ಮೈಸೂರು ವಿಶ್ವವಿದ್ಯಾಲಯವು ಅಧಿಕೃತ ಅಧಿಸೂಚನೆಯ ಮೂಲಕ ಸಹಾಯಕ ಪ್ರಾಧ್ಯಾಪಕರು, ಉದ್ಯೋಗ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಮೈಸೂರುನಲ್ಲಿ ವೃತ್ತಿ ಜೀವನವನ್ನು ಕಂಡುಕೊಳ್ಳಲು ಹುದ್ದೆಗಳನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 10, 2025 ರಂದು ವಾಕ್-ಇನ್-ಸಂದರ್ಶನಕ್ಕೆ ಹಾಜರಾಗಲು ತಿಳಿಸಲಾಗಿದೆ. ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಹೀಗೆ ಎಲ್ಲದರ ಕುರಿತಾಗಿ ತಿಳಿದುಕೊಳ್ಳಲು ಸಂಪೂರ್ಣ ಓದಿರಿ.
ಸಹಾಯಕ ಪ್ರಾಧ್ಯಾಪಕರು (Assistant Professor) – ಬಿಇ ಅಥವಾ ಬಿ.ಟೆಕ್, ಎಂಇ ಅಥವಾ ಎಂ.ಟೆಕ್, ಎಂಸಿಎ, ಪಿಎಚ್ಡಿ
ಉದ್ಯೋಗ ಅಧಿಕಾರಿ (Placement Officer) – ಸ್ನಾತಕೋತ್ತರ ಪದವಿ, ಎಂಬಿಎ
ಪ್ರಯೋಗಾಲಯ ಶಿಕ್ಷಕ (Lab Instructor) – ಡಿಪ್ಲೊಮಾ, ಬಿಇ
ಅರ್ಜಿ ಶುಲ್ಕ:
ಪ.ಜಾತಿ/ಪ.ಪಂಗಡದ ಅಭ್ಯರ್ಥಿಗಳು – ರೂ.1000/-
ಸಾಮಾನ್ಯ ಅಭ್ಯರ್ಥಿಗಳು – ರೂ.2000/-
ಅರ್ಜಿ ಶುಲ್ಕವನ್ನು ಡಿ.ಡಿ. ರೂಪದಲ್ಲಿ ಪಾವತಿಸಲು ತಿಳಿಸಲಾಗಿದ್ದು, ಡಿ.ಡಿ.ಯನ್ನು Finance Officer, DOM, Mysuru ಇವರ ಹೆಸರಿನಲ್ಲಿ ತೆಗೆಸುವಂತೆ ತಿಳಿಸಲಾಗಿದೆ.
ಆಯ್ಕೆ ಪ್ರಕ್ರಿಯೆ:
ಮೈಸೂರು ವಿಶ್ವವಿದ್ಯಾಲಯ ನೇಮಕಾತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ನೇರವಾಗಿ ಸಂದರ್ಶನ ಮಾಡುವ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ವೇತನ:
ಸಹಾಯಕ ಪ್ರಾಧ್ಯಾಪಕರು – ರೂ.35,000/-
ಉದ್ಯೋಗ ಅಧಿಕಾರಿ – ಮೈಸೂರು ವಿಶ್ವವಿದ್ಯಾಲಯದ ನಿಯಮಗಳ ಪ್ರಕಾರ
ಪ್ರಯೋಗಾಲಯ ಬೋಧಕ – ಮೈಸೂರು ವಿಶ್ವವಿದ್ಯಾಲಯದ ನಿಯಮಗಳ ಪ್ರಕಾರ
ಅರ್ಜಿ ಸಲ್ಲಿಸುವುದು ಹೇಗೆ ?
ಮೈಸೂರು ವಿಶ್ವವಿದ್ಯಾಲಯ ಹೊರಡಿಸಿರುವ ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ (ನೇಮಕಾತಿ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ).
ಇಮೇಲ್ ಐಡಿ, ಮೊಬೈಲ್ ಸಂಖ್ಯೆ, ಗುರುತಿನ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಭಾವಚಿತ್ರ, ರೆಸ್ಯೂಮ್, ಯಾವುದೇ ಅನುಭವ ಇತ್ಯಾದಿ ದಾಖಲೆಗಳ ಛಾಯ ಪ್ರತಿಯನ್ನು ಮತ್ತು ಮೂಲ ಪ್ರತಿಯೊಂದಿಗೆ ಸಂದರ್ಶನಕ್ಕೆ ಹಾಜರಾಗಿ.
ಸಂದರ್ಶನಕ್ಕೆ ಅಕ್ಟೋಬರ್ 10, 2025 ರಂದು – ಸಿಂಡಿಕೇಟ್ ಚೇಂಬರ್, ಕ್ರಾಫರ್ಡ್ ಹಾಲ್, ಮೈಸೂರು ವಿಶ್ವವಿದ್ಯಾಲಯ, ಮೈಸೂರು, ಕರ್ನಾಟಕ. ಇಲ್ಲಿಗೆ ಹಾಜರಾಗುವಂತೆ ತಿಳಿಸಲಾಗಿದೆ.
ಈ ಹುದ್ದೆಗೆ ಹಾಗೂ ಅಧಿಸೂಚನೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿಗಾಗಿ – registrar@uni-mysore.ac.in Telephone No. 2419440/2419361 ಸಂಪರ್ಕಿಸುವಂತೆ ತಿಳಿಸಲಾಗಿದೆ.
ರಾಮಕೃಷ್ಣ ಬಿ ಹೆಚ್ ಅವರು 2020ರಿಂದ ಉದ್ಯೋಗ ಸುದ್ದಿಯ ಮೂಲಕ ತಮ್ಮ ಓದುಗರಿಗೆ ನಿಖರ, ನೈಜ ಮತ್ತು ಸವಿವರವಾದ ಮಾಹಿತಿಯನ್ನು ತಲುಪಿಸುತ್ತಿದ್ದಾರೆ. ವಿಶೇಷವಾಗಿ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದ ಕುರಿತಾಗಿ ಆಳವಾದ ಅಧ್ಯಯನವನ್ನು ಇಟ್ಟುಕೊಂಡಿದ್ದು, ಯುವಕರಿಗೆ ಉದ್ಯೋಗದ ಮಾಹಿತಿಯನ್ನು ತಲುಪಿಸುವ ಗುರಿಯನ್ನು ಇಟ್ಟುಕೊಂಡಿದ್ದಾರೆ.