RRB ಗ್ರೂಪ್‌-ಡಿ ಪರೀಕ್ಷೆ 2025ರ ಪರೀಕ್ಷಾ ನಗರ, ದಿನಾಂಕ ಹಾಗೂ ಶಿಫ್ಟ್‌ಗಳ ವಿವರ ಬಿಡುಗಡೆ

Published on:

ಫಾಲೋ ಮಾಡಿ
RRB Group D Exam City Intimation Slip 2025
RRB Group D Exam City Intimation Slip 2025

ರೈಲ್ವೆ ನೇಮಕಾತಿ ಮಂಡಳಿಯು CEN NO: 08/2024ರ ಅಡಿಯಲ್ಲಿ ಅಧಿಸೂಚಿಸಲಾದ ಗ್ರೂಪ್ ಡಿ ಹುದ್ದೆಗಳ ನೇಮಕಾತಿ ಸಂಬಂಧ ಮೊದಲನೇ ಹಂತದಲ್ಲಿ ನಡೆಸಲಾಗುವ ಕಂಪ್ಯೂಟರ್ ಆಧಾರಿತ ಪರೀಕ್ಷೆಯ (CBT) ಅಂತಿಮ ವೇಳಾಪಟ್ಟಿ ಹಾಗೂ ಸಿಟಿ ಇಂಟಿಮೇಶನ್ ಸ್ಲಿಪ್ ಅನ್ನು ಬುಧವಾರ (ನ.18)ರಂದು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ.

ಜನವರಿ 22ರಂದು ಒಟ್ಟು 32,438 ಗ್ರೂಪ್ ಡಿ (7ನೇ ಸಿಪಿಸಿ ಪೇ ಮ್ಯಾಟ್ರಿಕ್ಸ್‌ನ ಹಂತ 1ರ) ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚಿಸಲಾಗಿತ್ತು. ಮೊದಲ ಹಂತ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)ಯನ್ನು 2025ರ ನವೆಂಬರ್ 27ರಿಂದ 2026ರ ಜನವರಿ 16ರವರೆಗೆ ಭಾರತದಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಪರೀಕ್ಷಾ ನಗರ, ದಿನಾಂಕ ಹಾಗೂ ಶಿಫ್ಟ್‌ಗಳ ಮಾಹಿತಿಯನ್ನು ಪರಿಶೀಲಿಸಲು ನ.19ರಿಂದ ಅವಕಾಶ ನೀಡಲಾಗಿದೆ.

About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment