ದೇಶದ ಹೆಮ್ಮೆಯ ಸಂಸ್ಥೆ DRDOನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ, ಇಂದೇ ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 28 । । ರಿಸರ್ಚ್ ಹುದ್ದೆಗಳು

Published on:

Updated On:

ಭಾರತದ ರಾಷ್ಟ್ರೀಯ ಹೆಮ್ಮೆಯಾದ, ದೇಶದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಉದ್ಯೋಗಾವಕಾಶ ಬಯಸುತ್ತಿರುವವರಿಗೆ ಸುವರ್ಣಾವಕಾಶ ಒದಗಿ ಬಂದಿದೆ. DRDOನ ಜೈವಿಕ ಭದ್ರತೆಯ ತಾಂತ್ರಿಕತೆಗಳ ರಕ್ಷಣಾ ಸಂಸ್ಥೆಯು (DIBT) ಸೆಪ್ಟೆಂಬರ್ 2025 ರ ಅಧಿಕೃತ ಅಧಿಸೂಚನೆಯ ಮೂಲಕ ಜೂನಿಯರ್ ರಿಸರ್ಚ್ ಫೆಲೋ, ರಿಸರ್ಚ್ ಅಸೋಸಿಯೇಟ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಈ ಹುದ್ದೆಗಳು ವಿಶೇಷವಾಗಿ ಬಯೋ-ಡಿಫೆನ್ಸ್, ಲೈಫ್ ಸೈನ್ಸ್, ಬಯೋಟೆಕ್ನಾಲಜಿ, ಮೈಕ್ರೋಬಯಾಲಜಿ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಸಂಶೋಧನೆ ಮಾಡಲು ಆಸಕ್ತಿ ಹೊಂದಿರುವ ಯುವ ವಿಜ್ಞಾನಿಗಳು ಹಾಗೂ ಪದವೀಧರರಿಗೆ ಸೂಕ್ತವಾಗಿವೆ. ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಯಸುವ ಅಭ್ಯರ್ಥಿಗಳು ಅಕ್ಟೋಬರ್ 28 ರ ಒಳಗೆ ತಲುಪುವಂತೆ ಆಪ್ ಲೈನ್ ಮೂಲಕ ಸಲ್ಲಿಸಲು ತಿಳಿಸಲಾಗಿದೆ .

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 29-09-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28-ಅಕ್ಟೋಬರ್-2025

ಶೈಕ್ಷಣಿಕ ಅರ್ಹತೆ:

  • ರಿಸರ್ಚ್ ಅಸೋಸಿಯೇಟ್: ಎಂ.ಟೆಕ್, ಪಿ ಹೆಚ್ ಡಿ.
  • ಜೂನಿಯರ್ ರಿಸರ್ಚ್ ಫೆಲೋ (ಮೈಕ್ರೋಬಯಾಲಜಿ/ಬಯೋಟೆಕ್ನಾಲಜಿ/ಬಯೋಕೆಮಿಸ್ಟ್ರಿ/ಬಯೋಇನ್ಫರ್ಮ್ಯಾಟಿಕ್ಸ್/ವೈದ್ಯಕೀಯ ವಿಜ್ಞಾನ): ಸ್ನಾತಕೋತ್ತರ ಪದವಿ , ಎಂ.ಟೆಕ್.
  • ಜೂನಿಯರ್ ರಿಸರ್ಚ್ ಫೆಲೋ (ಪಾಲಿಮರ್ ಸೈನ್ಸ್/ಪಾಲಿಮರ್ ಕೆಮಿಸ್ಟ್ರಿ/ಕೆಮಿಸ್ಟ್ರಿ): ಬಿಇ ಅಥವಾ ಬಿ.ಟೆಕ್, ಪದವಿ, ಎಂ.ಟೆಕ್, ಎಂ.ಎಸ್ಸಿ, ಸ್ನಾತಕೋತ್ತರ ಪದವಿ.
  • ಜೂನಿಯರ್ ರಿಸರ್ಚ್ ಫೆಲೋ (ಆಹಾರ ವಿಜ್ಞಾನ ಮತ್ತು ಪೋಷಣೆ/ಆಹಾರ ತಂತ್ರಜ್ಞಾನ/ಆಹಾರ ಸಂಸ್ಕರಣಾ ಎಂಜಿನಿಯರಿಂಗ್): ಪದವಿ, ಸ್ನಾತಕೋತ್ತರ ಪದವಿ.

ವಯೋಮಿತಿ:

  • ಜೂನಿಯರ್ ರಿಸರ್ಚ್ ಫೆಲೋ (ಸೂಕ್ಷ್ಮ ಜೀವವಿಜ್ಞಾನ/ಜೈವಿಕ ತಂತ್ರಜ್ಞಾನ/ಜೈವಿಕ ರಸಾಯನಶಾಸ್ತ್ರ/ಜೈವಿಕ ಮಾಹಿತಿಶಾಸ್ತ್ರ/ವೈದ್ಯಕೀಯ ವಿಜ್ಞಾನ) – 28 ವರ್ಷಗಳು
  • ಜೂನಿಯರ್ ರಿಸರ್ಚ್ ಫೆಲೋ (ಪಾಲಿಮರ್ ಸೈನ್ಸ್/ಪಾಲಿಮರ್ ಕೆಮಿಸ್ಟ್ರಿ/ಕೆಮಿಸ್ಟ್ರಿ) – 28 ವರ್ಷಗಳು
  • ಜೂನಿಯರ್ ರಿಸರ್ಚ್ ಫೆಲೋ (ಆಹಾರ ವಿಜ್ಞಾನ ಮತ್ತು ಪೋಷಣೆ/ಆಹಾರ ತಂತ್ರಜ್ಞಾನ/ಆಹಾರ ಸಂಸ್ಕರಣಾ ಎಂಜಿನಿಯರಿಂಗ್) – 28 ವರ್ಷಗಳು
  • ರಿಸರ್ಚ್ ಅಸೋಸಿಯೇಟ್ – 35 ವರ್ಷಗಳು

ಆಯ್ಕೆ ವಿಧಾನ:

  • ಲಿಖಿತ ಪರೀಕ್ಷೆ
  • ಸಂದರ್ಶನ

ಸಂಬಳ:

  • ಜೂನಿಯರ್ ರಿಸರ್ಚ್ ಫೆಲೋ (ಸೂಕ್ಷ್ಮ ಜೀವವಿಜ್ಞಾನ/ಜೈವಿಕ ತಂತ್ರಜ್ಞಾನ/ಜೈವಿಕ ರಸಾಯನಶಾಸ್ತ್ರ/ಜೈವಿಕ ಮಾಹಿತಿಶಾಸ್ತ್ರ/ವೈದ್ಯಕೀಯ ವಿಜ್ಞಾನ) – ರೂ.37,000/-
  • ಜೂನಿಯರ್ ರಿಸರ್ಚ್ ಫೆಲೋ (ಪಾಲಿಮರ್ ಸೈನ್ಸ್/ಪಾಲಿಮರ್ ಕೆಮಿಸ್ಟ್ರಿ/ಕೆಮಿಸ್ಟ್ರಿ) – ರೂ.37,000/-
  • ಜೂನಿಯರ್ ರಿಸರ್ಚ್ ಫೆಲೋ (ಆಹಾರ ವಿಜ್ಞಾನ ಮತ್ತು ಪೋಷಣೆ/ಆಹಾರ ತಂತ್ರಜ್ಞಾನ/ಆಹಾರ ಸಂಸ್ಕರಣಾ ಎಂಜಿನಿಯರಿಂಗ್) – ರೂ.37,000/-
  • ರಿಸರ್ಚ್ ಅಸೋಸಿಯೇಟ್ – ರೂ.67,000/-

ಅರ್ಜಿ ಸಲ್ಲಿಸುವ ವಿಧಾನ:

