ಭಾರತ ಸರ್ಕಾರದ ಒಂದು ಉದ್ಯಮವಾಗಿರುವ ನುಮಾಲಿಗಢ್ ರಿಫೈನರಿ ಲಿಮಿಟೆಡ್ (NRL)ನಲ್ಲಿ 2025ನೇ ಸಾಲಿಗೆ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ವಿವಿಧ ಟ್ರೇಡ್ ಗಳಲ್ಲಿ ಖಾಲಿ ಇರುವ ಒಟ್ಟು 75 ಅಪ್ರೆಂಟಿಸ್ ತರಬೇತಿಗೆ ಐಟಿಐ, ಡಿಪ್ಲೊಮಾ ಹಾಗೂ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಸದರಿ ತರಬೇತಿಗೆ ಅರ್ಜಿ ಸಲ್ಲಿಸಲು ನ.17ರವರೆಗೆ ಅವಕಾಶವಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು NRL ಅಧಿಕೃತ ಜಾಲತಾಣ https://www.nrl.co.in/ಕ್ಕೆ ಭೇಟಿ ನೀಡಿ.
ಅಭ್ಯರ್ಥಿಗಳು ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ 10ನೇ ತರಗತಿ ಉತ್ತೀರ್ಣ, ಸಂಬಂಧಿತ ವಿಷಯದಲ್ಲಿ ಐಟಿಐ, ಡಿಪ್ಲೋಮಾ, ಪದವಿ, ಎಲ್.ಎಲ್.ಬಿ, ಎಂ.ಸಿ.ಎ/ ಬಿ.ಸಿ.ಎ/ಬಿ.ಎಸ್.ಸಿ ಹಾಗೂ ಎಂ.ಬಿ/ಪಿ.ಜಿ.ಡಿ.ಎಂ ಪೂರ್ಣಗೊಳಿಸಿರಬೇಕು.
ವಯೋಮಿತಿ:
17-11-2025 ರಂತೆ;
ಕನಿಷ್ಠ ವಯಸ್ಸಿನ ಮಿತಿ – 18ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ – ಯಾವುದೇ ಗರಿಷ್ಠ ವಯಸ್ಸಿನ ಮಿತಿ ಇರುವುದಿಲ್ಲ
ಆಯ್ಕೆ ಪ್ರಕ್ರಿಯೆ:
ಅರ್ಹತಾ ಪರೀಕ್ಷೆಯಲ್ಲಿ ಗಳಿಸಿರುವ ಶೇಕಡಾವಾರು ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಅಪ್ರೆಂಟಿಸ್ ತರಬೇತಿಗೆ ಆಯ್ಕೆ ಮಾಡಲಾಗುತ್ತದೆ.
ಸ್ಟೈಫಂಡ್:
ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ಪದವಿ/ಡಿಪ್ಲೊಮಾ ಅಭ್ಯರ್ಥಿಗಳಿಗೆ 17,000ರೂ., ಐಟಿಐ ಅಭ್ಯರ್ಥಿಗಳಿಗೆ 12,200ರೂ. ಹಾಗೂ ಕ್ಯಾಂಟೀನ್ ಭತ್ಯೆ 1,415ರೂ. ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:
ಪದವಿ ಹಾಗೂ ಐಟಿಐ ಅಭ್ಯರ್ಥಿಗಳು (PM-NAPS) ಪೋರ್ಟಲ್ https://www.apprenticeshipindia.gov.in ಗೆ ಭೇಟಿ ನೀಡಿ ಮತ್ತು ಇಂಜಿನಿಯರಿಂಗ್ ಡಿಪ್ಲೊಮಾ. ಅಪ್ರೆಂಟಿಸ್‌ಗಳು NATS 2.0 https://nats.education.gov.in/ ಗೆ ಭೇಟಿ ನೀಡಿ. ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು.
• ನಂತರ ಅಭ್ಯರ್ಥಿಗಳು ಅರ್ಜಿ ನಮೂನೆ ಭರ್ತಿ ಮಾಡಲು NRL ಅಧಿಕೃತ ವೆಬ್ಸೈಟ್ www.nrl.co.in ಗೆ ಭೇಟಿ ನೀಡಿ.
• ವೃತ್ತಿಜೀವನ > ಅಪ್ರೆಂಟಿಸ್ ತರಬೇತಿದಾರರಿಗೆ ಆನ್‌ಲೈನ್ ಅರ್ಜಿ – ಲಿಂಕ್ ಮೇಲೆ ಕ್ಲಿಕ್ ಮಾಡಿ.
• ನಂತರ ಅಭ್ಯರ್ಥಿಗಳು ಅರ್ಜಿಯಲ್ಲಿ ಕೇಳಲಾಗುವ ಅಗತ್ಯ ವಿವರಗಳು, ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಮತ್ತು ಸ್ಕ್ಯಾನ್ ಮಾಡಿದ ಸಹಿಯನ್ನು ಅಪ್‌ಲೋಡ್ ಮಾಡಬೇಕು.
• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.
• ಭವಿಷ್ಯದ ಬಳಕೆಗಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಿಸಿ.