ರೈಲ್ವೆ ನೇಮಕಾತಿ ಮಂಡಳಿ(RRB)ಯು ಸಿಇಎನ್ 05/2025ರಡಿ ಅಧಿಸೂಚಿತ ಜೆಇ/ಡಿಎಂಎಸ್/ಸಿಎಂಎ ವರ್ಗದ ವಿವಿಧ ಹುದ್ದೆಗಳ ನೇಮಕಾತಿಗಾಗಿ ನಡೆಸಲಾಗುವ ಕಂಪ್ಯೂಟರ್ ಆಧಾರಿತ ಪರೀಕ್ಷೆ(ಸಿಬಿಟಿ-I)ಯ ಪರಿಷ್ಕೃತ ವೇಳಾಪಟ್ಟಿಯ ಜೊತೆಗೆ ಸಿಟಿ ಇಂಟಿಮೇಷನ್ ಸ್ಲಿಪ್‌ಅನ್ನು ಫೆ.10ರಂದು ಅಧಿಕೃತವಾಗಿ ಬಿಡುಗಡೆ ಮಾಡಿದೆ.
ಜೂನಿಯರ್ ಎಂಜಿನಿಯರ್, ಡಿಪೋ ಮೆಟೀರಿಯಲ್ ಸೂಪರಿಂಟೆಂಡೆಂಟ್ ಮತ್ತು ಕೆಮಿಕಲ್ & ಮೆಟಲರ್ಜಿಕಲ್ ಸಹಾಯಕ ಸೇರಿದಂತೆ ಒಟ್ಟು 2570 ಹುದ್ದೆಗಳ ನೇಮಕಾತಿಗಾಗಿ ಮೊದಲ ಹಂತದಲ್ಲಿ ನಡೆಸಲಾಗುವ ಕಂಪ್ಯೂಟರ್ ಆಧಾರಿತ ಪರೀಕ್ಷೆ(CBT-I)ಯು ಫೆಬ್ರವರಿ 19, 20 ಹಾಗೂ 25 ರಂದು ಒಟ್ಟು 3 ದಿನಗಳ ಅವಧಿಯವರೆಗೆ ಭಾರತದಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಜರುಗಲಿದೆ. ಪರೀಕ್ಷಾ ನಗರ ಮಾಹಿತಿ ಚೀಟಿಯನ್ನು ಆರ್‌ಆರ್‌ಬಿ ಅಧಿಕೃತ ಜಾಲತಾಣ http://www.rrbapply.gov.in/ದ ಮೂಲಕ ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತಮ್ಮ ಲಾಗಿನ್ ರುಜುವಾತುಗಳನ್ನು ಬಳಸಿಕೊಂಡು ಪರಿಶೀಲನೆ ಮಾಡಿಕೊಳ್ಳಬಹುದಾಗಿದೆ. ಪ್ರವೇಶ ಪತ್ರವು ಪ್ರತಿ ಪರೀಕ್ಷೆಯ ದಿನಾಂಕಕ್ಕಿಂತ 4 ದಿನಗಳ ಮೊದಲು ಡೌನ್ಲೋಡ್ ಮಾಡಿಕೊಳ್ಳಲು ದೊರಕಲಿದೆ.
ಸಿಟಿ ಇಂಟಿಮೇಶನ್ ಸ್ಲಿಪ್ ಹಾಗೂ ವೇಳಾಪಟ್ಟಿ ಡೌನ್ಲೋಡ್ ಮಾಡುವ ವಿಧಾನ:
• ಅಭ್ಯರ್ಥಿಗಳು ಆರ್.ಆರ್.ಬಿ ಅಧಿಕೃತ ಜಾಲತಾಣ https://indianrailways.gov.in/railwayboard/view_section.jsp?lang=0&id=0,7,1281ಕ್ಕೆ ಭೇಟಿ ನೀಡಿ.
• ನಂತರ ನಿಮ್ಮ ಸಂಬಂಧಿತ ಅಥವಾ ನೀವು ಅರ್ಜಿ ಸಲ್ಲಿಸಿದ ಆರ್.ಆರ್.ಬಿ ಅಧಿಕೃತ ಜಾಲತಾಣವನ್ನು ಆಯ್ಕೆ ಮಾಡಿ.
• ಬಳಿಕ ಇತ್ತೀಚಿನ ನವೀಕರಣಗಳು ವಿಭಾಗದಲ್ಲಿ ನೀಡಲಾಗಿರುವ “ಸಿಇಎನ್ ಸಂಖ್ಯೆ 05/2025 (ಜೆಇ, ಡಿಎಂಎಸ್ ಮತ್ತು ಸಿಎಂಎ ವಿವಿಧ ಹುದ್ದೆಗಳು) ಸಿಟಿ ಇಂಟಿಮೇಷನ್ ಸ್ಲಿಪ್ ಮತ್ತು ಹೆಲ್ಪ್ಡೆಸ್ಕ್ ಇತ್ಯಾದಿಗಳನ್ನು ಡೌನ್ಲೋಡ್ ಮಾಡಲು ಕ್ಲಿಕ್ ಮಾಡಿ” ಲಿಂಕ್ ಮೇಲೆ ಕ್ಲಿಕ್ ಮಾಡಿ. (ಅಥವಾ ನೇರವಾಗಿ https://rrb.digialm.com//EForms/configuredHtml/33128/97996/login.html ಲಿಂಕ್ಗೆ ಭೇಟಿ ನೀಡಬಹುದು).
Rrb Je Cen No.05_2025 City Intimation Slip Login Link
• ನಂತರ ಅಭ್ಯರ್ಥಿಗಳು ನೋಂದಣಿ ಸಂಖ್ಯೆ ಹಾಗೂ ಜನ್ಮ ದಿನಾಂಕವನ್ನು ನಮೂದಿಸಿ ಲಾಗಿನ್ ಆಗಿ.
• ಆರ್.ಆರ್.ಬಿ (ಜೆಇ, ಡಿಎಂಎಸ್ ಮತ್ತು ಸಿಎಂಎ ವಿವಿಧ ಹುದ್ದೆಗಳು) ಸಿಟಿ ಇಂಟಿಮೇಷನ್ ಸ್ಲಿಪ್ ಹಾಗೂ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪರಿಶೀಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ: ರೈಲ್ವೆ ನೇಮಕಾತಿ ಮಂಡಳಿಯ ಅಧಿಕೃತ ವೆಬ್ ಸೈಟ್http://www.rrbbnc.gov.in/ ಗೆ ಭೇಟಿ ನೀಡಿ ಅಥವಾ ಸಹಾಯವಾಣಿ ಸಂಪರ್ಕ ಸಂಖ್ಯೆ 7996339995 ಅನ್ನು ಸಂಪರ್ಕಿಸಬಹುದು.
Important Direct Links:
RRB JE Revised Exam Dates and City Intimation Slip Notice PDF