ಕೇಂದ್ರ ರೈಲ್ವೆ (CR) ಕ್ರೀಡಾಕೋಟಾದಡಿಯಲ್ಲಿ ವಿವಿಧ ಹುದ್ದೆಗಳ ಭರ್ತಿ, ಅರ್ಜಿ ಸಲ್ಲಿಕೆ ಪ್ರಾರಂಭ

Published on:

ಕೇಂದ್ರ ರೈಲ್ವೆ (CR)ಯಲ್ಲಿ ಖಾಲಿ ಇರುವ ಗ್ರೂಪ್ ‘ಸಿ’ ಮತ್ತು ಗ್ರೂಪ್ ‘ಡಿ’ ಹುದ್ದೆಗಳನ್ನು ಕ್ರೀಡಾಕೋಟಾದ ಅಡಿಯಲ್ಲಿ ಭರ್ತಿ ಮಾಡಿಕೊಳ್ಳಲು ರೈಲ್ವೆ ನೇಮಕಾತಿ ಕೋಶವು ಆ.1ರಂದು ಅಧಿಸೂಚನೆಯನ್ನು ಹೊರಡಿಸಿ, ಅರ್ಜಿ ಸಲ್ಲಿಕೆ ಪ್ರಾರಂಭಿಸಿದೆ.

2025-26ನೇ ಸಾಲಿಗೆ ಕೇಂದ್ರ ರೈಲ್ವೆಯ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ 21 ಗ್ರೂಪ್-ಸಿ ಹಾಗೂ 38 ಗ್ರೂಪ್-ಡಿ ಸೇರಿ ಒಟ್ಟು 59 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು RRCCR ಅಧಿಕೃತ ವೆಬ್ಸೈಟ್ https://ibtexamination.com/RRCCR_01OF2025_SPORTSQUOTA/ಗೆ ಭೇಟಿ ನೀಡಿ. ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಸದರಿ ನೇಮಕಾತಿಗೆ ಬೇಕಾದ ವಿದ್ಯಾರ್ಹತೆ, ವಯಸ್ಸಿನ ಮಿತಿ, ಪ್ರಮುಖ ದಿನಾಂಕಗಳು, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ. ತಪ್ಪದೇ ಕೊನೆವರೆಗೂ ಓದಿ, ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಆಗಸ್ಟ್ 01 2025
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಆಗಸ್ಟ್ 31, 2025

ಶೈಕ್ಷಣಿಕ ಅರ್ಹತೆ:

• ಲೆವೆಲ್ 5/4 ಹುದ್ದೆಗಳಿಗೆ – ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಪೂರ್ಣಗೊಳಿಸಿರಬೇಕು.

• ಲೆವೆಲ್ 3/2 ಹುದ್ದೆಗಳಿಗೆ – ಮಾನ್ಯತೆ ಪಡೆದ ಮಂಡಳಿಯಿಂದ 12ನೇ (+2 ಹಂತ) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣ, OR ಮೆಟ್ರಿಕ್ಯುಲೇಷನ್(10ನೇ) ಉತ್ತೀರ್ಣ OR ಮೆಟ್ರಿಕ್ಯುಲೇಷನ್ ಉತ್ತೀರ್ಣ ಮತ್ತು NCVT/SCVT ಯಿಂದ ಅನುಮೋದಿಸಲ್ಪಟ್ಟ ITI ಪೂರ್ಣಗೊಳಿಸಿರಬೇಕು.

• ಲೆವೆಲ್ 1 ಹುದ್ದೆಗಳಿಗೆ – ಮಾನ್ಯತೆ ಪಡೆದ ಸಂಸ್ಥೆಯಿಂದ 10 ನೇ ತರಗತಿ ಉತ್ತೀರ್ಣ OR ಐಟಿಐ OR ಅದಕ್ಕೆ ಸಮಾನವಾದ ಅರ್ಹತೆ OR NCVT ಯಿಂದ ನೀಡಲಾದ ರಾಷ್ಟ್ರೀಯ ಶಿಷ್ಯವೃತ್ತಿ ಪ್ರಮಾಣಪತ್ರ (NAC) ಹೊಂದಿರಬೇಕು.

