ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ವಿವಿಧ ವೃಂದದ ದರ್ಜೆ 2 ಅಧಿಕಾರಿ ಹುದ್ದೆಗಳ ಭರ್ತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶುಕ್ರವಾರ ಅಧಿಸೂಚನೆ ಹೊರಡಿಸಿ, ಅರ್ಜಿ ಆಹ್ವಾನಿಸಿದೆ.
ನೇರ ನೇಮಕಾತಿ ಮೂಲಕ 27 ಹುದ್ದೆಗಳು, 06 ಹುದ್ದೆಗಳನ್ನು ಆಂತರಿಕ ನೇಮಕಾತಿ ಮೂಲಕ ನೇಮಕ ಮಾಡಿಕೊಳ್ಳಲಿದೆ. ಪದವಿ ಮತ್ತು ಸಂಬಂಧಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವವರು ಅರ್ಜಿ ಸಲ್ಲಿಸಬಹುದು. ಆಸಕ್ತ ಅರ್ಹ ಅಭ್ಯರ್ಥಿಗಳು ಡಿ.10 ರೊಳಗೆ ಕೆಇಎ ಅಧಿಕೃತ ವೆಬ್ಸೈಟ್ ಲಿಂಕ್ https://cetonline.karnataka.gov.in/KEARECRUITMENT_NWKRTC/FORMS/LOGIN.ASPXಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಎಂದು ನೇಮಕಾತಿ ಅಧಿಸೂಚನೆ ತಿಳಿಸಿದೆ.
ಸಹಾಯಕ ಆಡಳಿತಾಧಿಕಾರಿ ಹುದ್ದೆಗೆ – ಸಿಬ್ಬಂದಿ ನಿರ್ವಹಣೆ ಅಥವಾ ಮಾನವ ಸಂಬಂಧಗಳಲ್ಲಿ ವಿಶೇಷತೆಯೊಂದಿಗೆ ಸಮಾಜ ಕಾರ್ಯ ಅಥವಾ ವ್ಯವಹಾರ ಆಡಳಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ
ಸಹಾಯಕ ಲೆಕ್ಕಾಧಿಕಾರಿ ಹುದ್ದೆಗೆ – ವಾಣಿಜ್ಯದಲ್ಲಿ ಸ್ನಾತಕೋತ್ತರ ಪದವಿ ಅಥವಾ ಹಣಕಾಸು ವಿಷಯದಲ್ಲಿ ಎಂಬಿಎ ಜೊತೆಗೆ ಬಿ.ಕಾಂ.
ಸಹಾಯಕ ಕಾನೂನು ಅಧಿಕಾರಿ ಹುದ್ದೆಗೆ – ಕಾನೂನು ಪದವಿ
ಸಹಾಯಕ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ ಹುದ್ದೆಗೆ – ಸಮಾಜ ಕಾರ್ಯ(MSW) ವಿಷಯದಲ್ಲಿ ಸ್ನಾತಕೋತ್ತರ ಪದವಿ.
ಸಹಾಯಕ ತಾಂತ್ರಿಕ ಶಿಲ್ಪಿ ಹುದ್ದೆಗೆ – ಆಟೋಮೊಬೈಲ್/ಮೆಕ್ಯಾನಿಕಲ್ ವಿಷಯದಲ್ಲಿ ಪದವಿ. ಜೊತೆಗೆ HTV ಡ್ರೈವಿಂಗ್ ಪರವಾನಗಿ ಹೊಂದಿರಬೇಕು.
ಸಹಾಯಕ ಸಂಚಾರ ವ್ಯವಸ್ಥಾಪಕ ಹುದ್ದೆಗೆ – ಸಾರಿಗೆ/ಮಾರ್ಕೆಟಿಂಗ್ ವಿಷಯದಲ್ಲಿ MBA ಅಥವಾ MSWನಲ್ಲಿ ಸಿಬ್ಬಂದಿ ನಿರ್ವಹಣೆ ಮತ್ತು ಕೈಗಾರಿಕಾ ಸಂಬಂಧ ವಿಷಯ ಸ್ಪೇಸಿಯಲಿಝಷನ್ ಅಥವಾ ಮೆಕ್ಯಾನಿಕಲ್/ಆಟೋಮೊಬೈಲ್ ಎಂಜಿನಿಯರಿಂಗ್ನಲ್ಲಿ ಬಿಇ.