  • DRDO DIBT ನೇಮಕಾತಿ ಅಧಿಸೂಚನೆ 2025 ಅನ್ನು ಸಂಪೂರ್ಣವಾಗಿ ಓದಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ. (ಅಧಿಸೂಚನೆಯ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ)
  • ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ, ಮೊಬೈಲ್ ಸಂಖ್ಯೆ, ಐಡಿ ಪ್ರೂಫ್, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಛಾಯಾಚಿತ್ರ, ರೆಸ್ಯೂಮ್ ಮತ್ತು ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಡಿ.
  • ನಿಮಗೆ ಸಂಬಂಧಿಸಿದ DRDO DIBT ವಿಭಾಗವನ್ನು ಆಯ್ಕೆಮಾಡಿ.
  • ಆನ್ಲೈನ್ ಅರ್ಜಿ ನಮೂನೆಯ ಲಿಂಕ್ ತೆರೆಯಿರಿ.
  • ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.
  • ನಿಮ್ಮ ವರ್ಗಕ್ಕೆ ಅನ್ವಯಿಸಿದರೆ ಶುಲ್ಕವನ್ನು ಪಾವತಿ ಮಾಡಿ, ದಾಖಲೆಗಳನ್ನು ಸಲ್ಲಿಸಲು ಮರೆಯದಿರಿ.
  • ನೀವು ಒದಗಿಸುತ್ತಿರುವ ಎಲ್ಲ ಮಾಹಿತಿಗಳು ಸರಿಯಾಗಿವೆಯೇ ಎಂದು ಮತ್ತೊಮ್ಮೆ ಪರೀಕ್ಷಿಸಿಕೊಳ್ಳಿ.
  • ಕೊನೆಗೆ ಅರ್ಜಿ ನಮೂನೆಯನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಿ – ಮುಖ್ಯ ನಿರ್ದೇಶಕರು, DIBT-DRDO, ಸಿದ್ಧಾರ್ಥನಗರ, ಮೈಸೂರು-570011 (ನಿಗದಿತ ರೀತಿಯಲ್ಲಿ, ರಿಜಿಸ್ಟರ್ ಪೋಸ್ಟ್, ಸ್ಪೀಡ್ ಪೋಸ್ಟ್ ಅಥವಾ ಯಾವುದೇ ಇತರ ಸೇವೆಯ ಮೂಲಕ) ದಿನಾಂಕ 28-ಅಕ್ಟೋಬರ್-2025 ರ ಒಳಗಾಗಿ ತಲುಪುವಂತೆ ಕಳುಹಿಸಿ.

Important Direct Links:

Official Notification PDFDownload
Official Websitehttps://drdo.res.in/drdo/
More UpdatesKarnatakaHelp.in
About the Author

ರಾಮಕೃಷ್ಣ ಬಿ ಹೆಚ್‌ ಅವರು 2020ರಿಂದ ಉದ್ಯೋಗ ಸುದ್ದಿಯ ಮೂಲಕ ತಮ್ಮ ಓದುಗರಿಗೆ ನಿಖರ, ನೈಜ ಮತ್ತು ಸವಿವರವಾದ ಮಾಹಿತಿಯನ್ನು ತಲುಪಿಸುತ್ತಿದ್ದಾರೆ. ವಿಶೇಷವಾಗಿ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದ ಕುರಿತಾಗಿ ಆಳವಾದ ಅಧ್ಯಯನವನ್ನು ಇಟ್ಟುಕೊಂಡಿದ್ದು, ಯುವಕರಿಗೆ ಉದ್ಯೋಗದ ಮಾಹಿತಿಯನ್ನು ತಲುಪಿಸುವ ಗುರಿಯನ್ನು ಇಟ್ಟುಕೊಂಡಿದ್ದಾರೆ.

1 thought on “ದೇಶದ ಹೆಮ್ಮೆಯ ಸಂಸ್ಥೆ DRDOನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ, ಇಂದೇ ಅರ್ಜಿ ಸಲ್ಲಿಸಿ”

Leave a Comment