ಫೆಡರಲ್ ಬ್ಯಾಂಕಿ(Federal Bank)ನಲ್ಲಿ ಅಸೋಸಿಯೇಟ್ ಆಫೀಸರ್ ನೇಮಕ, ಅಪ್ಲೈ ಮಾಡಿ
ಫೆಡರಲ್ ಬ್ಯಾಂಕಿನಲ್ಲಿ ಖಾಲಿ ಇರುವ ಅಸೋಸಿಯೇಟ್ ಆಫೀಸರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ!. ಅರ್ಜಿ ಸಲ್ಲಿಕೆಗೆ ಬೇಕಾದ ಅರ್ಹತಾ ಮಾನದಂಡಗಳೇನು?, ಅರ್ಜಿ ಸಲ್ಲಿಕೆ ಹೇಗೆ? ಈ ಕುರಿತು ಮಾಹಿತಿ ಇಲ್ಲಿದೆ.
ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮೆ (BFSI) ವಲಯಗಳಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಅಧಿಕೃತ ಅಂತರ್ಜಾಲ https://federalbank.manipalbfsi.com/ದ ಮೂಲಕ ಸೆ.03ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ನೇಮಕಾತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಸೆಪ್ಟೆಂಬರ್ 03, 2025
ಪರೀಕ್ಷಾ ದಿನಾಂಕ – ಸೆಪ್ಟೆಂಬರ್ 21, 2025
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಯಾವುದೇ ವಿಭಾಗದಲ್ಲಿ ಪದವಿ ಪೂರ್ಣಗೊಳಿಸಿರಬೇಕು/ಎಐಸಿಟಿಇ(AICTE) ಅನುಮೋದಿಸಿದ ಸಮಾನ ಅರ್ಹತೆಯನ್ನು ಹೊಂದಿರಬೇಕು.
ಅಥವಾ
ಹತ್ತನೇ ತರಗತಿ, ಹನ್ನೆರಡನೇ ತರಗತಿ / ಡಿಪ್ಲೊಮಾ ಮತ್ತು ಪದವಿಯಲ್ಲಿ ಕನಿಷ್ಠ 50% ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಹೊಂದಿರಬೇಕು.
ವಯೋಮಿತಿ:
ಗರಿಷ್ಠ ವಯಸ್ಸಿನ ಮಿತಿ – 27 ವರ್ಷಗಳು, ಅಭ್ಯರ್ಥಿಗಳು (01-08-1998) ರಂದು ಅಥವಾ ನಂತರ ಜನಿಸಿರಬೇಕು.
ಚಾಲನಾ ಪರವಾನಗಿ:
01-08-2025ರಂತೆ; ಅಭ್ಯರ್ಥಿಗಳು ತಮ್ಮ ಹೆಸರಿನಲ್ಲಿ ನೀಡಲಾದ ಮಾನ್ಯ ಭಾರತೀಯ (ದ್ವಿಚಕ್ರ ವಾಹನ ಅಥವಾ ನಾಲ್ಕು ಚಕ್ರ ವಾಹನ) ಚಾಲನಾ ಪರವಾನಗಿಯನ್ನು ಹೊಂದಿರಬೇಕು.
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಆನ್ಲೈನ್ ಆಪ್ಟಿಟ್ಯೂಡ್ ಪರೀಕ್ಷೆ, ವೈಯಕ್ತಿಕ ಸಂದರ್ಶನ, ದಾಖಲಾತಿ ಪರಿಶೀಲನೆ ಹಾಗೂ ಇತರೆ ಆಯ್ಕೆ ವಿಧಾನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಅಭ್ಯರ್ಥಿಗಳ ಗಮನಕ್ಕೆ:
ಗುಜರಾತ್, ತೆಲಂಗಾಣ, ಪಶ್ಚಿಮ ಬಂಗಾಳ ಅಥವಾ ದೆಹಲಿ NCR ನಲ್ಲಿರುವ ಅಭ್ಯರ್ಥಿಗಳು ಮಾತ್ರ ಆಯ್ಕೆ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ದೆಹಲಿ NCR ಅಡಿಯಲ್ಲಿ ಜಿಲ್ಲೆಗಳಲ್ಲಿ ಎಲ್ಲಿಯಾದರೂ ನೆಲೆಸಿರುವ ಅಭ್ಯರ್ಥಿಗಳು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು.
ಸಂಬಳ:
ಉದ್ಯೋಗಿಯ ಕಾರ್ಯಕ್ಷಮತೆ, ನಿಯೋಜನೆಯ ಸ್ಥಳ ಮತ್ತು ಇತರ ಅಂಶಗಳನ್ನು ಅವಲಂಬಿಸಿ ವಾರ್ಷಿಕ ಸಿಟಿಸಿ ಕನಿಷ್ಠ 4.59ಲಕ್ಷರೂ.ಗಳಿಂದ ಗರಿಷ್ಠ 6.19 ಲಕ್ಷರೂ.ವರೆಗೆ ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಎಲ್ಲಾ ಅಭ್ಯರ್ಥಿಗಳಿಗೂ – 350ರೂ.
How to Apply for Federal Bank Associate Officer Recruitment 2025?
ಅರ್ಜಿ ಸಲ್ಲಿಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ;
ಮೊದಲಿಗೆ ಫೆಡರಲ್ ಬ್ಯಾಂಕ್ ನ ಅಧಿಕೃತ https://talentconnect.zappyhire.com/job-description?id=2742 ಜಾಲತಾಣಕ್ಕೆ ಭೇಟಿ ನೀಡಿ.
ನಂತರ ಅನ್ವಯಿಸು ಲಿಂಕ್ ಮೇಲೆ ಕ್ಲಿಕ್ ಮಾಡಿ.
ಇ-ಮೇಲ್ ಐಡಿ ಹಾಗೂ ಮೊಬೈಲ್ ಸಂಖ್ಯೆ ನಮೂದಿಸಿ ನೋಂದಾಯಿಸಿ.
ಅರ್ಜಿಯಲ್ಲಿ ಕೇಳಲಾಗುವ ವಿವರ ನಮೂದಿಸಿ ಹಾಗೂ ಭಾವಚಿತ್ರ, ಸಹಿ ಹಾಗೂ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
ನಂತರ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಪಾವತಿ ಮಾಡಿ.
please jod