ರೈಲ್ವೆ ಇಲಾಖೆಯು ಖಾಲಿ ಇರುವ ಟೆಕ್ನಿಷಿಯನ್ 3(Technician-III) ಹುದ್ದೆಗಳ ನೇಮಕಾತಿಗಾಗಿ ರೈಲ್ವೆ ನೇಮಕಾತಿ ಮಂಡಳಿ (RRB)ಯು ಕಂಪ್ಯೂಟರ್ ಆಧಾರಿತ ಆನ್‌ಲೈನ್ ಪರೀಕ್ಷೆ(CBT) ಪರೀಕ್ಷೆಯನ್ನು ಡಿಸೆಂಬರ್ 20 ರಿಂದ 30 ಡಿಸೆಂಬರ್ 2024ವರೆಗೆ ನಡೆಯಿತು. ಇಂದು ಈ ಪರೀಕ್ಷೆಯ ಅಧಿಕೃತ ಕೀ ಉತ್ತರಗಳ(RRB Technician Answer Key 2024)ನ್ನು ಪ್ರಕಟಿಸಿದೆ.
ಪ್ರಶ್ನೆ ಪತ್ರಿಕೆ, ಪ್ರತಿಕ್ರಿಯೆಗಳು ಮತ್ತು ಆನ್‌ಲೈನ್ ಶುಲ್ಕ ಪಾವತಿ ಭರಿಸುವ ಮೂಲಕ ಪ್ರಶ್ನೆಗಳು, ಆಯ್ಕೆಗಳ ವಿರುದ್ಧ ಆಕ್ಷೇಪಣೆಗಳನ್ನು ಸಲ್ಲಿಸಲು 06 ಜನವರಿ 2025 ರಿಂದ 11 ಜನವರಿ 2025ವರೆಗೆ ಕಾಲಾವಕಾಶ ನೀಡಲಾಗಿದೆ.
How to Download RRB Technician Grade 3 Answer Key 2024-25
ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಕೀ ಉತ್ತರಗಳನ್ನು ಪರಿಶೀಲಿಸಿಕೊಳ್ಳಬಹುದು;
ಮೊದಲು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ(ಅಥವಾ ನಾವು ಕೆಳಗೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ)
ನಂತರ ಮುಖ ಪುಟದಲ್ಲಿ “Click Here for Viewing of Question Paper, Responses and keys & Raising of Objections if any to Questions/Options/Keys for CEN 02/2024 (Technician-III)” ಮೇಲೆ ಕ್ಲಿಕ್ ಮಾಡಿ.
ಮುಂದೆ ನಿಮ್ಮ “Registration Number” ಮತ್ತು “User Password (Date of Birth)” ಹಾಕುವ ಮೂಲಕ ನಿಮ್ಮ E-Call Letter ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.