2024-25ನೇ ಸಾಲಿನ 2024-25ನೇ ಸಾಲಿನಲ್ಲಿ ನ್ಯಾಷನಲ್ ಮೀನ್ಸ್-ಕಮ್ ಮೆರಿಟ್ ವಿದ್ಯಾರ್ಥಿ ವೇತನ (NMMS)ಕ್ಕೆ ಅರ್ಹ ವಿದ್ಯಾರ್ಥಿಗಳ ಆಯ್ಕೆಗಾಗಿ ಪರೀಕ್ಷೆಯನ್ನು ದಿನಾಂಕ: 02.02.2025 ಭಾನುವಾರದಂದು ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು(KSQAAC) ನಡೆಸುತ್ತಿದೆ. ಈ ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳ ಪ್ರವೇಶ ಪತ್ರವನ್ನು (NMMS Exam Hall Ticket 2025-Admission Ticket) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯ (https://kseab.karnataka.gov.in/) ವೆಬ್‌ಸೈಟ್‌ನ ಮೂಲಕ ಡೌನ್ಲೋಡ್ ಮಾಡಿಕೊಳ್ಳಲು ಇಲಾಖೆಯು ತಿಳಿಸಿದೆ.
ವಿದ್ಯಾರ್ಥಿಗಳು ತಮ್ಮ ಹಾಲ್ ಟಿಕೆಟ್ ಡೌನ್ಲೋಡ್ ಮಾಡಿಕೊಳ್ಳಲು ನಿಮ್ಮ ಶಾಲಾ ಮುಖ್ಯಶಿಕ್ಷಕರು/ಪ್ರಾಂಶುಪಾಲರನ್ನು ಭೇಟಿ ಮಾಡಿ ಅಥವಾ ಒಂದು ವೇಳೆ ಹತ್ತಿರವಿರುವ ವಸತಿ ಶಾಲೆಯಲ್ಲಿ ನೀವು ಅರ್ಜಿ ಸಲ್ಲಿಸಿದ್ದಲ್ಲಿ ಅಲ್ಲಿಗೆ ಮರು ಭೇಟಿ ನೀಡಿ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
ಗಮನಿಸಿ: ಹಾಲ್ ಟಿಕೆಟ್ ಮೇಲೆ ಕಡ್ಡಾಯವಾಗಿ ನಿಮ್ಮ ಶಾಲಾ ಮುಖ್ಯಶಿಕ್ಷಕರು/ಪ್ರಾಂಶುಪಾಲರ ಸಹಿ ಮಾಡಿ ಮೊಹರನ್ನು ಹಾಕಿರಬೇಕು. ಒಂದು ವೇಳೆ ಹಾಕಿಲ್ಲವೆಂದರೆ ತಪ್ಪದೇ ಹಾಕಿಸಿಕೊಳ್ಳಿ.
Important Direct Links of NMMS Exam Karnataka 2025
Karnataka NMMS Exam Hall Ticket 2025 Notice PDF | Download |
Official Website | kseab.karnataka.gov.in |
More Updates | Karnataka Help.in |