ವೇತನ ಶ್ರೇಣಿ:

ಲೆವೆಲ್ 1 ಹುದ್ದೆಗಳಿಗೆ – ಪ್ರ.ತಿಂ 18,000 ರಿಂದ 56,900/-
ಲೆವೆಲ್ 3/2 ಹುದ್ದೆಗಳಿಗೆ – ಪ್ರ.ತಿಂ 19,900 ರಿಂದ 63,200/-
ಲೆವೆಲ್ 5/4 ಹುದ್ದೆಗಳಿಗೆ – ಪ್ರ.ತಿಂ 25,500 ರಿಂದ 92,300/-

ವಯೋಮಿತಿ:

01-01-2026 ರಂತೆ;

  • ಕನಿಷ್ಠ ಮಿತಿ 18 ವರ್ಷಗಳು
  • ಗರಿಷ್ಠ ಮಿತಿ 25 ವರ್ಷಗಳು

ಆಯ್ಕೆ ವಿಧಾನ:

  • ದಾಖಲೆ ಪರಿಶೀಲನೆ
  • ಕ್ರೀಡಾ ಪ್ರಯೋಗ/ಫಿಟ್ನೆಸ್ ಪರೀಕ್ಷೆ
  • ವೈದ್ಯಕೀಯ ಪರೀಕ್ಷೆ

ಅರ್ಜಿ ಶುಲ್ಕ:

  • ಪ.ಜಾತಿ, ಪ.ಪಂಗಡ, ಪಿಡಬ್ಲ್ಯೂಡಿ, ಮಾಜಿ ಸೈನಿಕ, ಅಲ್ಪಸಂಖ್ಯಾತ, ಮಹಿಳಾ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ – 250ರೂ.
  • ಸಾಮಾನ್ಯ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ – 500ರೂ.

How to Apply for RRC CR Sports Quota Recruitment 2025

ಅರ್ಜಿ‌ ಸಲ್ಲಿಸಲು ಈ ಕೆಳಗಿನ ವಿಧಾನ ಅನುಸರಿಸಿ;

• RRCCR ಅಧಿಕೃತ ವೆಬ್ಸೈಟ್ https://ibtexamination.com/RRCCR_01OF2025_SPORTSQUOTA/ ಗೆ ಭೇಟಿ ನೀಡಿ.

Rrc Central Railway R Sports Quota Online Form 2025
Rrc Central Railway R Sports Quota Online Form 2025

• ನೋಂದಣಿ ಸಂಖ್ಯೆ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ ಅಥವಾ ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ.

• *2025-26ನೇ ಸಾಲಿಗೆ ಮುಕ್ತ ಜಾಹೀರಾತು ಕ್ರೀಡಾ ಕೋಟಾದ ಅಡಿಯಲ್ಲಿ ನೇಮಕಾತಿ* – ಅರ್ಜಿ ನಮೂನೆ ಆಯ್ಕೆ ಮಾಡಿ.

• ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ ನಮೂದಿಸಿ, ಭಾವಚಿತ್ರ, ಸಹಿ ಹಾಗೂ ಅಗತ್ಯ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.

• ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿ ಮಾಡಿ. ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.

• ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.

Important Direct Links:

RRC CR Sports Quota Official Notification PDF Download
Online Application Form LinkApply Now
Official Webitewww.rrccr.com
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

4 thoughts on “ಕೇಂದ್ರ ರೈಲ್ವೆ (CR) ಕ್ರೀಡಾಕೋಟಾದಡಿಯಲ್ಲಿ ವಿವಿಧ ಹುದ್ದೆಗಳ ಭರ್ತಿ, ಅರ್ಜಿ ಸಲ್ಲಿಕೆ ಪ್ರಾರಂಭ”

Leave a Comment