ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಆಸಕ್ತರು ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಸಲ್ಲಿಸಬಹುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ತಿಳಿಸಿದೆ.
ಪಡಿತರ ಚೀಟಿಯಲ್ಲಿನ ಬದಲಾವಣೆ ಅಥವಾ ತಿದ್ದುಪಡಿಗಳನ್ನು ಮಾಡಲು ದೀರ್ಘಕಾಲದಿಂದ ಅನೇಕ ಕುಟುಂಬಗಳು ಕಾಯುತ್ತಿದ್ದವು. ಇದೀಗ ಸರ್ಕಾರವು ಜುಲೈ 31ರವರೆಗೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಕಾಲಾವಕಾಶವನ್ನು ನೀಡಲಾಗಿದ್ದು, ಆಸಕ್ತರು ಆನ್ ಲೈನ್ ಮೂಲಕ ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಸಲ್ಲಿಸಬಹುದು. ಈ ಲೇಖನದಲ್ಲಿ ಸದರಿ ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು ಅರ್ಜಿ ಸಲ್ಲಿಸುವ ವಿಧಾನ, ಅಗತ್ಯ ದಾಖಲೆಗಳು ಹಾಗೂ ಇತರೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ ತಪ್ಪದೇ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.
ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಕೆ ಆರಂಭದ ದಿನಾಂಕ – ಅರ್ಜಿ ಸಲ್ಲಿಕೆ ಈಗಾಗಲೇ ಪ್ರಾರಂಭವಾಗಿದೆ.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಜುಲೈ 31, 2025
ಪಡಿತರ ಚೀಟಿಯಲ್ಲಿ ತಿದ್ದುಪಡಿ ಮಾಡಬಹುದಾದ ಅಂಶಗಳು
- ಸದಸ್ಯರ ಸೇರ್ಪಡೆ:- ಪಡಿತರ ಚೀಟಿಯಲ್ಲಿ ಕುಟುಂಬದ ಹೊಸ ಸದಸ್ಯರನ್ನು ಸೇರ್ಪಡೆ ಮಾಡಿಸಬಹುದು.
- ಹೆಸರು ಡಿಲೀಟ್:- ಪಡಿತರ ಚೀಟಿಯಲ್ಲಿ ಕುಟುಂಬದಲ್ಲಿನ (ಮೃತ ಅಥವಾ ಬೇರ್ಪಟ್ಟ)
ಸದಸ್ಯರ ಹೆಸರನ್ನು ಡಿಲೀಟ್ ಮಾಡಲು ಅವಕಾಶ ಕಲ್ಪಿಸಲಾಗಿದೆ. - ಹೆಸರು ತಿದ್ದುಪಡಿ:- ಪಡಿತರ ಚೀಟಿಯಲ್ಲಿ ಕುಟುಂಬದಲ್ಲಿನ ಸದಸ್ಯರ ಹೆಸರು ತಪ್ಪಾಗಿದ್ದಲ್ಲಿ ಹೆಸರನ್ನು ತಿದ್ದುಪಡಿ ಮಾಡಿಸಬಹುದು.
- ಪೋಟೋ ಬದಲಾವಣೆ:- ಪಡಿತರ ಚೀಟಿಯಲ್ಲಿನ ಕುಟುಂಬದ ಸದಸ್ಯರ ಭಾವಚಿತ್ರ (ಪೋಟೋ) ವನ್ನು ಸಹ ಬದಲಾವಣೆ ಮಾಡಲು ಅವಕಾಶ ಕಲ್ಪಿಸಲಾಗಿದೆ.
- ಅಂಗಡಿ. ನಂ. ಬದಲಾವಣೆ:- ರೇಷನ್ ಕಾರ್ಡ್ ಹೊಂದಿರುವ ಕುಟುಂಬವು ಪ್ರತಿ ತಿಂಗಳು ಪಡಿತರ (ರೇಷನ್) ಅನ್ನು ನೀಡುವ ಅಂಗಡಿಯನ್ನು (ಅಂಗಡಿ. ನಂ.) ಬದಲಾವಣೆ ಮಾಡಬಹುದು.
- ಮುಖ್ಯಸ್ಥರ ಬದಲಾವಣೆ:- ಪಡಿತರ ಚೀಟಿಯಲ್ಲಿನ ಮುಖ್ಯಸ್ಥರ (ಮುಖ್ಯ ಸದಸ್ಯರ) ಅವರ ಅನುಪಸ್ಥಿತಿಯ ಮೇರೆಗೆ ಮುಖ್ಯಸ್ಥರ ಬದಲಾವಣೆ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು:
- ಕುಟುಂಬ ಸದಸ್ಯರ ಆಧಾರ್ ಕಾರ್ಡ್
- ಕುಟುಂಬದ ಸದಸ್ಯರ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ
- ಪಡಿತರ ಚೀಟಿಯಿಂದ ಸದಸ್ಯ ಬೇರ್ಪಟಲ್ಲಿ (ಮದುವೆಯ ಆಮಂತ್ರಣ ಪತ್ರ) ಅಥವಾ ಮರಣ ಹೊಂದಿದಲ್ಲಿ (ಮರಣ ಪ್ರಮಾಣ ಪತ್ರ)
- ಜನನ ಪ್ರಮಾಣ ಪತ್ರ (6 ವರ್ಷದೊಳಗಿನ ಮಕ್ಕಳ ಸೇರ್ಪಡೆಗೆ)
ಅರ್ಜಿ ಸಲ್ಲಿಸುವ ವಿಧಾನ:
ಪಡಿತರ ಚೀಟಿಯ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರದ ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಕೇಂದ್ರಕ್ಕೆ ಭೇಟಿ ನೀಡಿ.
ಮತ್ತಷ್ಟು ಸುದ್ದಿಗಳಿಗಾಗಿ KarnatakaHelp.inಗೆ ಭೇಟಿ ನೀಡಿ