ಆರ್‌ಆರ್‌ಬಿ NTPC ಯುಜಿ ಸಿಬಿಟಿ-IIರ ಫಲಿತಾಂಶ: DV ಮತ್ತು MEಗೆ ಅರ್ಹತೆ ಪಡೆದ ಅಭ್ಯರ್ಥಿಗಳ ಕಿರು ಪಟ್ಟಿ ಪ್ರಕಟ

Published on:

ರೈಲ್ವೆ ನೇಮಕಾತಿ ಮಂಡಳಿಯು ಸಿಇಎನ್‌ 06/2024ರಡಿ ಅಧಿಸೂಚಿತ ತಾಂತ್ರಿಕೇತರ ಜನಪ್ರಿಯ ವರ್ಗಗಳ ಪದವಿ ಪೂರ್ವ ಹಂತದ ಹುದ್ದೆಗಳ ಭರ್ತಿ ಸಂಬಂಧ 2025ರ ಡಿಸೆಂಬರ್ 20ರಂದು ನಡೆಸಿದ್ದ ಸಿಬಿಟಿ-IIರ ಫಲಿತಾಂಶವನ್ನು ಪ್ರಕಟಿಸಿದೆ.

ಸದರಿ ಪರೀಕ್ಷೆಯಲ್ಲಿ ಅರ್ಹತೆ ಪಡೆದು ದಾಖಲಾತಿ ಪರಿಶೀಲನೆ(ಡಿ ಮತ್ತು ವೈದ್ಯಕೀಯ ಪರೀಕ್ಷೆಗೆ(ಎಂಇ) ಆಯ್ಕೆಯಾದ ಅಭ್ಯರ್ಥಿಗಳ ಶಾರ್ಟ್ ಲಿಸ್ಟ್ ಅನ್ನು ಆಯಾ ಪ್ರಾದೇಶಿಕ ಆರ್‌ಆರ್‌ಬಿ ಅಧಿಕೃತ ಜಾಲತಾಣ https://indianrailways.gov.in/railwayboard/view_section.jsp?lang=0&id=0,7,1281ದಲ್ಲಿ ಬಿಡುಗಡೆ ಮಾಡಲಾಗಿದ್ದು, ಹಾಜರಾದ ಅಭ್ಯರ್ಥಿಗಳು ಫಲಿತಾಂಶವನ್ನು ಪರಿಶೀಲಿಸಬಹುದು.

RRB NPTC (UG) CBT-IIರ ಫಲಿತಾಂಶ ಪರಿಶೀಲಿಸುವ ವಿಧಾನ

• ಮೊದಲಿಗೆ ಅಭ್ಯರ್ಥಿಗಳು RRB ಅಧಿಕೃತ ವೆಬ್ಸೈಟ್ https://indianrailways.gov.in/railwayboard/view_section.jsp?lang=0&id=0,7,1281 ಗೆ ಭೇಟಿ ನೀಡಿ.

• ನಂತರ ನೀವು ಅರ್ಜಿ ಸಲ್ಲಿಸಿದ ರಾಜ್ಯ (ನಿಮ್ಮ ಸಂಬಂಧಿತ) RRB ಅಧಿಕೃತ ವೆಬ್ಸೈಟ್ ಅನ್ನು ಆಯ್ಕೆ ಮಾಡಿ.

• ನಂತರ ಇತ್ತೀಚಿನ ಸೂಚನೆಗಳು ವಿಭಾಗದಲ್ಲಿ ನೀಡಲಾಗಿರುವ “CEN-06/2024 (NTPC – ಪದವಿಪೂರ್ವ) ದಾಖಲೆಗಳಿಗಾಗಿ DV ಗಾಗಿ CBT-II ಆಧಾರದ ಮೇಲೆ ವರ್ಗ 1 ಮತ್ತು ವರ್ಗ 4ರ ಅಭ್ಯರ್ಥಿಗಳ ಕಿರುಪಟ್ಟಿ” ಲಿಂಕ್ ಮೇಲೆ ಕ್ಲಿಕ್ ಮಾಡಿ.

• ಬಳಿಕ CBT-II ಫಲಿತಾಂಶದ ಪಿಡಿಎಫ್ ತೆರೆಯುತ್ತದೆ.

• ಪಿಡಿಎಫ್ ನಲ್ಲಿ CBT-II ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳ ನೋಂದಣಿ ಸಂಖ್ಯೆ ಅನ್ನು ನಮೂದಿಸಿರಲಾಗುತ್ತದೆ.

• ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆಯ ಮೂಲಕ ಫಲಿತಾಂಶವನ್ನು ಪರಿಶೀಲಿಸಿಕೊಳ್ಳಬಹುದು.

• ನಿಮ್ಮ ನೋಂದಣಿ ಸಂಖ್ಯೆ ಪಿಡಿಎಫ್ ನಲ್ಲಿ ಲಭ್ಯವಿದ್ದರೆ, ನೀವು ನೇಮಕಾತಿಯ ಮುಂದಿನ ಹಂತವಾದ ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಗೆ ಅರ್ಹತೆ ಪಡೆದಿರುತ್ತೀರಿ.

• ಭವಿಷ್ಯದ ಬಳಕೆಗಾಗಿ ಅಭ್ಯರ್ಥಿಗಳು ಫಲಿತಾಂಶದ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ.

Important Direct Links:

RRB NTPC UG CBT-2 Result 2026 CEN 06/2024 (All RRB Official Website)RRBs
More UpdatesKarnatakahelp.in

About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment