ರಾಯಚೂರು ಮತ್ತು ಕೊಪ್ಪಳ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಯಮಿತ(RDCCB)ವು ಕಲ್ಯಾಣ ಕರ್ನಾಟಕ ವೃಂದ ಮತ್ತು ಉಳಿಕೆ ಮೂಲ ವೃಂದದ ಗ್ರೂಪ್-ಎ, ಗ್ರೂಪ್-ಬಿ, ಗ್ರೂಪ್-ಸಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ.
ಕೆಕೆ ವೃಂದದಲ್ಲಿ 53 ಹುದ್ದೆಗಳು ಹಾಗೂ 17 ನಾನ್-ಕೆಕೆ ವೃಂದದಲ್ಲಿ ಶಾಖಾ ವ್ಯವಸ್ಥಾಪಕರು ಗ್ರೇಡ-1, ಸಹಾಯಕರ ಗ್ರೇಡ-1, ಅಟೆಂಡರ್ ಹುದ್ದೆಗಳ ನೇಮಕಾತಿ ನಡೆಯಲಿದೆ. ಪಿಯುಸಿ, ಯಾವುದೇ ವಿಷಯದಲ್ಲಿ ಪದವಿ ಪಡೆದಿರುವವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ನ.21 ರಿಂದ ಡಿ.22ರವರೆಗೆ ಅವಕಾಶವಿದ್ದು, ಬ್ಯಾಂಕಿನ ಅಧಿಕೃತ ಲಿಂಕ್ https://tascguru.com/raichur-dcc-bank/ನ ಮೂಲಕ ಆನ್ಲೈನ್ನಲ್ಲಿಯೇ ಸಲ್ಲಿಸಬೇಕು ಎಂದು ಡಿಸಿಸಿ ಬ್ಯಾಂಕ್ ಹೊರಡಿಸಿದ ನೇಮಕಾತಿ ಅಧಿಸೂಚನೆ ತಿಳಿಸಿದೆ.
ಸ್ಪರ್ಧಾತ್ಮಕ ಪರೀಕ್ಷಾ ದಿನಾಂಕ (ತಾತ್ಕಾಲಿಕ) – ಜನೆವರಿ 15, 2026
ಶೈಕ್ಷಣಿಕ ಅರ್ಹತೆ:
ಶಾಖಾ ವ್ಯವಸ್ಥಾಪಕರು ಗ್ರೇಡ-1, ಸಹಾಯಕರ ಗ್ರೇಡ-1 ಹುದ್ದೆಗೆ; ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಹರು.
ಅಟೆಂಡರ್ ಹುದ್ದೆಗೆ; ಪಿಯುಸಿ
*ಜೊತೆಗೆ ಕಂಪ್ಯೂಟರ್ ಜ್ಞಾನ ಮತ್ತು ಕನ್ನಡ ಓದಲು, ಬರೆಯಲು ತಿಳಿದಿರಬೇಕು.
ವಯೋಮಿತಿ:
ಕನಿಷ್ಠ ವಯಸ್ಸಿನ ಮಿತಿ – 18 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ ವಿವರ;
ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ – 38 ವರ್ಷಗಳು
ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ – 41 ವರ್ಷಗಳು
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ /ಪ್ರವರ್ಗ-1 ಅಭ್ಯರ್ಥಿಗಳಿಗೆ – 43 ವರ್ಷಗಳು
ಸರ್ಕಾರದ ಆದೇಶದಂತೆ ವರ್ಗವಾರು ವಯೋಮಿತಿ ಸಡಿಲಿಕೆ ನೀಡಲಾಗಿದೆ.
ಆಯ್ಕೆ ಪ್ರಕ್ರಿಯೆ:
ಸ್ಪರ್ಧಾತ್ಮಕ ಪರೀಕ್ಷೆ
ಸಂದರ್ಶನ
ಸಂಬಳ:
ಶಾಖಾ ವ್ಯವಸ್ಥಾಪಕರು ಗ್ರೇಡ-1 ಹುದ್ದೆಗೆ – ವೇತನ ಶ್ರೇಣಿ: ರೂ.61300-1500–64300–1650–74200–1900–85600–2300–99400–2700-112900
ಸಹಾಯಕರ ಗ್ರೇಡ-1 ಹುದ್ದೆಗೆ – ವೇತನ ಶ್ರೇಣಿ: ರೂ.44425–1125–47800–1250–52800–1375–58300–1500–64300–1650-74200-1900–83700
ಅಟೆಂಡರ್ ಹುದ್ದೆಗೆ – ವೇತನ ಶ್ರೇಣಿ: ರೂ.37500–900–39300–1000–43300–1125–47800–1250–52800–1375–58300-1500-64300-1650–74200–1900–76100
ಅರ್ಜಿ ಶುಲ್ಕ:
ಪ.ಜಾತಿ, ಪ.ಪಂಗಡ ಪ್ರವರ್ಗ-1, ಮಾಜಿ ಸೈನಿಕರಿಗೆ, ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ – ಶಾಖಾ ವ್ಯವಸ್ಥಾಪಕ ಮತ್ತು ಸಹಾಯಕರ ಗ್ರೇಡ-1 ಹುದ್ದೆಗೆ – ರೂ.800 (ಅಟೆಂಡರ್ ಹುದ್ದೆಗೆ-ರೂ.500)
ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ – ಶಾಖಾ ವ್ಯವಸ್ಥಾಪಕ ಮತ್ತು ಸಹಾಯಕರ ಗ್ರೇಡ-1 ಹುದ್ದೆಗೆ – ರೂ.1600 (ಅಟೆಂಡರ್ ಹುದ್ದೆಗೆ- ರೂ.1000)
ಅರ್ಜಿ ಸಲ್ಲಿಕೆ ಹೀಗೆ…
ಬ್ಯಾಂಕಿನ ಅಧಿಕೃತ ಲಿಂಕ್ https://tascguru.com/raichur-dcc-bank/ಗೆ ಭೇಟಿ ನೀಡಿ
ಅಲ್ಲಿ ಹುದ್ದೆಗಳ ಹೆಸರು ಪರದೆ ಮಾಡಲಾಗಿದ್ದು, ಅರ್ಜಿ ಸಲ್ಲಿಸ ಬಯಸುವ ಹುದ್ದೆಯ ಮುಂದೆ ಬಲಭಾಗದಲ್ಲಿ “Action” ಶಿರ್ಷೀಕೆಯಡಿ ನೀಡಲಾದ “Apply Now” ಗುಂಡಿ ಮೇಲೆ ಒತ್ತಿ, ಅಲ್ಲಿ ನಿಮ್ಮ ಮೊಬೈಲ್ ನಂಬರ್ ಹಾಗೂ ನೀವು ಅರ್ಜಿ ಸಲ್ಲಿಸಬಯಸುವ ವೃಂದವನ್ನು ಆಯ್ಕೆ ಮಾಡಿಕೊಂಡು ನೋಂದಣಿಯಾಗಿರಿ.
ಮುಂದೆ ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಅರ್ಜಿ ಸಲ್ಲಿಸಬಹುದು;
ಹಂತ 1.Application ಹಂತ 2. Preview ಹಂತ 3. Payment ಹಂತ 4. Download