ಉಚಿತ ಪೊಲೀಸ್ ಸಬ್ ಇನ್ಸ್ಪೆಕ್ಟರ್(PSI) ಪೂರ್ವ-ನೇಮಕಾತಿ ತರಬೇತಿಗೆ ಅರ್ಜಿ ಆಹ್ವಾನ

2025-26ನೇ ಸಾಲಿಗೆ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಉಚಿತವಾಗಿ ವಸತಿಯುತ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪರೀಕ್ಷಾ ಪೂರ್ವ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪೊಲೀಸ್ ಇಲಾಖೆಗೆ ಸೇರಲು ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಸದಾವಕಾಶವಾಗಿದ್ದು, ಪ.ಜಾತಿಯ ಅಭ್ಯರ್ಥಿಗಳಿಗೆ ಉಚಿತವಾಗಿ 90 ದಿನಗಳವರೆಗೆ ವಸತಿಯುತ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪೂರ್ವ-ನೇಮಕಾತಿ ತರಬೇತಿಯನ್ನು ನೀಡಲಾಗುತ್ತದೆ. ಪದವಿ ಪೂರ್ಣಗೊಳಿಸಿರುವ ಆಸಕ್ತ ಅಭ್ಯರ್ಥಿಗಳು ಅಧಿಕೃತ ಜಾಲತಾಣ https://swdservices.karnataka.gov.in/petccoaching/PSIHomeKan.aspxದ ಮೂಲಕ ಸೆಪ್ಟೆಂಬರ್ 12ರೊಳಗೆ … More

ಯುಪಿಎಸ್ಸಿ NDA ಮತ್ತು NA 2 ಪರೀಕ್ಷೆಯ ವೇಳಾಪಟ್ಟಿ ಪ್ರಕಟ

ಕೇಂದ್ರ ಲೋಕ ಸೇವಾ ಆಯೋಗವು ರಾಷ್ಟ್ರೀಯ ರಕ್ಷಣಾ ಅಕಾಡೆಮಿ(NDA) ಮತ್ತು ನೌಕಾ ಅಕಾಡೆಮಿ(NA) II ಪರೀಕ್ಷೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಭಾರತೀಯ ಸಶಸ್ತ್ರ ಪಡೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕೇಂದ್ರ ಲೋಕ ಸೇವಾ ಆಯೋಗವು ಪ್ರತಿ ವರ್ಷ 2 ಬಾರಿ NDA ಪರೀಕ್ಷೆಯನ್ನು ದೇಶಾದ್ಯಂತ ನಡೆಸುತ್ತದೆ. ಪ್ರಸ್ತುತ ಆಯೋಗವು 2025ರ ಮೇ 28 ರಂದು ಒಟ್ಟು 406 ಹುದ್ದೆಗಳ ನೇಮಕಾತಿಗೆ ಅಧಿಸೂಚಿಸಲಾದ NDA & ನೌಕಾ ಅಕಾಡೆಮಿ (NA) II ಪರೀಕ್ಷೆಯ ವೇಳಾಪಟ್ಟಿಯನ್ನು ಯುಪಿಎಸ್‌ಸಿ ಅಧಿಕೃತ ವೆಬ್ … More

