PM Usha Scholarship 2024-2025 ಸಾಲಿನ ದ್ವಿತೀಯ ಪಿಯುಸಿ ಶೇ.80ಕ್ಕಿಂತ ಹೆಚ್ಚಿನ ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ಪಿಎಂ ಉಷಾ ಯೋಜನೆ(Pradhan Mantri Uchchatar Shiksha Abhiyan)ಯ ಅಡಿಯಲ್ಲಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆಯ ಅಡಿಯಲ್ಲಿ ದ್ವಿತೀಯ ಪಿಯುಸಿ ಶೇ.80ಕ್ಕಿಂತ ಹೆಚ್ಚಿನ ಅಂಕ ಪಡೆದಿರುವ ಮತ್ತು ಮೂರು ವರ್ಷಗಳ ಪದವಿ ವ್ಯಾಸಂಗ ಮಾಡಲಿಚ್ಚಿಸುವ ವಿದ್ಯಾರ್ಥಿಗಳಿಂದ ಕೇಂದ್ರದ ಉನ್ನತ ಶಿಕ್ಷಣ ಇಲಾಖೆಯು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಪಿ.ಎಂ ಉಷಾ ಯೋಜನೆಯ ಹೆಸರಿನಲ್ಲಿ ಕೇಂದ್ರ ಅಧಿಕೃತ ವೆಬ್ ಸೈಟ್ ನ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಪ್ರೆಸ್ ಬ್ಯಾಚ್ ಮತ್ತು ನವಿಕೃತ ಬ್ಯಾಚ್ ನ ಅರ್ಜಿಗಳನ್ನು ಅಕ್ಟೋಬರ್ 31ರ ಒಳಗೆ ಸಲ್ಲಿಸಬಹುದಾಗಿದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮೊದಲ ಮೂರು ವರ್ಷ ತಲಾ 12 ಸಾವಿರ ರೂ. ಮತ್ತು ಕೊನೆಯ ಎರಡು ವರ್ಷ ತಲಾ 20 ಸಾವಿರ ರೂ ನೀಡಲಾಗುತ್ತದೆ.