ಕೇಂದ್ರ ರೈಲ್ವೆ (CR)ಯಲ್ಲಿ ಖಾಲಿ ಇರುವ ಗ್ರೂಪ್ ‘ಸಿ’ ಮತ್ತು ಗ್ರೂಪ್ ‘ಡಿ’ ಹುದ್ದೆಗಳನ್ನು ಕ್ರೀಡಾಕೋಟಾದ ಅಡಿಯಲ್ಲಿ ಭರ್ತಿ ಮಾಡಿಕೊಳ್ಳಲು ರೈಲ್ವೆ ನೇಮಕಾತಿ ಕೋಶವು ಆ.1ರಂದು ಅಧಿಸೂಚನೆಯನ್ನು ಹೊರಡಿಸಿ, ಅರ್ಜಿ ಸಲ್ಲಿಕೆ ಪ್ರಾರಂಭಿಸಿದೆ.
2025-26ನೇ ಸಾಲಿಗೆ ಕೇಂದ್ರ ರೈಲ್ವೆಯ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ 21 ಗ್ರೂಪ್-ಸಿ ಹಾಗೂ 38 ಗ್ರೂಪ್-ಡಿ ಸೇರಿ ಒಟ್ಟು 59 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು RRCCR ಅಧಿಕೃತ ವೆಬ್ಸೈಟ್ https://ibtexamination.com/RRCCR_01OF2025_SPORTSQUOTA/ಗೆ ಭೇಟಿ ನೀಡಿ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಸದರಿ ನೇಮಕಾತಿಗೆ ಬೇಕಾದ ವಿದ್ಯಾರ್ಹತೆ, ವಯಸ್ಸಿನ ಮಿತಿ, ಪ್ರಮುಖ ದಿನಾಂಕಗಳು, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ. ತಪ್ಪದೇ ಕೊನೆವರೆಗೂ ಓದಿ, ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.
• ಲೆವೆಲ್ 5/4 ಹುದ್ದೆಗಳಿಗೆ – ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಪೂರ್ಣಗೊಳಿಸಿರಬೇಕು.
• ಲೆವೆಲ್ 3/2 ಹುದ್ದೆಗಳಿಗೆ – ಮಾನ್ಯತೆ ಪಡೆದ ಮಂಡಳಿಯಿಂದ 12ನೇ (+2 ಹಂತ) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣ, OR ಮೆಟ್ರಿಕ್ಯುಲೇಷನ್(10ನೇ) ಉತ್ತೀರ್ಣ OR ಮೆಟ್ರಿಕ್ಯುಲೇಷನ್ ಉತ್ತೀರ್ಣ ಮತ್ತು NCVT/SCVT ಯಿಂದ ಅನುಮೋದಿಸಲ್ಪಟ್ಟ ITI ಪೂರ್ಣಗೊಳಿಸಿರಬೇಕು.
• ಲೆವೆಲ್ 1 ಹುದ್ದೆಗಳಿಗೆ – ಮಾನ್ಯತೆ ಪಡೆದ ಸಂಸ್ಥೆಯಿಂದ 10 ನೇ ತರಗತಿ ಉತ್ತೀರ್ಣ OR ಐಟಿಐ OR ಅದಕ್ಕೆ ಸಮಾನವಾದ ಅರ್ಹತೆ OR NCVT ಯಿಂದ ನೀಡಲಾದ ರಾಷ್ಟ್ರೀಯ ಶಿಷ್ಯವೃತ್ತಿ ಪ್ರಮಾಣಪತ್ರ (NAC) ಹೊಂದಿರಬೇಕು.
ವೇತನ ಶ್ರೇಣಿ:
ಲೆವೆಲ್ 1 ಹುದ್ದೆಗಳಿಗೆ – ಪ್ರ.ತಿಂ 18,000 ರಿಂದ 56,900/- ಲೆವೆಲ್ 3/2 ಹುದ್ದೆಗಳಿಗೆ – ಪ್ರ.ತಿಂ 19,900 ರಿಂದ 63,200/- ಲೆವೆಲ್ 5/4 ಹುದ್ದೆಗಳಿಗೆ – ಪ್ರ.ತಿಂ 25,500 ರಿಂದ 92,300/-
ವಯೋಮಿತಿ:
01-01-2026 ರಂತೆ;
ಕನಿಷ್ಠ ಮಿತಿ 18 ವರ್ಷಗಳು
ಗರಿಷ್ಠ ಮಿತಿ 25 ವರ್ಷಗಳು
ಆಯ್ಕೆ ವಿಧಾನ:
ದಾಖಲೆ ಪರಿಶೀಲನೆ
ಕ್ರೀಡಾ ಪ್ರಯೋಗ/ಫಿಟ್ನೆಸ್ ಪರೀಕ್ಷೆ
ವೈದ್ಯಕೀಯ ಪರೀಕ್ಷೆ
ಅರ್ಜಿ ಶುಲ್ಕ:
ಪ.ಜಾತಿ, ಪ.ಪಂಗಡ, ಪಿಡಬ್ಲ್ಯೂಡಿ, ಮಾಜಿ ಸೈನಿಕ, ಅಲ್ಪಸಂಖ್ಯಾತ, ಮಹಿಳಾ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ – 250ರೂ.
ಸಾಮಾನ್ಯ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ – 500ರೂ.
How to Apply for RRC CR Sports Quota Recruitment 2025
ಅರ್ಜಿ ಸಲ್ಲಿಸಲು ಈ ಕೆಳಗಿನ ವಿಧಾನ ಅನುಸರಿಸಿ;
• RRCCR ಅಧಿಕೃತ ವೆಬ್ಸೈಟ್ https://ibtexamination.com/RRCCR_01OF2025_SPORTSQUOTA/ ಗೆ ಭೇಟಿ ನೀಡಿ.
Rrc Central Railway R Sports Quota Online Form 2025
• ನೋಂದಣಿ ಸಂಖ್ಯೆ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ ಅಥವಾ ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ.
• *2025-26ನೇ ಸಾಲಿಗೆ ಮುಕ್ತ ಜಾಹೀರಾತು ಕ್ರೀಡಾ ಕೋಟಾದ ಅಡಿಯಲ್ಲಿ ನೇಮಕಾತಿ* – ಅರ್ಜಿ ನಮೂನೆ ಆಯ್ಕೆ ಮಾಡಿ.
• ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ ನಮೂದಿಸಿ, ಭಾವಚಿತ್ರ, ಸಹಿ ಹಾಗೂ ಅಗತ್ಯ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
• ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿ ಮಾಡಿ. ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.
• ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.
Very good