ರೈಲ್ವೆ ನೇಮಕಾತಿ ಮಂಡಳಿಯು (RRB) ಸಿಇಎನ್ ಸಂಖ್ಯೆ 07/2024ರ ಅಡಿಯಲ್ಲಿ ಮಿನಿಸ್ಟರಿಯಲ್ ಅಂಡ್ ಐಸೋಲೇಟೆಡ್ ಕ್ಯಾಟೆಗೋರಿಸ್ ವಿವಿಧ ಹುದ್ದೆಗಳ ನೇಮಕಾತಿಗೆ ಸಲ್ಲಿಸಲಾದ ಅರ್ಜಿ ಸ್ಥಿತಿಯನ್ನು ಪರಿಶೀಲನೆ ಮಾಡಲು ಅವಕಾಶ.
RRB ಸಚಿವಾಲಯ ಮತ್ತು ಪ್ರತ್ಯೇಕಿತ ವರ್ಗಗಳ ವಿವಿಧ ಒಟ್ಟು 1036 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿತ್ತು, ಪ್ರಸ್ತುತ ಸದರಿ ಅರ್ಜಿಗಳ ಪರಿಶೀಲನೆ ಪೂರ್ಣಗೊಂಡಿದ್ದು, ಮಂಡಳಿಯು ಜುಲೈ 12ರಿಂದ ಅರ್ಜಿ ಸ್ಥಿತಿ ವೀಕ್ಷಿಸುವ ಲಿಂಕನ್ನು ಲೈವ್ ಮಾಡಲಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು RRB ಅಧಿಕೃತ ವೆಬ್ಸೈಟ್ www.rrbapply.gov.in ಗೆ ಭೇಟಿ ನೀಡಿ. ತಮ್ಮ ಬಳಕೆದಾರ ರುಜುವಾತುಗಳೊಂದಿಗೆ ಲಾಗಿನ್ ಆಗಿ ಅರ್ಜಿ ಸ್ಥಿತಿಯನ್ನು ಪರಿಶೀಲಿಸಬಹುದು.
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಲ್ಲಿ ಯಶಸ್ವಿಯಾಗಿ ಅರ್ಜಿ ಸ್ವೀಕರಿಸಿದ ಅಭ್ಯರ್ಥಿಗಳಿಗೆ ತಾತ್ಕಾಲಿಕವಾಗಿ ಸ್ವೀಕರಿಸಲಾಗಿದೆ ಮತ್ತು ಅರ್ಜಿ ತಿರಸ್ಕರಿಸಲಾದ ಅಭ್ಯರ್ಥಿಗಳಿಗೆ ತಿರಸ್ಕರಿಸಲಾಗಿದೆ (ಕಾರಣಗಳೊಂದಿಗೆ) ಎಂದು ಉಲ್ಲೇಖಿಸಲಾಗಿರುತ್ತದೆ. ಅರ್ಜಿ ಸ್ಥಿತಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿಗೆ SMS ಮತ್ತು ಇ-ಮೇಲ್ ಕಳುಹಿಸಲಾಗುತ್ತದೆ.

How to Check RRB Ministerial and Isolated Categories Application Status 2025
ಅರ್ಜಿ ಸ್ಥಿತಿ ಪರಿಶೀಲಿಸುವ ವಿಧಾನ ಈ ಕೆಳಗಿನಂತಿದೆ;
- ಅಭ್ಯರ್ಥಿಗಳು RRB ಅಧಿಕೃತ ವೆಬ್ಸೈಟ್ www.rrbapply.gov.in ಗೆ ಭೇಟಿ ನೀಡಿ.
- ಮೊಬೈಲ್ ಸಂಖ್ಯೆ/ ಇಮೇಲ್ ಐಡಿ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.
- (RRB) ಸಚಿವಾಲಯ ಮತ್ತು ಪ್ರತ್ಯೇಕಿತ ವರ್ಗಗಳ ವಿವಿಧ ಹುದ್ದೆಗಳ ಅರ್ಜಿ ಸ್ಥಿತಿ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನಂತರ ನಿಮ್ಮ ಅರ್ಜಿ ಸ್ಥಿತಿಯನ್ನು ಪರಿಶೀಲಿಸಿಕೊಳ್ಳಿ.
Important Direct Links
RRB Ministerial and Isolated Categories Application Status 2025 Notice PDF | Download |
RRB Ministerial and Isolated Categories Application Status 2025 Check Link | Check Now |
Official Website | RRBs |
More Updates | KarnatakaHelp.in |