ರೈಲ್ವೆ ನೇಮಕಾತಿ ಮಂಡಳಿಯು (RRB) NTPC ಪದವಿಪೂರ್ವ (UG) ಸಿಇಎನ್ ಸಂಖ್ಯೆ:06/2024ರ ನೇಮಕಾತಿ ಅಡಿಯಲ್ಲಿ ಸಲ್ಲಿಸಲಾದ ಅರ್ಜಿ ಸ್ಥಿತಿಯನ್ನು ಪರಿಶೀಲಸಲು ಅವಕಾಶ ನೀಡಲಾಗಿದೆ.
ರೈಲ್ವೆ ಇಲಾಖೆಯ ತಾಂತ್ರಿಕವಲ್ಲದ ಜನಪ್ರಿಯ ವರ್ಗಗಳು (NTPC) ಪದವಿಪೂರ್ವ (UG) ನೇಮಕಾತಿ – ವಾಣಿಜ್ಯ ಕಮ್ ಟಿಕೆಟ್ ಕ್ಲರ್ಕ್, ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ್, ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ ಮತ್ತು ರೈಲು ಕ್ಲರ್ಕ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು, ಪ್ರಸ್ತುತ ಸದರಿ ಅರ್ಜಿಗಳ ಪರಿಶೀಲನೆ ಪೂರ್ಣಗೊಂಡಿದ್ದು, ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು RRB ಅಧಿಕೃತ ವೆಬ್ಸೈಟ್ www.rrbapply.gov.in ಗೆ ಭೇಟಿ ನೀಡಿ. ತಮ್ಮ ಬಳಕೆದಾರ ರುಜುವಾತುಗಳೊಂದಿಗೆ ಲಾಗಿನ್ ಆಗಿ ಅರ್ಜಿ ಸ್ಥಿತಿಯನ್ನು ಪರಿಶೀಲಿಸಬಹುದು. ಈ ಕುರಿತು ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ನೀಡಲಾಗಿದೆ ತಪ್ಪದೆ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಲ್ಲಿ ಅರ್ಜಿ ಸ್ವೀಕರಿಸಿದ ಅಭ್ಯರ್ಥಿಗಳಿಗೆ ತಾತ್ಕಾಲಿಕವಾಗಿ ಸ್ವೀಕರಿಸಲಾಗಿದೆ ಮತ್ತು ಅರ್ಜಿ ಸ್ಥಿತಿ ತಿರಸ್ಕರಿಸಲಾದ ಅಭ್ಯರ್ಥಿಗಳಿಗೆ ತಿರಸ್ಕರಿಸಲಾಗಿದೆ (ಕಾರಣಗಳೊಂದಿಗೆ)ಎಂದು ಉಲ್ಲೇಖಿಸಲಾಗಿರುತ್ತದೆ. ಅರ್ಜಿ ಸ್ಥಿತಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿಗೆ SMS ಮತ್ತು ಇ-ಮೇಲ್ ಕಳುಹಿಸಲಾಗುತ್ತದೆ.
How to Check RRB NTPC UG Application Status
(RRB) NTPC (UG) ಅರ್ಜಿ ಸ್ಥಿತಿ ಪರಿಶೀಲಿಸುವ ವಿಧಾನ;
- ಅಭ್ಯರ್ಥಿಗಳು RRB ಅಧಿಕೃತ ವೆಬ್ಸೈಟ್ www.rrbapply.gov.in ಗೆ ಭೇಟಿ ನೀಡಿ.
- ಮೊಬೈಲ್ ಸಂಖ್ಯೆ/ ಇಮೇಲ್ ಐಡಿ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.
- (RRB) NTPC (UG) ಅರ್ಜಿ ಸ್ಥಿತಿ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನಂತರ ನಿಮ್ಮ ಅರ್ಜಿ ಸ್ಥಿತಿಯನ್ನು ಪರಿಶೀಲಿಸಿಕೊಳ್ಳಿ.
Important Direct Links:
RRB NTPC UG Application Status Notice PDF | Download |
RRB NTPC 12th Level Application Status Check Link | Check Now |
Official Website | rrbapply.gov.in |
More Updates | KarrnatakaHelp.in |