ರೈಲ್ವೆ ನೇಮಕಾತಿ ಮಂಡಳಿಯು CEN05/2024ರಡಿ ಅಧಿಸೂಚಿಸಲಾದ ತಾಂತ್ರಿಕೇತರ ಜನಪ್ರಿಯ ವರ್ಗಗಳ ಪದವಿ ಹಂತದ ಹುದ್ದೆಗಳ ನೇಮಕಾತಿಗಾಗಿ ನಡೆಸಲಾಗುವ ಕಂಪ್ಯೂಟರ್ ಆಧಾರಿತ ಆಪ್ಟಿಟ್ಯೂಡ್ ಪರೀಕ್ಷೆಯ ವೇಳಾಪಟ್ಟಿಯನ್ನು (ಡಿ.16)ರಂದು ಬಿಡುಗಡೆ ಮಾಡಿದೆ.
ಒಟ್ಟು 8113 ಹುದ್ದೆಗಳ ಭರ್ತಿಗಾಗಿ ಸಿಬಿಟಿ-I ಹಾಗೂ ಸಿಬಿಟಿ-II ಪರೀಕ್ಷೆಯಲ್ಲಿ ಅರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಆಧಾರಿತ ಆಪ್ಟಿಟ್ಯೂಡ್ ಪರೀಕ್ಷೆ (CBAT)ಯನ್ನು ಡಿ.28ರಂದು ನಡೆಸಲು ನಿರ್ಧರಿಸಲಾಗಿದೆ. ಸದರಿ CBAT ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಆರ್ಆರ್ಬಿಯ ಪ್ರಾದೇಶಿಕ ಜಾಲತಾಣ https://indianrailways.gov.in/railwayboard/view_section.jsp?lang=0&id=0,7,1281ದಲ್ಲಿ ಬಿಡುಗಡೆ ಮಾಡಲಾಗಿದೆ, ಅರ್ಹ ಅಭ್ಯರ್ಥಿಗಳು ವೇಳಾಪಟ್ಟಿಯನ್ನು ಪರಿಶೀಲಿಸಬಹುದು.
ಪರೀಕ್ಷಾ ದಿನಾಂಕಕ್ಕೆ 4 ದಿನಗಳ ಮೊದಲು ಅಂದರೆ (ಡಿಸೆಂಬರ್ 24 ರಂದು) ಪರೀಕ್ಷಾ ನಗರ ಮತ್ತು ದಿನಾಂಕ ಸೂಚನೆಗಳನ್ನು ಒಳಗೊಂಡ ಪ್ರವೇಶ ಪತ್ರಗಳನ್ನು ಬಿಡುಗಡೆ ಮಾಡಲಾಗುತ್ತದೆ. ಅಭ್ಯರ್ಥಿಗಳು 4 ದಿನಗಳ ಮೊದಲು ತಮ್ಮ ಲಾಗಿನ್ ರುಜುವಾತುಗಳನ್ನು ಬಳಸಿಕೊಂಡು ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ಮಂಡಳಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
RRB NTPC GRADUATE LEVEL CBAT ವೇಳಾಪಟ್ಟಿ ಡೌನ್ಲೋಡ್ ಮಾಡುವ ವಿಧಾನ.
• ಆರ್.ಆರ್.ಬಿ ಅಧಿಕೃತ ವೆಬ್ಸೈಟ್ https://indianrailways.gov.in/railwayboard/view_section.jsp?lang=0&id=0,7,1281 ಗೆ ಭೇಟಿ ನೀಡಿ.
• ನೀವು ಅರ್ಜಿ ಸಲ್ಲಿಸಿದ ರಾಜ್ಯ (ನಿಮ್ಮ ಸಂಬಂಧಿತ) RRB ಅಧಿಕೃತ ವೆಬ್ಸೈಟ್ ಅನ್ನು ಆಯ್ಕೆ ಮಾಡಿ.
• ನಂತರ ಇತ್ತೀಚಿನ ನವೀಕರಣಗಳು ವಿಭಾಗದಲ್ಲಿ ನೀಡಲಾಗಿರುವ “CEN 05/2024 NE 16-12-2025- CBAT ವೇಳಾಪಟ್ಟಿ ಸೂಚನೆ” ಲಿಂಕ್ ಮೇಲೆ ಕ್ಲಿಕ್ ಮಾಡಿ.
• ನಂತರ RRB NPTC GRADUATE LEVEL CBAT ವೇಳಾಪಟ್ಟಿ ಅನ್ನು ಪರಿಶೀಲಿಸಿಕೊಳ್ಳಿ.