ದಕ್ಷಿಣ ರೈಲ್ವೆ(SR)ಯಲ್ಲಿ 3518 ಅಪ್ರೆಂಟಿಸ್‌ ಹುದ್ದೆಗಳ ಬೃಹತ್ ನೇಮಕಾತಿ, ಅಪ್ಲೈ ಮಾಡಿ

ದಕ್ಷಿಣ ರೈಲ್ವೆ(SR)ಯು 2025-26ನೇ ಸಾಲಿಗನಲ್ಲಿ ಅಪ್ರೆಂಟಿಸ್ ಕಾಯ್ದೆಯಡಿಯಲ್ಲಿ ಅಪ್ರೆಂಟಿಸ್‌ಗಳ ನೇಮಕಾತಿಗಾಗಿ ರೈಲ್ವೆ ನೇಮಕಾತಿ ಕೋಶವು ಸೋಮವಾರ(ಆ.25) ಅಧಿಸೂಚನೆ ಹೊರಡಿಸಿದೆ. ವಿಭಾಗಗಳು/ಕಾರ್ಯಾಗಾರಗಳು/ಘಟಕಗಳಲ್ಲಿ ಗೊತ್ತುಪಡಿಸಿದ ಟ್ರೇಡ್‌ಗಳಲ್ಲಿ ಪ್ರಸ್ತುತ ಖಾಲಿ ಇರುವ ಫಿಟ್ಟರ್, ಪೇಂಟರ್, ವೆಲ್ಡರ್, ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞ, ಮೆಷಿನಿಸ್ಟ್, MMV, ಟರ್ನರ್, ಡೀಸೆಲ್ ಮೆಕ್ಯಾನಿಕ್, ಕಾರ್ಪೆಂಟರ್, ಪೇಂಟರ್ ಸೇರಿದಂತೆ ಇತರೆ ಒಟ್ಟು 3518 ಅಪ್ರೆಂಟಿಸ್‌ ಹುದ್ದೆಗಳ ತರಬೇತಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು sr.indianrailways.gov.inಗೆ ಭೇಟಿ ನೀಡಿ. ಸೆ.25ರೊಳಗೆ ಆನ್‌ಲೈನ್ ಮೂಲಕ … More

ಆರ್‌ಪಿಎಫ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳ ಅಂತಿಮ ಫಲಿತಾಂಶ ಪ್ರಕಟ

ರೈಲ್ವೆ ರಕ್ಷಣಾ ಪಡೆಯ (ಆರ್‌ಪಿಎಫ್) ಸಬ್ ಇನ್ಸ್‌ಪೆಕ್ಟರ್ (ಕಾರ್ಯನಿರ್ವಾಹಕ) ಹುದ್ದೆಗಳ ನೇಮಕಾತಿಯ ಅಂತಿಮ ಫಲಿತಾಂಶವನ್ನು ರೈಲ್ವೆ ನೇಮಕಾತಿ ಮಂಡಳಿಯು ಮಂಗಳವಾರ(ಆ.26) ಬಿಡುಗಡೆ ಮಾಡಿದೆ. ರೈಲ್ವೆ ನೇಮಕಾತಿ ಮಂಡಳಿಯು CEN RPF-01/2024ರ ಅಡಿಯಲ್ಲಿ ಅಧಿಸೂಚಿಸಲಾದ 452 ಆರ್‌ಪಿಎಫ್ ಸಬ್ ಇನ್ಸ್‌ಪೆಕ್ಟರ್ (ಕಾರ್ಯನಿರ್ವಾಹಕ) ಹುದ್ದೆಗಳ ನೇಮಕಾತಿಗಾಗಿ 2024ರ ಡಿಸೆಂಬರ್ 2, 3, 9, 12 ಮತ್ತು 13ವೆರೆಗೆ ನಡೆಸಲಾದ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)ಗಳಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ 2025ರ ಜೂನ್ 22, ಜುಲೈ 2ರವರೆಗೆ ದೈಹಿಕ ದಕ್ಷತೆ ಪರೀಕ್ಷೆ … More

ಫೆಡರಲ್ ಬ್ಯಾಂಕಿ(Federal Bank)ನಲ್ಲಿ ಅಸೋಸಿಯೇಟ್ ಆಫೀಸರ್‌ ನೇಮಕ, ಅಪ್ಲೈ ಮಾಡಿ

ಪ್ರಮುಖ ಖಾಸಗಿ ವಲಯದ ಬ್ಯಾಂಕ್‌ ಆಗಿರುವ ಫೆಡರಲ್ ಬ್ಯಾಂಕ್ (Federal Bank)ನಲ್ಲಿ ಖಾಲಿ ಇರುವ ಅಸೋಸಿಯೇಟ್ ಆಫೀಸರ್‌(ಸೇಲ್ಸ್) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ. ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮೆ (BFSI) ವಲಯಗಳಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಅಧಿಕೃತ ಅಂತರ್ಜಾಲ https://federalbank.manipalbfsi.com/ದ ಮೂಲಕ ಸೆ.03ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು: ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಯಾವುದೇ ವಿಭಾಗದಲ್ಲಿ ಪದವಿ ಪೂರ್ಣಗೊಳಿಸಿರಬೇಕು/ಎಐಸಿಟಿಇ(AICTE) ಅನುಮೋದಿಸಿದ … More

