಉಲ್ಲೇಖಿಸಲಾಗಿರುವುದಿಲ್ಲ.

ಅರ್ಜಿ ಸಲ್ಲಿಸುವ ವಿಧಾನ ಹೇಗೆ.?

• ಮೊದಲಿಗೆ ಅಭ್ಯರ್ಥಿಗಳು LPAI ಅಧಿಕೃತ ಜಾಲತಾಣ https://lpai.gov.in/ ಕ್ಕೆ ಭೇಟಿ ನೀಡಿ.

• ನಂತರ “LPAI ಸಚಿವಾಲಯದಲ್ಲಿ ಖಾಲಿ ಇರುವ ಹುದ್ದೆಗಳನ್ನು ಡೆಪ್ಯುಟೇಶನ್ ಆಧಾರದ ಮೇಲೆ ಭರ್ತಿ ಮಾಡುವುದು-ಅರ್ಜಿಗಳನ್ನು ಆಹ್ವಾನಿಸುವುದು. (ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ 27.01.2026)” ಲಿಂಕ್ ಮೇಲೆ ಟ್ಯಾಪ್ ಮಾಡಿ.

• ನೇಮಕಾತಿಯ ಅಧಿಸೂಚನೆ ಹಾಗೂ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ.

• ಬಳಿಕ ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ, ಭಾವಚಿತ್ರ, ಸಹಿ, ಶೈಕ್ಷಣಿಕ ಮಾಹಿತಿ ಹಾಗೂ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ.

• ಈ ಕೆಳಗಿನ ವಿಳಾಸಕ್ಕೆ ಜನವರಿ 27 ರೊಳಗೆ ತಲುಪುವಂತೆ ಪೋಸ್ಟ್ ಮೂಲಕ ಕಳುಹಿಸಬಹುದು.

ವಿಳಾಸ: ಉಪ ಕಾರ್ಯದರ್ಶಿ (ಆಡಳಿತ), ಭಾರತೀಯ ಭೂ ಬಂದರು ಪ್ರಾಧಿಕಾರ, 1ನೇ ಮಹಡಿ, ಲೋಕ ನಾಯಕ್ ಭವನ, ಖಾನ್ ಮಾರುಕಟ್ಟೆ, ನವದೆಹಲಿ-110003

• ಅರ್ಜಿದಾರರು ಮೇಲಿನ ವಿಳಾಸಕ್ಕೆ ಅಂಚೆ ಮೂಲಕ ಮತ್ತು dsga-Ipai@lpai.gov.in ಇಮೇಲ್ ಐಡಿಗೆ ಮುಂಗಡ ಪ್ರತಿಗಳನ್ನು ಕಳುಹಿಸಬಹುದು.

Important Direct Links:

Official Notification and Application Form PDFDownload
Official Websitehttp://lpai.qov.in/
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment