ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ಗ್ರೇಡ್ B ಅಧಿಕಾರಿ ಹುದ್ದೆಗಳಿಗೆ (RBI Grade B Officer Notification 2024 ) 2024 ನೇ ಸಾಲಿನ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು.
ಈ ಅಧಿಸೂಚನೆಯ ಪ್ರಕಾರ, RBI ಬ್ಯಾಂಕ್ ತನ್ನ ಸಾಮಾನ್ಯ, DEPR, ಮತ್ತು DSIM ವಿಭಾಗಗಳಿಗೆ ಒಟ್ಟು 94 ಹುದ್ದೆಗಳಿಗೆ ನೇಮಕಾತಿ ಮಾಡಲಿದೆ. ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿಯನ್ನು ಸಲ್ಲಿಸಲು RBI ನ ಅಧಿಕೃತ ವೆಬ್ ಸೈಟಿಗೆ rbi.org.in ಭೇಟಿ ನೀಡುವ ಮೂಲಕ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು. ಈ ಲೇಖನದಲ್ಲಿ RBI ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡಲಾಗಿದ್ದು ಗಮನವಿಟ್ಟು ಓದಿರಿ.
Rbi Grade B Officer Notification 2024 Shortview of RBI Grade B Officer Notification 2024 Organization Name – Reserve Bank of India (RBI) Post Name – RBI Grade B Officer Total Vacancy – 94 Application Process: online Job Location – India
ಮುಖ್ಯ ದಿನಾಂಕಗಳು: ಅಧಿಸೂಚನೆ ಬಿಡುಗಡೆಯ ದಿನಾಂಕ: ಜುಲೈ 19, 2024 ಆನ್‌ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಜುಲೈ 25, 2024 ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್ 16, 2024 ಪ್ರೀಲಿಮ್ಸ್ ಪರೀಕ್ಷೆಯ ದಿನಾಂಕ: ಸೆಪ್ಟೆಂಬರ್ 8 ಮತ್ತು 14, 2024 ಮೇನ್ಸ್ ಪರೀಕ್ಷೆಯ ದಿನಾಂಕ: ಅಕ್ಟೋಬರ್ 19 ಮತ್ತು 26, 2024 ಶೈಕ್ಷಣಿಕ ಅರ್ಹತೆ: ಗ್ರೇಡ್-ಬಿ (DR) (ಸಾಮಾನ್ಯ) ಹುದ್ದೆಗಳಿಗೆ : ಯಾವುದೇ ಸ್ಟ್ರೀಮ್‌ನಲ್ಲಿ 50% ಅಂಕಗಳೊಂದಿಗೆ ಪದವಿ ಪಡೆದುಕೊಂಡಿರಬೇಕು.ಗ್ರೇಡ್-ಬಿ (DEPR) ಹುದ್ದೆಗಳಿಗೆ : ಅರ್ಥಶಾಸ್ತ್ರ/ PGDM/ MBA ಫೈನಾನ್ಸ್‌ನಲ್ಲಿ ಸ್ನಾತಕೋತ್ತರ ಪದವಿ (PG) ಪಡೆದುಕೊಂಡಿರಬೇಕು.ಗ್ರೇಡ್-ಬಿ (DSIM) ಹುದ್ದೆಗಳಿಗೆ : ಗಣಿತ/ ಅಂಕಿಅಂಶಗಳಲ್ಲಿ ಸ್ನಾತಕೋತ್ತರ (PG) ಪಡೆದುಕೊಂಡಿರಬೇಕು.ವಯೋಮಿತಿ: ಅರ್ಜಿದಾರರ ವಯಸ್ಸು 01 ಜನವರಿ 2024 ರಂತೆ 21 ರಿಂದ 30 ವರ್ಷಗಳ ಮಧ್ಯೆ ಇರಬೇಕು.
ಅರ್ಜಿ ಶುಲ್ಕ: ಅರ್ಜಿ ಶುಲ್ಕ- ಸಾಮಾನ್ಯ/ಒಬಿಸಿ ವರ್ಗಗಳ ಅಭ್ಯರ್ಥಿಗಳಗೆ – ₹850/- + 18% GST, SC/ST/PWD ಅಭ್ಯರ್ಥಿಗಳಗೆ – ₹100/- + 18% GST. ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಎರಡು ಹಂತದ ಆನ್ ಲೈನ್ ಪರೀಕ್ಷೆಗಳು ಮತ್ತು ಒಂದು ಸಂದರ್ಶನ ದ ಮೂಲಕ ಆಯ್ಕೆ ಮಾಡಲಾಗುತ್ತದೆ. ಪ್ರೀಲಿಮ್ಸ್ ಪರೀಕ್ಷೆ ವಸ್ತುನಿಷ್ಠ ಬಹು ಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.ಮೇನ್ಸ್ ಪರೀಕ್ಷೆ ವಸ್ತುನಿಷ್ಠ ಮತ್ತು ವಿವರಣಾತ್ಮಕ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.Also Read: IOCL Non-Executive Recruitment 2024: 10th, ಪದವಿ ಪಡೆದವರಿಗೆ INDIAN OIL ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
How to Apply for RBI Grade B Officer Recruitment-2024 RBI ಯ ಅಧಿಕೃತ ವೆಬ್‌ಸೈಟ್ https://opportunities.rbi.org.in/Scripts/Vacancies.aspx ಗೆ ಭೇಟಿ ನೀಡಿ. “Current Vacancies” ಟ್ಯಾಬ್ ಕ್ಲಿಕ್ ಮಾಡಿ ಮತ್ತು “Vacancies” ಆಯ್ಕೆಮಾಡಿ. “Direct Recruitment for the post of Officers in Grade ‘B’ (Direct Recruit-DR) (General/DEPR/DSIM) Streams- Panel Year 2024” ಗೆ ಹೋಗಿ. “Online Application” ಲಿಂಕ್ ಕ್ಲಿಕ್ ಮಾಡಿ. ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಿ ಮತ್ತು ನಿಮ್ಮ ಅಗತ್ಯವಿರುವ ಮಾಹಿತಿಯನ್ನು ನಮೂದಿಸಿ. ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ. ಅರ್ಜಿ ಶುಲ್ಕವನ್ನು ಪಾವತಿಸಿ. ನಿಮ್ಮ ಅರ್ಜಿಯನ್ನು ಸಲ್ಲಿಸಿ ಮತ್ತು ಒಂದು ಪ್ರತಿಯನ್ನು ಮುದ್ರಿಸಿ. ಹೆಚ್ಚಿನ ಮಾಹಿತಿಗಾಗಿ:
ಅಭ್ಯರ್ಥಿಗಳು RBI ಯ ಅಧಿಕೃತ ವೆಬ್‌ಸೈಟ್ rbi.org.in ಅನ್ನು ಭೇಟಿ ಮಾಡಬಹುದು ಅಥವಾ 022-2223 2929 ಗೆ ಕರೆ ಮಾಡಬಹುದು. Important Direct Links: