ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) 2024 ರ ಜೂನ್ 23, 2024 ರಂದು ನಡೆದ NEET UG ಮರು ಪರೀಕ್ಷೆಯ ಸಂಬಂಧಿಸಿದ ಉತ್ತರ ಪತ್ರವನ್ನು ಬಿಡುಗಡೆ ಮಾಡಿದೆ. NTA ಯು ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಪರೀಕ್ಷೆಗೆ ಸಂಬಂಧಿಸಿದ ಎಲ್ಲಾ ಕೀ ಉತ್ತರಗಳನ್ನು ಬಿಡುಗಡೆ ಮಾಡಿದೆ. ಪರೀಕ್ಷೆಗೆ ಹಾಜರಾಗಿರುವ ಮತ್ತು ತಮ್ಮ ಉತ್ತರಗಳನ್ನು ಪರಿಶೀಲಿಸಲು ಬಯಸುವ ಅಭ್ಯರ್ಥಿಗಳು exams.nta.ac.in/NEET/ ಗೆ ಭೇಟಿ ನೀಡಿ ಕೀ ಉತ್ತರಗಳನ್ನು ಪರಿಶೀಲಿಸಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಈ ಬಾರಿ 1563ಲಕ್ಷ ಅಭ್ಯರ್ಥಿಗಳು ಭಾರತ ಮತ್ತು ವಿದೇಶದಾದ್ಯಂತ ಪರೀಕ್ಷೆಗೆ ಹಾಜರಾಗಿದ್ದರು. NEET 2024 ಕೀ ಉತ್ತರಗಳು ಮತ್ತು OMR ಶೀಟ್ PDF ಗಳನ್ನು ಬಿಡುಗಡೆ ಮಾಡಲಾಗುತ್ತದೆ. ಪ್ರಕಟಿಸಿರುವ ಕೀ ಉತ್ತರಗಳಲ್ಲಿ ಅಭ್ಯರ್ಥಿಗಳಗೆ ಆಕ್ಷೇಪಣೆ ಇದ್ದರೆ, ಅರ್ಜಿ ಸಲ್ಲಿಸಬಹುದು. ಕೀ ಉತ್ತರಗಳ ಪ್ರಕಟವಾದ ಬಳಿಕ ಆಕ್ಷೇಪಣೆ ಸಲ್ಲಿಕೆ ವಿಂಡೋವನ್ನು ಸಹ ತೆರೆಯುತ್ತದೆ.