ಕೆಪಿಟಿಸಿಎಲ್‌ – ಅಂತಿಮ ಆಯ್ಕೆ ಪಟ್ಟಿ ಪ್ರಕಟ

Published on:

ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ(ಕವಿಪ್ರನಿನಿ)ದ ಮಿಕ್ಕುಳಿದ ವೃಂದ(ಎನ್‌.ಕೆ.ಕೆ)ದ ಕಿರಿಯ ಪವರ್‌ಮ್ಯಾನ್‌ ಮತ್ತು ಕಿರಿಯ ಸ್ಟೇಷನ್‌ ಪರಿಚಾರಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ಸೋಮವಾರ(ಆ.25) ಬಿಡುಗಡೆ ಮಾಡಲಾಗಿದೆ ಎಂದು ನಿಗಮದ ನಿರ್ದೇಶಕರು(ಆಡಳಿತ ಮತ್ತು ಮಾನವ ಸಂಪನ್ಮೂಲ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಹನಾ ಶಕ್ತಿ ಪರೀಕ್ಷೆಯಲ್ಲಿ ಅರ್ಹರಾದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಆ.6 ರಂದು ಪ್ರಕಟಿಸಿ, ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಲಾಗಿತ್ತು. ಈ ಅವಧಿಯಲ್ಲಿ ಸ್ವೀಕರಿಸಲಾದ ಆಕ್ಷೇಪಣೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ಅಂತಿಮ ಆಯ್ಕೆ ಪಟ್ಟಿಯನ್ನು ಕಟ್‌-ಆಪ್‌ ಅಂಕಗಳೊಂದಿಗೆ ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ಕವಿಪ್ರನಿನಿ ಜಾಲತಾಣ https://kptcl.karnataka.gov.in/Recruitmentದ ಮೂಲಕ ಪರಿಶೀಲನೆ ಮಾಡಬಹುದಾಗಿದೆ ಎಂದು ಕೋರಿದ್ದಾರೆ.

How to Download KPTCL JPM JSA (NKK) Final Selection List 2025

ಕೆಪಿಟಿಸಿಎಲ್‌ ಕಿರಿಯ ಪವರ್‌ಮ್ಯಾನ್‌, ಸ್ಟೇಷನ್‌ ಪರಿಚಾರಕ ಅಂತಿಮ ಆಯ್ಕೆ ಪಟ್ಟಿ ಡೌನ್ಲೋಡ್‌ ಮಾಡುವ ವಿಧಾನ ಇಂತಿದೆ;

  • ಹಂತ 1→ ಕವಿಪ್ರನಿನಿದ ಜಾಲತಾಣ https://kptcl.karnataka.gov.inಕ್ಕೆ ಭೇಟಿ ನೀಡಿ
  • ಹಂತ 2→ ನಂತರ “ನೇಮಕಾತಿ” ವಿಭಾಗದ ಮೇಲೆ ಕ್ಲಿಕ್ ಮಾಡಿ
  • ಹಂತ 3→ “ನೇಮಕಾತಿ-2024” -> ವೀಕ್ಷಿಸಿ/ಡೌನಲೋಡ್ ಮೇಲೆ ಕ್ಲಿಕ್ ಮಾಡಿ, ವಿಭಾಗದಲ್ಲಿ ನೀಡಲಾಗಿರುವ ‘2) ಕಿರಿಯ ಸ್ಟೇಷನ್ ಪರಿಚಾರಕ (ಎನ್.ಕೆ.ಕೆ) ಹುದ್ದೆಯ ಕಟ್‌-ಅಫ್‌ ಅಂಕಗಳ ಪಟ್ಟಿ ಮತ್ತು ಅಂತಿಮ ಆಯ್ಕೆ ಪಟ್ಟಿ.ʼ ಅಥವಾ ‘3) ಕಿರಿಯ ಪವರ್‌ಮ್ಯಾನ್ (ಎನ್.ಕೆ.ಕೆ.) ಹುದ್ದೆಯ ಕಟ್‌-ಅಫ್‌ ಅಂಕಗಳ ಪಟ್ಟಿ ಮತ್ತು ಅಂತಿಮ ಆಯ್ಕೆ ಪಟ್ಟಿʼ ಲಿಂಕ್‌ ಮೇಲೆ ಕ್ಲಿಕ್‌ ಮಾಡುವ ಮೂಲಕ ಆಯ್ಕೆ ಪಟ್ಟಿ ಡೌನ್ಲೋಡ್ ಮಾಡಿಕೊಳ್ಳಬಹುದು.

Important Direct Links:

KPTCL JSA, JPM (NKK) Final Selection List Notice PDF(Dated on 25/08/2025)Download
KPTCL JSA(NKK) Final Selection List 2025 PDFDownload
KPTCL JPM(NKK) Final Selection List 2025 PDFDownload
Official Websitekptcl.karnataka.gov.in
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳ ಅನುಭವ.

7 thoughts on “ಕೆಪಿಟಿಸಿಎಲ್‌ – ಅಂತಿಮ ಆಯ್ಕೆ ಪಟ್ಟಿ ಪ್ರಕಟ”

Leave a Comment