ರೈಲ್ವೆ ನೇಮಕಾತಿ ಮಂಡಳಿಯು ತಾಂತ್ರಿಕೇತರ ಜನಪ್ರಿಯ ವರ್ಗಗಳ (NTPC) ಪದವಿಪೂರ್ವ ಮಟ್ಟದ (UG) ಹುದ್ದೆಗಳ ನೇಮಕಾತಿ ಸಂಬಂಧ ಆ.7ರಿಂದ ಸೆ.9ರವರೆಗೆ ನಡೆಸಲಾದ ಕಂಪ್ಯೂಟರ್ ಆಧಾರಿತ ಪರೀಕ್ಷೆ-1ರ (CBT-I) ಕೀ ಉತ್ತರಗಳನ್ನು ಬಿಡುಗಡೆ ಮಾಡಿದೆ.
RRB ಸಿಇಎನ್ 06/2024ರ ಅನ್ವಯ ಒಟ್ಟು 3445 ಹುದ್ದೆಗಳ ಭರ್ತಿಗಾಗಿ ಅಧಿಸೂಚಿಸಿ, ಕಂಪ್ಯೂಟರ್ ಆಧಾರಿತ ಪರೀಕ್ಷೆ-I ಅನ್ನು ನಡೆಸಲಾಗಿತ್ತು. ಸದರಿ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ತಮ್ಮ ಪ್ರಶ್ನೆಗಳು, ಪ್ರತಿಕ್ರಿಯೆಗಳು ಮತ್ತು ಉತ್ತರ ಕೀಗಳನ್ನು ಆರ್.ಆರ್.ಬಿ ಅಧಿಕೃತ ವೆಬ್ ಸೈಟ್ https://rrb.digialm.com//EForms/configuredHtml/2667/95125/login.htmlನಲ್ಲಿ ಪರಿಶೀಲನೆ ಮಾಡಿಕೊಳ್ಳಬಹುದಾಗಿದೆ.
RRB NTPC ಕಂಪ್ಯೂಟರ್ ಆಧಾರಿತ ಪರೀಕ್ಷೆ ಆಕ್ಷೇಪಣೆ ಸಲ್ಲಿಸಲು ಅವಕಾಶ
ಅಭ್ಯರ್ಥಿಗಳು ತಮ್ಮ ಪ್ರಶ್ನೆಗಳು, ಆಯ್ಕೆಗಳು ಮತ್ತು ಉತ್ತರ ಕೀಗಳ ಮೇಲೆ ಯಾವುದೇ ಆಕ್ಷೇಪಣೆಗಳಿದ್ದರೆ ಸೆ.15 ರಿಂದ 20ರವರೆಗೆ 50ರೂ. ಮತ್ತು ಪ್ರತಿ ಪ್ರಶ್ನೆಗೆ ಅನ್ವಯವಾಗುವ ಬ್ಯಾಂಕ್ ಸೇವಾ ಶುಲ್ಕ ಪಾವತಿಸಿ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ.
ರುಪೇ ಕಾರ್ಡ್ಗಳು/ಕ್ರೆಡಿಟ್ ಕಾರ್ಡ್ಗಳು, UPI, ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಭರಿಸಬಹುದು. ಅಭ್ಯರ್ಥಿಗಳು ಸಲ್ಲಿಸಿದ ಆಕ್ಷೇಪಣೆ ಸರಿಯಾಗಿದ್ದರೆ, ಅಂತಹ ಮಾನ್ಯ ಆಕ್ಷೇಪಣೆಗಳಿಗೆ ಪಾವತಿಸಿದ ಶುಲ್ಕವನ್ನು ಕಡಿತಗೊಳಿಸಿ ಅಭ್ಯರ್ಥಿಗೆ ಮರುಪಾವತಿಸಲಾಗುತ್ತದೆ.
RRB NTPC UG CBT-1 Answer Key 2025ಗೆ ಆಕ್ಷೇಪಣೆ ಸಲ್ಲಿಸುವ ವಿಧಾನ:
ಅಧಿಕೃತ ಜಾಲತಾಣ https://rrb.digialm.com//EForms/configuredHtml/2667/95125/login.htmlಕ್ಕೆ ಬೇಟಿ ನೀಡಿ.
ನಂತರ RRB NTPC ಉತ್ತರ ಕೀ 2025 ಅನ್ನು ಪರಿಶೀಲಿಸಲು ನಿಮ್ಮ ನೋಂದಣಿ ಸಂಖ್ಯೆ ಮತ್ತು ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.
• ನಂತರ ಅಭ್ಯರ್ಥಿಗಳು ತಮ್ಮ ಪ್ರಶ್ನೆಗಳು, ಪ್ರತಿಕ್ರಿಯೆಗಳು ಮತ್ತು ಉತ್ತರ ಕೀ ವೀಕ್ಷಿಸಿ, ಯಾವುದಾದರೂ ಆಕ್ಷೇಪಣೆಗಳಿದ್ದಲ್ಲಿ ನಿಗದಿತ ಶುಲ್ಕ ಪಾವತಿಸಿ ಸೆಪ್ಟೆಂಬರ್ 20ರೊಳಗೆ ಆಕ್ಷೇಪಣೆ ಸಲ್ಲಿಸಬಹುದು.