ಆಂತರಿಕ ನೇಮಕಾತಿ ದರ್ಜೆ-2 ಅಧಿಕಾರಿ ಹುದ್ದೆಗಳ ವಿದ್ಯಾರ್ಹತೆ;
ಸಹಾಯಕ ಕಾರ್ಮಿಕ ಕಲ್ಯಾಣಾಧಿಕಾರಿ ಹುದ್ದೆಗೆ – ಪದವಿ
ಸಹಾಯಕ ಸಂಚಾರ ವ್ಯವಸ್ಥಾಪಕ ಹುದ್ದೆಗೆ – ಪದವಿ ಜೊತೆಗೆ HTV ಡ್ರೈವಿಂಗ್ ಪರವಾನಗಿ ಹೊಂದಿರಬೇಕು.
ಸಹಾಯಕ ತಾಂತ್ರಿಕ ಶಿಲ್ಪಿ ಹುದ್ದೆಗೆ – ಆಟೋಮೊಬೈಲ್/ಮೆಕ್ಯಾನಿಕಲ್ ವಿಷಯದಲ್ಲಿ ಪದವಿ. ಜೊತೆಗೆ HTV ಡ್ರೈವಿಂಗ್ ಪರವಾನಗಿ
ಸಹಾಯಕ ಕಾನೂನು ಅಧಿಕಾರಿ ಹುದ್ದೆಗೆ – ಕಾನೂನು ಪದವಿ
ವಯೋಮಿತಿ:
ಕನಿಷ್ಠ ವಯಸ್ಸಿನ ಮಿತಿ – 18 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ;
ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ – 38 ವರ್ಷಗಳು
ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ – 41 ವರ್ಷಗಳು
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ /ಪ್ರವರ್ಗ-1 ಅಭ್ಯರ್ಥಿಗಳಿಗೆ – 43 ವರ್ಷಗಳು
ಸರ್ಕಾರದ ನಿಯಮಗಳ ಪ್ರಕಾರ ವರ್ಗವಾರು ವಯಸ್ಸಿನ ಮಿತಿ ಸಡಿಲಿಕೆ ಇರುತ್ತದೆ.
ಆಯ್ಕೆ ಪ್ರಕ್ರಿಯೆ:
ಸಾಮಾನ್ಯ ಸಾಮರ್ಥ್ಯ ಪರೀಕ್ಷೆ ದಾಖಲಾತಿ ಪರೀಕ್ಷೆ
ಅರ್ಜಿ ಶುಲ್ಕ:
ಸಾಮಾನ್ಯ ಅರ್ಹತೆ ಮತ್ತು ಇತರೆ ಪ್ರವರ್ಗ-2ಎ /2ಬಿ/3ಎ / 3ಬಿ ಅಭ್ಯರ್ಥಿಗಳಿಗೆ – ರೂ.750/- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಮಾಜಿ ಸೈನಿಕ ಮತ್ತು ತೃತೀಯ ಲಿಂಗ ಅಭ್ಯರ್ಥಿಗಳಿಗೆ – ರೂ.500 /- ವಿಶೇಷ ಚೇತನ ಅಭ್ಯರ್ಥಿಗಳಿಗೆ – ರೂ.250/-
ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೀಗೆ….
ಹಂತ – 1 ಪ್ರಾಧಿಕಾರದ ಅಧಿಕೃತ ಜಾಲತಾಣ https://cetonline.karnataka.gov.in/kea/indexnewಕ್ಕೆ ಭೇಟಿ ನೀಡಿ
ಹಂತ – 2 ನಂತರ “ನೇಮಕಾತಿ” → “ವಿವಿಧ ಇಲಾಖೆಗಳ ನೇಮಕಾತಿ – 2025” –>> ವಿವಿಧ ಇಲಾಖೆಗಳ ನೇಮಕಾತಿ(NON-HK) – 2025 ವಿಭಾಗದಲ್ಲಿ ನೀಡಲಾದ → NWKRTC – 2025 – ವಿವಿಧ ಹುದ್ದೆಗಳ ನೇಮಕಾತಿ ಆನ್ಲೈನ್ ಅರ್ಜಿ ಲಿಂಕ್ ಮೇಲೆ ಲಿಂಕ್ ಒತ್ತಿ.
ಹಂತ – 3 ಹೊಸ ಪುಟ ತೆರೆಯುತ್ತದೆ. ಅಲ್ಲಿ ನೋಂದಣಿ ಅಥವಾ ಲಾಗಿನ್ ಮಾಡಿಕೊಳ್ಳಿ.
ಹಂತ – 4 ಅರ್ಜಿ ನಮೂನೆಯಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ. ಅರ್ಜಿ ಶುಲ್ಕ ಪಾವತಿಸುವ ಮೂಲಕ ಅರ್ಜಿ ಸಲ್ಲಿಸಬಹುದು.
Driver