ರೈಲ್ವೆ ನೇಮಕಾತಿ ಮಂಡಳಿಯು ತಾಂತ್ರಿಕೇತರ ಜನಪ್ರಿಯ ವರ್ಗಗಳ ಪದವಿ ಹಂತದ ಹುದ್ದೆಗಳ ನೇಮಕಾತಿಗಾಗಿ 2025ರ ಜೂನ್ 5 ರಿಂದ 24 ರವರೆಗೆ ನಡೆಸಲಾದ ಕಂಪ್ಯೂಟರ್ ಆಧಾರಿತ ಪರೀಕ್ಷೆ-1 (CBT-I)ರ ಫಲಿತಾಂಶವನ್ನು ಮಂಡಳಿಯು ಬಿಡುಗಡೆ ಮಾಡಿದೆ.
CEN 05/2024ರ ಅಡಿ ಅಧಿಸೂಚಿಸಿ ತಾಂತ್ರಿಕೇತರ ಜನಪ್ರಿಯ ವರ್ಗಗಳ ವಿವಿಧ ಸ್ಟೇಷನ್ ಮೇಲ್ವಿಚಾರಕ, ಟಿಕೆಟ್ ಮೇಲ್ವಿಚಾರಕ, ಜೂನಿಯರ್ ಅಕೌಂಟ್ಸ್, ಅಸಿಸ್ಟೆಂಟ್ ಕಮ್ ಟೈಪಿಸ್ಟ್ ಹಾಗೂ ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್) ಸೇರಿದಂತೆ ಇತರೆ ಒಟ್ಟು 8113 ಪದವಿ ಹಂತದ ಹುದ್ದೆಗಳ ನೇಮಕಾತಿ ಸಂಬಂಧ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ನಡೆಸಲಾಗಿತ್ತು. ಇದೀಗ ಸದರಿ ಪರೀಕ್ಷೆಯ ಫಲಿತಾಂಶ, ಕಟ್ ಆಫ್ ಹಾಗೂ ಸ್ಕೋರ್ ಕಾರ್ಡ್ ಬಿಡುಗಡೆಯಾಗಿದ್ದು, ಅಭ್ಯರ್ಥಿಗಳು ಆಯಾ ಪ್ರಾದೇಶಿಕ ಜಾಲತಾಣಗಳಿಗೆ ಭೇಟಿ ನೀಡಿ. ತಮ್ಮ ಲಾಗಿನ್ ಮಾಹಿತಿ ನಮೂದಿಸುವ ಮೂಲಕ ಪರಿಶೀಲನೆ ಮಾಡಿಕೊಳ್ಳಬಹುದಾಗಿದೆ.
RRB NPTC ಪದವಿ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಫಲಿತಾಂಶ, ಕಟ್ ಆಫ್ ಹಾಗೂ ಸ್ಕೋರ್ ಕಾರ್ಡ್ ಪರಿಶೀಲಿಸುವ ವಿಧಾನ;
• ಆರ್ ಆರ್ ಬಿ ಅಧಿಕೃತ ವೆಬ್ಸೈಟ್ https://indianrailways.gov.in/railwayboard/view_section.jsp?lang=0&id=0,7,1281 ಗೆ ಭೇಟಿ ನೀಡಿ.
• ನೀವು ಅರ್ಜಿ ಸಲ್ಲಿಸಿದ ರಾಜ್ಯ (ನಿಮ್ಮ ಸಂಬಂಧಿತ)RRB ಅಧಿಕೃತ ವೆಬ್ಸೈಟ್ ಅನ್ನು ಆಯ್ಕೆ ಮಾಡಿ.
• ನಂತರ ಅಲ್ಲಿ ಮುಖಪುಟದಲ್ಲಿ ನೀಡಿರುವ “ಇತ್ತಿಚೀನ ಅಪ್ಡೇಟ್ಸ್” ಅಡಿಯಲ್ಲಿ “CEN 05/2024ರ ಅಡಿಯಲ್ಲಿ ಅಧಿಸೂಚಿಸಲಾದ RRB NPTC GRAGUATE LEVEL CBT ಫಲಿತಾಂಶ, ಕಟ್ ಆಫ್ ಹಾಗೂ ಸ್ಕೋರ್ ಕಾರ್ಡ್ ಪಿಡಿಎಫ್ ಲಿಂಕ್ ಮೇಲೆ ಕ್ಲಿಕ್ ಮಾಡಿ. ಡೌನ್ಲೋಡ್ ಮಾಡಿಕೊಳ್ಳಿ.
• ನಂತರ ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆ(Roll Number)ಯನ್ನು ಹುಡುಕುವ ಮೂಲಕ ತಮ್ಮ ಫಲಿತಾಂಶವನ್ನು ಪರಿಶೀಲಿಸಿಕೊಳ್ಳಬಹುದು.