ರೈಲ್ವೆ ನೇಮಕಾತಿ ಮಂಡಳಿಯು ಸಿಇಎನ್ 05/2025ರಡಿ ಅಧಿಸೂಚಿಸಲಾದ ಜೂನಿಯರ್ ಎಂಜಿನಿಯರ್, ಡಿಪೋ ಮೆಟೀರಿಯಲ್ ಸೂಪರಿಂಟೆಂಡೆಂಟ್ ಮತ್ತು ಕೆಮಿಕಲ್ & ಮೆಟಲರ್ಜಿಕಲ್ ಸಹಾಯಕ ಹಂತದ ವಿವಿಧ ಹುದ್ದೆಗಳ ನೇಮಕಾತಿಗಾಗಿ ಫೆಬ್ರವರಿ 19, 20 ಹಾಗೂ 25ರಂದು ನಡೆಸಲಾದ ಕಂಪ್ಯೂಟರ್ ಆಧಾರಿತ ಪರೀಕ್ಷೆ-Iರ ಕೀ ಉತ್ತರವನ್ನು ಅಧಿಕೃತವಾಗಿ ಗುರುವಾರ(ಮಾ.05) ಪ್ರಕಟಿಸಿದೆ.
ಕೀ ಉತ್ತರವನ್ನು RRB ಅಧಿಕೃತ ಜಾಲತಾಣ ಆಯಾ ಪ್ರಾದೇಶಿಕ ವೆಬ್‌ಸೈಟ್ https://indianrailways.gov.in/railwayboard/view_section.jsp?lang=0&id=0,7,1281ನಲ್ಲಿ ಅಥವಾ ನೇರವಾಗಿ https://rrb.digialm.com//EForms/configuredHtml/33128/97996/login.htmlಲಿಂಕ್ ನ ಮೂಲಕವೂ ಪರಿಶೀಲನೆ ಮಾಡಬಹುದು. ಆಕ್ಷೇಪಣೆ ಸಲ್ಲಿಸಲು ಇಚ್ಛಿಸುವವರು ಮಾ.11ರೊಳಗೆ ಪತ್ರಿ ಪ್ರಶ್ನೆಗೆ ₹50ರಂತೆ ಜತೆಗೆ ಬ್ಯಾಂಕಿನ ಸೇವಾಶುಲ್ಕವನ್ನು ಪಾವತಿಸುವ ಮೂಲಕ ಸಲ್ಲಿಕೆ ಮಾಡಬಹುದು.
• RRB ಅಧಿಕೃತ ಜಾಲತಾಣ https://indianrailways.gov.in/railwayboard/view_section.jsp?lang=0&id=0,7,1281 ಕ್ಕೆ ಭೇಟಿ ನೀಡಿ.
• ನಿಮ್ಮ ಸಂಬಂಧಿತ ಅಥವಾ ನೀವು ಅರ್ಜಿ ಸಲ್ಲಿಸಿದ ಆರ್ಆರ್ಬಿ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ.
• “Link for Viewing of CBT-I (held on 19-02-2026, 20-02-2026 & 25-02-2026) Questions, Responses & Keys and Raising of Objections, if any to Questions/Options/Keys for CEN 05/2025 (JE, DMS, CMA etc.)” ಮೇಲೆ ಟ್ಯಾಪ್ ಮಾಡಿ.
• ನಂತರ ನೋಂದಣಿ ಸಂಖ್ಯೆ ಹಾಗೂ ಜನ್ಮ ದಿನಾಂಕವನ್ನು ನಮೂದಿಸಿ ಲಾಗಿನ್ ಆಗಿ.
• ಪ್ರಶ್ನೆಗಳು, ಪ್ರತಿಕ್ರಿಯೆಗಳು ಮತ್ತು ಕೀ ಉತ್ತರವನ್ನು ಪರಿಶೀಲಿಸಬಹುದು.
• ವಿವರಗಳನ್ನು ವೀಕ್ಷಿಸಿದ ನಂತರ, ಅಭ್ಯರ್ಥಿಗಳು ಪ್ರಶ್ನೆಗಳು, ಆಯ್ಕೆಗಳು ಮತ್ತು ಕೀಗಳಿಗೆ ಸಂಬಂಧಿಸಿದಂತೆ ಯಾವುದಾದರೂ ಆಕ್ಷೇಪಣೆಗಳಿದ್ದಲ್ಲಿ, ನಿಗದಿತ ಶುಲ್ಕ ಪಾವತಿಸಿ ಆಕ್ಷೇಪಣೆ ಸಲ್ಲಿಸಬಹುದು.