ರೈಲ್ವೆ ನೇಮಕಾತಿ ಮಂಡಳಿಯು ಸಿಇಎನ್ 04/2025ರಡಿ ಅಧಿಸೂಚಿತ ವಿಭಾಗ ನಿಯಂತ್ರಕ(ಎಸ್‌ಸಿ) ಹುದ್ದೆಗಳ ಭರ್ತಿ ಸಂಬಂಧ ಫೆ.11 ಮತ್ತು 12ರಂದು ನಡೆಸಿದ ಕಂಪ್ಯೂಟರ್ ಆಧಾರಿತ ಪರೀಕ್ಷೆ(ಸಿಬಿಟಿ)ಯ ಕೀ ಉತ್ತರಗಳನ್ನು ಗುರುವಾರ(ಫೆ.26) ಬಿಡುಗಡೆಗೊಳಿಸಿದೆ.
ಕೀ ಉತ್ತಗಳನ್ನು ವಿಕ್ಷೀಸಲು, ಆಕ್ಷೇಪಣೆ ಸಲ್ಲಿಸಲು ಮಾ.03ರವೆರೆಗೆ ಅವಕಾಶವಿದೆ. ಪ್ರತಿ ಪ್ರಶ್ನೆಗೆ ₹50 ಜೊತೆಗೆ ಬ್ಯಾಂಕಿನ ಸೇವಾ ಶುಲ್ಕವನ್ನು ಪಾವತಿಸಿ ಆಕ್ಷೇಪಿಸಬಹುದು. ಅಧಿಕೃತ ಜಾಲತಾಣ ಲಿಂಕ್ https://rrb.digialm.com//EForms/configuredHtml/33128/97801/login.htmlಗೆ ಭೇಟಿ ನೀಡಿ, ತಮ್ಮ ಲಾಗಿನ್ ರುಜುವಾತುಗಳನ್ನು ತುಂಬಿ ಕೀ ಉತ್ತರಗಳನ್ನು ಪರಿಶೀಲನೆ ಮಾಡಬಹುದು.
ಪ್ರಶ್ನೆ ಪತ್ರಿಕೆ ಜೊತೆಗೆ ಕೀ ಉತ್ತರ ನೋಡುವ ಸುಲಭ ವಿಧಾನ ಇಂತಿದೆ;
ಹಂತ-1 ಅಧಿಕೃತ ಜಾಲತಾಣದ ಲಿಂಕ್ https://rrb.digialm.com//EForms/configuredHtml/33128/97801/login.htmlಗೆ ಭೇಟಿ
ಹಂತ-2 ನಂತರ ಲಾಗಿನ್ ಮಾಡಿಕೊಳ್ಳಿ.
ಹಂತ-3 ಮುಂದೆ ಅಲ್ಲಿ”Candidate Response” ವಿಭಾಗದ ಮೇಲೆ ಒತ್ತಿ, ನಂತರ “Question Paper for the Assessment “RRB SECTION CONTROLLER CBT 1 11th Feb to 12th Feb 2026”. Click here to generate it” ಮೇಲೆ ಒತ್ತುವ ಮೂಲಕ ಕೀ ಉತ್ತರಗಳನ್ನು ಪರಿಶೀಲಿಸಬಹುದು.
ಆಕ್ಷೇಪಣೆಗಳಿದ್ದಲ್ಲಿ ಲಾಗಿನ್ ಮಾಡಿಕೊಂಡು, “Objection Form” ವಿಭಾಗದ ಮೂಲಕ ಸಲ್ಲಿಸಬಹುದು.