ರೈಲ್ವೆ ನೇಮಕಾತಿ ಮಂಡಳಿಯು ಜೆಇ ಹುದ್ದೆಗಳ ನೇಮಕಾತಿಗಾಗಿ ಕಂಪ್ಯೂಟರ್ ಆಧಾರಿತ ಆನ್ ಲೈನ್ ಪರೀಕ್ಷೆಯ-1 ಅನ್ನು ಕಳೆದ ವರ್ಷ ಡಿಸೆಂಬರ್ 16, 17, 18ವರೆಗೆ ದೇಶದ ವಿವಿಧ ಪರೀಕ್ಷಾ ಕೇಂದ್ರದಲ್ಲಿ ಯಶಸ್ವಿಯಾಗಿ ನಡೆಸಿತ್ತು. ಸದರಿ ಪರೀಕ್ಷೆಯ ಫಲಿತಾಂಶ(RRB JE Result 2025 CBT 1)ವನ್ನು ಮಾರ್ಚ್ 05ರಂದು ಬಿಡುಗಡೆ ಮಾಡಿದೆ.
ಒಟ್ಟು 7951 ಜೂನಿಯರ್ ಎಂಜಿನಿಯರ್ ಹುದ್ದೆಗಳ ನೇಮಕಾತಿಗಾಗಿ ಕಳೆದ ವರ್ಷ 30 ಜುಲೈರಿಂದ 29 ಆಗಸ್ಟ್’ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿತ್ತು. ಮೊದಲ ಹಂತದ ಈ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳು ಎರಡನೇ(ಸಿಬಿಟಿ-2) ಹಂತದ ಪರೀಕ್ಷೆಗೆ ಅರ್ಹರಾಗಿರುತ್ತಾರೆ. ಪರೀಕ್ಷೆಯ ಫಲಿತಾಂಶ ಪರಿಶೀಲಸಲು ಅಧಿಕೃತ ಅಂತರ್ಜಾಲವಾದ www.rrcb.gov.inಗೆ ಭೇಟಿ ನೀಡಬಹುದಾಗಿದೆ.
Namaste