ರೈಲ್ವೆ ನೇಮಕಾತಿ ಮಂಡಳಿಯು ಸಿಇಎನ್ ನಂ-08/2024ರಡಿ ಅಧಿಸೂಚಿತ ಗ್ರೂಪ್ ಡಿ ಹುದ್ದೆಗಳ ನೇಮಕಾತಿಗಾಗಿ 2025ರ ನ.27 ರಿಂದ ಫೆ.10ರವರೆಗೆ ನಡೆಸಲಾದ ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಕೀ ಉತ್ತರಗಳನ್ನು ಮಂಗಳವಾರ(ಫೆ.17) ಪ್ರಕಟಿಸಿದೆ.
ಪ್ರಕಟಿತ ಕೀ ಉತ್ತರಗಳ ಮೇಲೆ ಆಕ್ಷೇಪಣೆಗಳಿದ್ದಲ್ಲಿ, ಪ್ರತಿ ಪ್ರಶ್ನೆಗೆ ₹50ರಂತೆ ಬ್ಯಾಂಕ್ ಶುಲ್ಕ ಪಾವತಿಸಿ ಫೆ.23ರೊಳಗೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಅಭ್ಯರ್ಥಿಗಳು ಕೀ ಉತ್ತರಗಳನ್ನು ವೀಕ್ಷಿಸಲು, ಆಕ್ಷೇಪಣೆ ಸಲ್ಲಿಸಲು ಆರ್‌ಆರ್‌ಬಿಯ ಅಧಿಕೃತ ಜಾಲತಾಣದ ಲಿಂಕ್ https://rrb.digialm.com/EForms/configuredHtml/33015/96410/login.htmlಗೆ ಭೇಟಿ ನೀಡಿ.



