ಕಲ್ಲಿದ್ದಲು ಸಚಿವಾಲಯದ ಆಶ್ರಯದಲ್ಲಿರುವ “ನವರತ್ನ” ಭಾರತ ಸರ್ಕಾರದ ಉದ್ಯಮಗಳಲ್ಲಿ ಒಂದಾದ ಎನ್ಎಲ್ಸಿ ಇಂಡಿಯಾ ಲಿಮಿಟೆಡ್ನಲ್ಲಿ ಅಪ್ರೆಂಟಿಸ್ ಕಾಯ್ದೆಯಡಿಯಲ್ಲಿ 163 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ.
2025-26ನೇ ಸಾಲಿಗೆ ರಾಜಸ್ಥಾನದ ಬಿಕಾನೇರ್ನ ಬಾರ್ಸಿಂಗ್ಸರ್ ಯೋಜನೆಯಡಿಯಲ್ಲಿ ವಿವಿಧ ವಿಭಾಗಗಳಲ್ಲಿ ಐಟಿಐ, ಡಿಪ್ಲೊಮಾ, ಎಂಜಿನಿಯರ್ ಹಾಗೂ ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡು ತರಬೇತಿ ನೀಡಲಾಗುವುದು. ಸದರಿ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಸಲ್ಲಿಸಬಯಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು NLC ಅಧಿಕೃತ ವೆಬ್ ಸೈಟ್ https://web.nlcindia.in/bps_gat_tat_012025/ಗೆ ಭೇಟಿ ನೀಡಿ. ಅ.23ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – ಅಕ್ಟೋಬರ್ 03, 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಅಕ್ಟೋಬರ್ 23, 2025
ಅರ್ಜಿ ನಮೂನೆ ಹಾರ್ಡ್ ಪ್ರತಿಯೊಂದಿಗೆ ದಾಖಲೆಗಳನ್ನು ಸಲ್ಲಿಸಲು ಕೊನೆಯ ದಿನಾಂಕ – ಅಕ್ಟೋಬರ್ 30, 2025
ಶೈಕ್ಷಣಿಕ ಅರ್ಹತೆ:
✓ ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ – ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ಸಂಸ್ಥೆಯಿಂದ ಸಂಬಂಧಿಸಿದ ಟ್ರೇಡ್ನಲ್ಲಿ ಐಟಿಐ (ಎನ್ಸಿವಿಟಿ) ಉತ್ತೀರ್ಣರಾಗಿರಬೇಕು.
✓ ತಂತ್ರಜ್ಞ (ಡಿಪ್ಲೊಮಾ ಹೊಂದಿರುವವರು) ಅಪ್ರೆಂಟಿಸ್ ಹುದ್ದೆಗಳಿಗೆ – ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆ, ರಾಜ್ಯ ಮಂಡಳಿ ಅಥವಾ ತಾಂತ್ರಿಕ ಶಿಕ್ಷಣ ಮಂಡಳಿಯಿಂದ ಎಂಜಿನಿಯರಿಂಗ್ ಅಥವಾ ತಂತ್ರಜ್ಞಾನದಲ್ಲಿ ಪೂರ್ಣ ಸಮಯದ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.
✓ ಪದವೀಧರ (ಎಂಜಿನಿಯರಿಂಗ್) ಅಪ್ರೆಂಟಿಸ್ ಹುದ್ದೆಗಳಿಗೆ – ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಂಬಂಧಿತ ವಿಭಾಗದಲ್ಲಿ ಎಂಜಿನಿಯರಿಂಗ್ ಅಥವಾ ತಂತ್ರಜ್ಞಾನದಲ್ಲಿ ಪೂರ್ಣ ಸಮಯದ ಪದವಿ ಪೂರ್ಣಗೊಳಿಸಬೇಕು.
✓ ಪದವೀಧರ (ಎಂಜಿನಿಯರಿಂಗ್ ಅಲ್ಲದ) ಅಪ್ರೆಂಟಿಸ್ ಹುದ್ದೆಗಳಿಗೆ – ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪೂರ್ಣ ಸಮಯದ ಬಿ.ಕಾಂ ಅಥವಾ ಬಿಬಿಎ ಪದವಿ ಹೊಂದಿರಬೇಕು.
ಅಭ್ಯರ್ಥಿಗಳು 2021, 2022, 2023, 2024 ಅಥವಾ 2025 ವರ್ಷಗಳಲ್ಲಿ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ವಯೋಮಿತಿ:
ಕನಿಷ್ಠ ಮಿತಿ – 18 ವರ್ಷಗಳು
ಗರಿಷ್ಠ ಮಿತಿ – 35 ವರ್ಷಗಳು
ಆಯ್ಕೆ ಪ್ರಕ್ರಿಯೆ:
ಅರ್ಹ ಅಭ್ಯರ್ಥಿಗಳ ಶಾರ್ಟ್ಲಿಸ್ಟ್
ದಾಖಲೆ ಪರಿಶೀಲನೆ
ತರಬೇತಿ ವೇತನ/ಶಿಷ್ಯವೇತನ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ ಆಯಾ ಟ್ರೇಡ್ ಗಳಿಗೆ ಅನುಗುಣವಾಗಿ 10,019ರೂ.-15,028ರೂ. ವರೆಗೆ ನಿಗದಿತ ಸ್ಟೈಫಂಡ್ ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಅರ್ಜಿ ಶುಲ್ಕದ ಕುರಿತು ಅಧಿಸೂಚನೆಯಲ್ಲಿ ಯಾವುದೇ ಮಾಹಿತಿ ಇರುವುದಿಲ್ಲ.
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:
• ಎಂಜಿನಿಯರಿಂಗ್, ಡಿಪ್ಲೊಮಾ ಹಾಗೂ ಪದವಿ ಅಭ್ಯರ್ಥಿಗಳು NATS 2.0 ಪೋರ್ಟಲ್ https://nats.education.gov.in ನಲ್ಲಿ ಮತ್ತು ಐಟಿಐ ಟ್ರೇಡ್ ಅಪ್ರೆಂಟಿಸ್ಗಳು https://apprenticeshipindia.gov.in ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು.
• ನೋಂದಣಿ ಪ್ರಕ್ರಿಯೆ ಮುಗಿದ ನಂತರ ಅಭ್ಯರ್ಥಿಗಳು Advt. No. BP 01/2025 ಅಡಿಯಲ್ಲಿ ಒದಗಿಸಲಾಗಿರುವ ಅರ್ಜಿ ನಮೂನೆ(https://web.nlcindia.in/bps_gat_tat_012025/)ಯನ್ನು ಆಯ್ಕೆ ಮಾಡಿ ಅರ್ಜಿಯಲ್ಲಿ ಕೇಳಲಾಗುವ ಸ್ವ-ವಿವರ ಹಾಗೂ ಅಗತ್ಯ ಶೈಕ್ಷಣಿಕ ದಾಖಲಾತಿಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕು.
Nlc India Apprentice Online Application Form 2025-26
• ಕೊನೆಯಲ್ಲಿ ನೋಂದಣಿ ಮತ್ತು ಅರ್ಜಿ ನಮೂನೆಯ ಮುದ್ರಣವನ್ನು ತೆಗೆದುಕೊಳ್ಳಿ.
ಇದಾದ ಬಳಿಕ ಅಭ್ಯರ್ಥಿಗಳು ನೋಂದಣಿ ಮತ್ತು ಅರ್ಜಿ ನಮೂನೆಯನ್ನು ಸರಿಯಾಗಿ ಸಹಿ ಮಾಡಿ ಅಗತ್ಯ ದಾಖಲೆಗಳು ಹಾಗೂ ಪ್ರಮಾಣಪತ್ರಗಳ ಸ್ವಯಂ ದೃಢೀಕರಿಸಿದ ಪ್ರತಿಗಳನ್ನು ಲಗತ್ತಿಸಿ ಅಕ್ಟೋಬರ್ 30ರೊಳಗೆ ಅಥವಾ ಅದಕ್ಕೂ ಮೊದಲು ಈ ಕೆಳಗಿನ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಬೇಕು.
ವಿಳಾಸ: ಯೋಜನಾ ಮುಖ್ಯಸ್ಥ / ಬರ್ಸಿಂಗ್ಸರ್ ಯೋಜನೆ, NCL ಇಂಡಿಯಾ ಲಿಮಿಟೆಡ್ಆಡಳಿತ ಕಟ್ಟಡ, ಬರ್ಸಿಂವಿಳಾಸಗ್ಸರ್, ಬಿಕಾನೇರ್ (ಜಿಲ್ಲೆ), ರಾಜಸ್ಥಾನ-334402