ರಾಷ್ಟ್ರೀಯ ರಾಸಾಯನಿಕಗಳು ಮತ್ತು ರಸಗೊಬ್ಬರಗಳು ಲಿಮಿಟೆಡ್ (RCF) ಕಂಪನಿಯು ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ.
ವಿವಿಧ ವಿಭಾಗಗಳಲ್ಲಿ ಪ್ರಸ್ತುತ ಖಾಲಿ ಇರುವ ಖಾತೆಗಳ ಕಾರ್ಯನಿರ್ವಾಹಕ, ಕಾರ್ಯದರ್ಶಿ ಸಹಾಯಕ, ನೇಮಕಾತಿ ಕಾರ್ಯನಿರ್ವಾಹಕ (HR) ಹಾಗೂ ತಂತ್ರಜ್ಞ ಅಪ್ರೆಂಟಿಸ್ ಸೇರಿದಂತೆ ಇತರೆ ಒಟ್ಟು 350 ಅಪ್ರೆಂಟಿಸ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸ ಬಯಸುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಸೆ.12 ರೊಳಗೆ ಅಧಿಕೃತ ಜಾಲತಾಣ https://rcfltd.com/ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಸೆಪ್ಟೆಂಬರ್ 12, 2025
ಶೈಕ್ಷಣಿಕ ಅರ್ಹತೆ:
✓ ಖಾತೆಗಳ ಕಾರ್ಯನಿರ್ವಾಹಕ ಹುದ್ದೆಗೆ – ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಬಿ.ಕಾಂ, ಬಿಬಿಎ/ಅರ್ಥಶಾಸ್ತ್ರದಲ್ಲಿ ಪದವಿ ಪೂರ್ಣಗೊಳಿಸಿರಬೇಕು. ಜೊತೆಗೆ ಇಂಗ್ಲಿಷ್ ಮತ್ತು ಕಂಪ್ಯೂಟರ್ ಕಾರ್ಯಾಚರಣೆ ಜ್ಞಾನ ಅತ್ಯಗತ್ಯ.
✓ ಕಾರ್ಯದರ್ಶಿ ಸಹಾಯಕ ಹಾಗೂ ನೇಮಕಾತಿ ಕಾರ್ಯನಿರ್ವಾಹಕ (HR) ಹುದ್ದೆಗಳಿಗೆ – ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಯಾವುದೇ ವಿಭಾಗದಲ್ಲಿ ಪದವಿ ಪೂರ್ಣಗೊಳಿಸಿರಬೇಕು ಹಾಗೂ ಇಂಗ್ಲಿಷ್ ಮತ್ತು ಕಂಪ್ಯೂಟರ್ ಕಾರ್ಯಾಚರಣೆ ಜ್ಞಾನ ಅತ್ಯಗತ್ಯ.
✓ ತಂತ್ರಜ್ಞ ಅಪ್ರೆಂಟಿಸ್ ಹುದ್ದೆಗಳಿಗೆ – ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಡಿಪ್ಲೊಮಾದಲ್ಲಿ ಸಂಬಂಧಿಸಿದ ವಿಷಯದಲ್ಲಿ ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿರಬೇಕು.
✓ ಬಾಯ್ಲರ್ ಅಟೆಂಡೆಂಟ್, ಎಲೆಕ್ಟ್ರಿಷಿಯನ್, ತೋಟಗಾರಿಕೆ ಸಹಾಯಕ ಹಾಗೂ ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞ ಹುದ್ದೆಗಳಿಗೆ – ಮಾನ್ಯತೆ ಪಡೆದ ಸಂಸ್ಥೆಯಿಂದ ವಿಜ್ಞಾನ ವಿಷಯದಲ್ಲಿ ದ್ವಿತೀಯ ಪಿಯುಸಿ ಉತ್ತೀರ್ಣ ಅಥವಾ ತತ್ಸಮಾನತೆಯನ್ನು ಹೊಂದಿರಬೇಕು.
✓ ಇನ್ಸ್ಟ್ರುಮೆಂಟಲ್ ಮೆಕ್ಯಾನಿಕ್ ಹಾಗೂ ಪ್ರಯೋಗಾಲಯ ಸಹಾಯಕ (ರಾಸಾಯನಿಕ ಸ್ಥಾವರ) ಹುದ್ದೆಗಳಿಗೆ – ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ (ರಸಾಯನಶಾಸ್ತ್ರ ಪ್ರಮುಖ ವಿಷಯವಾಗಿ) ಬಿ.ಎಸ್ಸಿ ಪದವಿ ಪೂರ್ಣಗೊಳಿಸಿರಬೇಕು.
ವಯೋಮಿತಿ:
01-07-2025 ರಂತೆ;
ಕನಿಷ್ಠ ವಯಸ್ಸಿನ ಮಿತಿ – 18 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ – 25 ವರ್ಷಗಳು
ಸರ್ಕಾರಿ ನಿಯಮಗಳ ಪ್ರಕಾರ ಮೀಸಲಾತಿ ವರ್ಗಗಳಿಗೆ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.
ಆಯ್ಕೆ ಪ್ರಕ್ರಿಯೆ:
ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿ
ದಾಖಲೆ ಪರಿಶೀಲನೆ
ವೈದ್ಯಕೀಯ ಪರೀಕ್ಷೆ
ಶಿಷ್ಯವೇತನ/ತರಬೇತಿ ಭತ್ಯೆ:
ಅಭ್ಯರ್ಥಿಗೆ ಮಾಸಿಕ 7000-9000ರೂ.ವರೆಗೆ ಶಿಷ್ಯವೇತನ/ತರಬೇತಿ ಭತ್ಯೆ ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ
How to Apply for RCFL Apprentice Recruitment 2025
ಅರ್ಜಿ ಸಲ್ಲಿಸುವ ವಿಧಾನ ಹೇಗೆ?;
ಮೊದಲಿಗೆ ರಾಷ್ಟ್ರೀಯ ಕೆಮಿಕಲ್ಸ್ ಅಂಡ್ ಫರ್ಟಿಲೈಜರ್ಸ್ ಲಿಮಿಟೆಡ್ ನ ಅಧಿಕೃತ https://ors.rcfltd.com/3054/Position/APTREC-2025/ORS/ ಜಾಲತಾಣಕ್ಕೆ ಭೇಟಿ ನೀಡಿ.
ನಂತರ ನೀವು ಅರ್ಜಿ ಸಲ್ಲಿಸು ಬಯಸುವ ಹುದ್ದೆಯನ್ನು ಆಯ್ಕೆ ಮಾಡಿ.
ಅರ್ಜಿಯಲ್ಲಿ ಕೇಳಲಾಗುವ ವಿವರ ನಮೂದಿಸಿ ಹಾಗೂ ಭಾವಚಿತ್ರ, ಸಹಿ ಹಾಗೂ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
ಫಾರ್ಮ್ ಅನ್ನು ಒಂದೇ ಪ್ರಯತ್ನದಲ್ಲಿ ಭರ್ತಿ ಮಾಡಿ ಸಲ್ಲಿಸಬೇಕು.
ಭವಿಷ್ಯದ ಉಲ್ಲೇಖಕ್ಕಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.
vikas bijjaragi