SBI Clerk 2025: ಜೂ.ಅಸೋಸಿಯೇಟ್ ಹುದ್ದೆಗಳ ಬೃಹತ್ ನೇಮಕಾತಿ, ಈಗಲೇ ಅಪ್ಲೈ ಮಾಡಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)ನಲ್ಲಿ ಜೂನಿಯರ್ ಅಸೋಸಿಯೇಟ್ಸ್ (ಕ್ಲರ್ಕ್) ಹುದ್ದೆಗಳ ಬೃಹತ್ ನೇಮಕಾತಿಗಾಗಿ ಕೇಂದ್ರ ನೇಮಕಾತಿ ಮತ್ತು ಬಡ್ತಿ ಇಲಾಖೆ ಕಾರ್ಪೊರೇಟ್ ಕೇಂದ್ರ ಮುಂಬೈ ಬುಧವಾರ(ಜು.6)ದಂದು ಅಧಿಸೂಚನೆಯನ್ನು ಹೊರಡಿಸಿ, ಅರ್ಜಿ ಆಹ್ವಾನಿಸಿದೆ. ಕ್ಲೆರಿಕಲ್ ಕೇಡರ್‌ನಲ್ಲಿ ಖಾಲಿ ಇರುವ (5180 ನಿಯಮಿತ ಹಾಗೂ 1409 ಬ್ಯಾಕ್ ಲಾಗ್) ಒಟ್ಟು 6589 ಜೂನಿಯರ್ ಅಸೋಸಿಯೇಟ್ (ಕಸ್ಟಮರ್ ಸಪೋರ್ಟ್ & ಸೇಲ್ಸ್) ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಬ್ಯಾಂಕಿಂಗ್ ವಲಯದಲ್ಲಿ ಕೆಲಸ ನಿರ್ವಹಿಸಲು ಆಸಕ್ತಿ ಹೊಂದಿರುವ ಪದವಿ ಪೂರ್ಣಗೊಳಿಸಿರುವ ಅರ್ಹ … More

ಕೆಪಿಟಿಸಿಎಲ್‌ – ಅಂತಿಮ ಆಯ್ಕೆ ಪಟ್ಟಿ ಪ್ರಕಟ

ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ(ಕವಿಪ್ರನಿನಿ)ದ ಮಿಕ್ಕುಳಿದ ವೃಂದ(ಎನ್‌.ಕೆ.ಕೆ)ದ ಕಿರಿಯ ಪವರ್‌ಮ್ಯಾನ್‌ ಮತ್ತು ಕಿರಿಯ ಸ್ಟೇಷನ್‌ ಪರಿಚಾರಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ಸೋಮವಾರ(ಆ.25) ಬಿಡುಗಡೆ ಮಾಡಲಾಗಿದೆ ಎಂದು ನಿಗಮದ ನಿರ್ದೇಶಕರು(ಆಡಳಿತ ಮತ್ತು ಮಾನವ ಸಂಪನ್ಮೂಲ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಹನಾ ಶಕ್ತಿ ಪರೀಕ್ಷೆಯಲ್ಲಿ ಅರ್ಹರಾದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಆ.6 ರಂದು ಪ್ರಕಟಿಸಿ, ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಲಾಗಿತ್ತು. ಈ ಅವಧಿಯಲ್ಲಿ ಸ್ವೀಕರಿಸಲಾದ ಆಕ್ಷೇಪಣೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ಅಂತಿಮ ಆಯ್ಕೆ ಪಟ್ಟಿಯನ್ನು ಕಟ್‌-ಆಪ್‌ ಅಂಕಗಳೊಂದಿಗೆ … More

ಯುಜಿಸಿಇಟಿ, ಯುಜಿನೀಟ್-2025: 2ನೇ ಸುತ್ತಿನ ಸೀಟು ಹಂಚಿಕೆಯ ಪರಿಷ್ಕೃತ ವೇಳಾಪಟ್ಟಿ ಪ್ರಕಟ

ಯುಜಿಸಿಇಟಿ, ಯುಜಿನೀಟ್ 2025ರ ಪ್ರವೇಶಾತಿ ಸಂಬಂಧ ಆ.20ರಂದು ಪ್ರಕಟಿಸಲಾಗಿದ್ದ, ಎರಡನೇ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪರಿಷ್ಕರಿಸಿ ಸೋಮವಾರ(ಆ.25) ಬಿಡುಗಡೆ ಮಾಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸದರಿ ವೇಳಾಪಟ್ಟಿಯನ್ನು ಕೆಇಎ ಅಧಿಕೃತ ವೆಬ್ಸೈಟ್ https://cetonline.karnataka.gov.in/kea/ನಲ್ಲಿ ಪರಿಶೀಲನೆ ಮಾಡಬಹುದಾಗಿದೆ. ಯುಜಿಸಿಇಟಿ-2025 ಎರಡನೇ ಸುತ್ತಿನ ತಾತ್ಕಾಲಿಕ ಸೀಟು ಮ್ಯಾಟ್ರಿಕ್ಸ್: ಆ.21ರಂದು ಪ್ರಾಧಿಕಾರವು KEA ವೆಬ್‌ಸೈಟ್‌ನಲ್ಲಿ ಛಾಯ್ಸ್‌-3, ಛಾಯ್ಸ್‌-4, ಮುಟ್ಟುಗೋಲು ಹಾಕಿಕೊಂಡ/ರದ್ದುಪಡಿಸಿಕೊಂಡ, ಹೊಸದಾಗಿ ಸೇರ್ಪಡೆಯಾದ ಸೀಟುಗಳ ಎರಡನೇ ಸುತ್ತಿನ ತಾತ್ಕಾಲಿಕ … More

ಪ.ಜಾತಿಯ ಅಭ್ಯರ್ಥಿಗಳಿಗೆ ಉಚಿತ ಡ್ರೋನ್‌ ತರಬೇತಿ ನೀಡಲು ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದ ವತಿಯಿಂದ 2025-26ನೇ ಸಾಲಿನಲ್ಲಿ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಉಚಿತವಾಗಿ ವಸತಿಯುತ ಡ್ರೋನ್ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಲಾಜಿಸ್ಟಿಕ್ಸ್, ಕಣ್ಗಾವಲು, ಕೃಷಿ ಮತ್ತು ವಿವಿಧ ಕ್ಷೇತ್ರಗಳಲ್ಲಿ ಡ್ರೋನ್ ಉಪಕರಣವನ್ನು ಉಪಯೋಗಿಸುವ ಕುರಿತು 15 ದಿನಗಳವರೆಗೆ ವಸತಿಯುತ ಡ್ರೋನ್ ತರಬೇತಿ ನೀಡಲಿದೆ, ಡ್ರೋನ್ ಕಲಿಕೆಯಲ್ಲಿ ಆಸಕ್ತಿ ಹೊಂದಿರುವ ಅರ್ಹ ಅಭ್ಯರ್ಥಿಗಳು ಸೆ.20ರೊಳಗೆ https://swdservices.karnataka.gov.in/petccoaching/DroneHome.aspxಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು: … More

KSIIDC ಶಿವಮೊಗ್ಗ, ವಿಜಯಪುರ ಏರ್ಪೋರ್ಟ್‌ನಲ್ಲಿ ತಾಂತ್ರಿಕ ಸಿಬ್ಬಂದಿಗಳ ನೇಮಕ

ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (KSIIDC)ದಿಂದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಖಾಲಿ ಇರುವ ತಾಂತ್ರಿಕ ಸಿಬ್ಬಂದಿ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ ಎಂದು ನಿಗಮದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಶಿವಮೊಗ್ಗ ಮತ್ತು ವಿಜಯಪುರ ವಿಮಾನ ನಿಲ್ದಾಣಗಳಲ್ಲಿ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಏರ್ಪೋರ್ಟ್ ಡೈರೆಕ್ಟರ್, ಸಿವಿಲ್ ಇಂಜಿನಿಯರ್ ಹೆಡ್, ಎಆರ್ ಎಫ್ಎಫ್ ಹೆಡ್, ಅಸಿಸ್ಟೆಂಟ್ ಟರ್ಮಿನಲ್ ಮ್ಯಾನೇಜರ್ ಸೇರಿದಂತೆ ಇತರೆ ಒಟ್ಟು 10 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಗುತ್ತಿಗೆ ಆಧಾರದ ಮೇಲೆ … More