RRB Technician Grade I Signal and Technician Grade III Application Status 2025
ರೈಲ್ವೆ ನೇಮಕಾತಿ ಮಂಡಳಿಯು ಸಿಇಎನ್ ನಂ.02/2025ರಡಿ ಅಧಿಸೂಚಿಸಿದ್ದ ಟೆಕ್ನಿಷಿಯನ್ ಗ್ರೇಡ್ I ಸಿಗ್ನಲ್ ಮತ್ತು ವಿವಿಧ ವರ್ಗಗಳ ಟೆಕ್ನಿಷಿಯನ್ ಗ್ರೇಡ್ III ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತಮ್ಮ ಅರ್ಜಿ ಸ್ಥಿತಿಯನ್ನು ಡಿ.8 ರಿಂದ ಪರಿಶೀಲಿಕೊಳ್ಳಬಹುದು.
ಅಭ್ಯರ್ಥಿಗಳು ಸಲ್ಲಿಸಿದ ಅರ್ಜಿಗಳ ಪರಿಶೀಲನೆ ಪೂರ್ಣಗೊಂಡಿದ್ದು, ಸ್ವೀಕೃತ ಹಾಗೂ ತಿರಸ್ಕೃತ ಅರ್ಜಿಗಳ ಮಾಹಿತಿಯನ್ನು http://www.rrbapply.gov.in/ನಲ್ಲಿ ಬಿಡುಗಡೆ ಮಾಡಲಾಗಿದೆ ಜೊತೆಗೆ ಅಭ್ಯರ್ಥಿಗಳು ನೋಂದಣಿ ಮಾಡಿರುವ ಮೊಬೈಲ್ ನಂಬರ್‌ಗೆ ಎಸ್‌ಎಮ್‌ಎಸ್ ಮೂಲಕವೂ ಮಾಹಿತಿ ಕಳುಹಿಸಲಾಗಿದೆ ಎಂದು ಮಂಡಳಿ ಹೊರಡಿಸಿದ ಪ್ರಕಟಣೆ ತಿಳಿಸಿದೆ.
How to Check RRB Technician Grade I Signal and Technician Grade III Application Status 2025
• ಆರ್ಆರ್ಬಿ ಅಧಿಕೃತ ವೆಬ್ಸೈಟ್ ಲಾಗಿನ್ ಲಿಂಕ್ https://www.rrbapply.gov.in/#/auth/homeಗೆ ಭೇಟಿ ನೀಡಿ.
• ಬಳಿಕ ಮೊಬೈಲ್ ಸಂಖ್ಯೆ/ ಇಮೇಲ್ ಐಡಿ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.
• ಮುಂದೆ “Application History” ಲಿಂಕ್ ಮೇಲೆ ಕ್ಲಿಕ್ ಮಾಡಿ.
• ನಂತರ ಅಲ್ಲಿ”CEN NO. 02/2025 for Recruitment of Technician Grade-I Signal and Various Categories of Technician Grade- III“ರ ಮುಂದೆ “Application Status” ಶಿರ್ಷೀಕೆಯಡಿ “Provisionally Accepted” ಅಥವಾ “Conditionally Accepted” ಅಥವಾ “Conditionally Rejected” ನೀಡಲಾಗಿರುತ್ತದೆ.
• ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಸ್ವೀಕರಿಸಲಾಗಿದೆಯೇ ಅಥವಾ ತಿರಸ್ಕರಿಸಲಾಗಿದೆಯೇ ಎಂದು ಈ ಮೇಲಿನ ರೀತಿ ಪರಿಶೀಲನೆ ಮಾಡಿಕೊಳ್ಳಬಹುದು.