ರೈಲ್ವೆ ನೇಮಕಾತಿ ಮಂಡಳಿ (RRB)ಯು ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಟೆಕ್ನಿಷಿಯನ್ ಒಟ್ಟು 14298 ಹುದ್ದೆಗಳ ನೇಮಕಾತಿಯ ಕಂಪ್ಯೂಟರ್ ಆಧಾರಿತ ಆನ್‌ಲೈನ್ ಪರೀಕ್ಷೆ(CBT) ಪರೀಕ್ಷೆಯು 19, 20, 23, 24, 26, 28 & 29, 30 ಡಿಸೆಂಬರ್ 2024ವರೆಗೆ ನಡೆಯಲಿದೆ. ಈಗಾಗಲೇ ಪರೀಕ್ಷಾ ಕೇಂದ್ರ, ದಿನಾಂಕಗಳ ಕುರಿತು ತಿಳಿದುಕೊಳ್ಳಲು ಇಲಾಖೆಯು ತಿಳಿಸಿತ್ತು. ಇಂದು ಪ್ರವೇಶ ಪತ್ರ(RRB Technician Admit Card 2024)ವನ್ನು ಡೌನ್ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ತಿಳಿಸಿದೆ.
ಅಭ್ಯರ್ಥಿಗಳು ಪ್ರವೇಶ ಕಾರ್ಡ್ ಡೌನ್ಲೋಡ್ ಮಾಡಲು ಅಧಿಕೃತ ಜಾಲತಾಣದ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಹೇಗೆ ಡೌನ್ಲೋಡ್ ಮಾಡಿಕೊಳ್ಳಬಹುದು ಎಂಬುದನ್ನು ಈ ಕೆಳಗೆ ಹಂತ ಹಂತವಾಗಿ ವಿವರಿಸಲಾಗಿದೆ.